ಹಂಪಸಾಗರದಲ್ಲಿ ಗ್ರಾಮದೇವತೆ ಶ್ರೀಉರಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ 3 ರಲ್ಲಿಗ್ರಾಮದೇವತೆ ಶ್ರೀಉರಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು .ಮಾಧ್ಯಮದೊಂದಿಗೆ ಮಾತನಾಡಿದ .ಊರಿನ ಹಿರಿಯರಾದ ಕೊಟ್ರೇಶಪ್ಪ ಕಡ್ಲಬಾಳು .ಸುಮಾರು 16 ವರ್ಷಗಳ ನಂತರ ಹಬ್ಬವನ್ನು ಆಚರಿಸಲಾಗುತ್ತಿದೆ .ಬಹಳ ಸಂಪ್ರದಾಯಬದ್ಧವಾಗಿ ಈ ಹಬ್ಬವನ್ನು ಆಚರಿಸಲಗುತಿದೆ.ಉರಮ್ಮ ದೇವಿಗೆ ಬಣ್ಣ ಕೊಡುವ ಕಾರ್ಯಕ್ರಮ ಮುಗಿದ ಮೇಲೆ ಶ್ರೀ ಊರಮ್ಮದೇವಿ ಯನ್ನು ಹೊಳೆ ಹತ್ತಿರ ಕರೆದುಕೊಂಡು ಹೋಗಿ ಪೂಜಾ ಕೈ ಕಾರ್ಯಗಳನ್ನು ಮಾಡಿ ಮುಗಿಸಿದ ನಂತರ ಎಲ್ಲಾ ವಿಶ್ವಕರ್ಮ ಸಮಾಜದ ಬಂಧುಗಳು ಬೇರೆ ಯಾರಿಗೂ ಕೊಡದೆ 4 ಕಿಲೋ ಮೀಟರ್ ಮಡಿ ಹುಡಿಯಿಂದ ತಾಯಿಯನ್ನು . ಮಂಗಳ ವಾದ್ಯಗಳಗಳೊಂದಿಗೆ . ಡೊಳ್ಳು ರುಮಿ ಮಜಲು ಮಾಡುತ್ತಾ ಚೌತಿ ಕಟ್ಟೆಯವರೆಗೂ ತೆಗೆದುಕೊಂಡು ಬಂದು .ಕಟ್ಟೆಯಲ್ಲಿ ಕೂಡಿಸುತ್ತಾರೆ ತದ ನಂತರ ರಾತ್ರಿ ಮದ್ದು ಸುಡುವ ಕಾರ್ಯಕ್ರಮವು ರುತ್ತದೆ ಎಂದು ಹಬ್ಬದ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು .ಸನ್ಮಾನ ಶಾಸಕರು ಪಿ.ಟಿ.ಪರಮೇಶ್ ನಾಯ್ಕ್ ರವರು ಶ್ರೀ ಉರಮ್ಮ ದೇವಿ ದರ್ಶನ ಪಡೆದು ಆಶೀರ್ವಾದ ಪಡೆದರು .ತದನಂತರ ಉರಮ್ಮ ದೇವರ ಆಜ್ಞೆಯಂತೆ .ಗುಡಿಗೆ ಗೋಪುರವನ್ನು ಕಟ್ಟಿಸಿ ಕೊಡುವುದಾಗಿ ಮತ್ತು 1ಕೆಜಿ 100 ಗ್ರಾಂ ಬೆಳ್ಳಿಯ ಕಡಗವನ್ನು ಮಾಡಿಸಿಕೊಡುವುದಾಗಿ ಊರಿನ ದೈವಸ್ಥರಿ ಗೆ ಮಾತನ್ನು ನೀಡಿದರು ಇದರಲ್ಲಿ ಭಾಗವಹಿಸಿದ್ದವರು .ಹಂಪಸಾಗರ 3ರ ದೈವಸ್ಥರು ಹಿರಿಯರು ಹಿರಿಯರು ಯುವಕರು ಮಹಿಳೆಯರು .ಉಪಸ್ಥಿತಿಯಲ್ಲಿದ್ದರು…

ವರದಿ. ಧನಂಜಯ್, ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend