ಗಾಂಧಿನಗರಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಭೇಟಿ – ಶಾಸಕ ನಾಡಗೌಡ.
ಸಿಂಧನೂರು:ಮೇ.08 ತಾಲೂಕಿನ ಗಾಂಧಿ ನಗರಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭೆ ಸದಸ್ಯರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೆಲಿಕಾಪ್ಟರ್ ಮೂಲಕ ಭಾನುವಾರ ಬೆಳಿಗ್ಗೆ 9:30ಕ್ಕೆ ನಡೆಯುವ ಸ್ಪಟಿಕ ಆತ್ಮಲಿಂಗ ಲಕ್ಷ ಶಿವಲಿಂಗ ಮಹಾಗಿರಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು
ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಇತಿಹಾಸದಲ್ಲಿಯೇ ಕಾಣದ ಬೆಲ್ಜಿಯಂ ನಿಂದ ತಂದ ಸುಮಾರು1ಕೋಟಿ ರೂಪಾಯಿ ಬೆಲೆಯ ಸ್ಪಟಿಕದ ಆತ್ಮ ಲಿಂಗ ಹಾಗೂ ಸಹಸ್ರ ಲಿಂಗಗಳ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಎಚ್ ಡಿ ದೇವೇಗೌಡ ಅವರು ಆಗಮಿಸಲಿದ್ದಾರೆ. ತಾಲೂಕಿನ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿ ಅವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮ ಮುಗಿದ ನಂತರ 12: 00 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ
ಎಚ್ ಎ ಎಲ್ ವಿಮಾನ ನಿಲ್ದಾಣ ಬೆಂಗಳೂರುಗೆ ವಾಪಸ್ಸು ತೆರಳುವವರು ಎಂದು ತಿಳಿಸಿದರು.
ಮೇ.4 ರಿಂದ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು ಮೇ.8 ರಂದು ಲಕ್ಷ ಸ್ಫಟಿಕ ಶಿವಲಿಂಗ ಪ್ರತಿಷ್ಠಾಪನೆ ನೆರವೆರಲಿದೆ. ಸರ್ಕಾರದ ಸಹಾಯ ಇಲ್ಲಧೆ ಭಾಸ್ಕರ ರಾವ ಭಕ್ತರ ನೆರವಿನಿಂದ ಒಂದು ಕೋಟಿ ಹಣದಲ್ಲಿ ಸ್ಫಟಿಕ ಲಕ್ಷ ಶಿವಲಿಂಗ ಮಾಹಾಗೀರಿ ನಿರ್ಮಿಸಿದ್ದು ಇದು ದೇಶದಲ್ಲಿಯೇ ಮಾದರಿ ಶಿವಲಿಂಗವಾಗಿದೆ ಬಹುದೂರ ಹೋಗದೆ ಹತ್ತಿರದ ಗಾಂಧಿನಗರದಲ್ಲಿ ಶಿವಲಿಂಗ ದರ್ಶನ ಪಡೆಯುವ ಭಾಗ್ಯವನ್ನು ಭಾಸ್ಕರ ರಾವ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮುಂದಿನ ದೀನ ಮಾನಗಳಲ್ಲಿ ಗಾಂಧಿನಗರ ಸ್ಫಟಿಕ ಲಿಂಗ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರೆ ಸ್ಥಳವಾಗಲಿದೆ ಎಂದರು.
ಬಸವಜಯಂತಿ ಹಾಗೂ ರಂಜಾನ ಹಬ್ಬವನ್ನು ಹಿಂದೂ ಮುಸ್ಲಿಮ ಸಹೋದರರು ಒಂದಾಗಿ ಆಚರಿಸುವ ಮೂಲಕ ರಾಜ್ಯಕ್ಕೆ ಮಾದರಿ ಕಾರ್ಯಕ್ರಮಮಾಡಿದ್ದದಾರೆ. ಅದಕ್ಕಾಗಿ ತಾಲ್ಲೂಕಿನ ಎಲ್ಲಾ ಸಮಾಜದವರಿಗೆ ಅಬಿನಂದನೆಗಳನ್ನು ಶಾಸಕ ವೆಂಕಟರಾವ ನಾಡಗೌಡ ತಿಳಿಸದರು.
ಜನತಾ ಜಲಾದಾರೆ ಕಾರ್ಯಕ್ರಮ ರಾಜ್ಯದಲ್ಲಿ 15 ವಾಹನಗಳು ಸಂಚಾರ ಮಾಡಿ ತಂದಂತ ಜಲದಾರೆಯನ್ನು ಮೇ 13ರಂದು ನಡೆಯುವ ಬೆಂಗಳೂರಿನ ನೆಲಮಂಗಲ ಹತ್ತಿರದ ವಿಶಾಲವಾದ 60 ಎಕರೆ ಮೈದಾನದಲ್ಲಿ ಸುಮಾರು 5ಲಕ್ಷಜನರನ್ನು ಸೇರಿಸುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಿಂದ 10 ಬಸ್ಸಗಳು ಮತ್ತು 50 ರಿಂದ 60 ಪ್ರಮುಖ ಕಾರ್ಯಕರ್ತರ ವಾಹನಗಳನ್ನು ತೆಗೆದುಕೊಂಡು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುತೇವೆ.ಜೆಡಿಎಸ್ ಮುಗಿದು ಹೋಯಿತು ಇಲ್ಲವೇ ಇಲ್ಲಾ ಅನ್ನುವರಿಗೆ ಒಂದು ದಿಕ್ಕನ್ನು ಆ ಕಾರ್ಯಕ್ರಮತೋರಿಸುತ್ತದೆ.
ಬೇರೆ ಬೇರೆ ರಾಜ್ಯದಿಂದ ಗಂಗಾ ಆರತಿ ಮಾಡುವ ಪಂಡಿತರ ತಂಡವನ್ನು ಕರೆ ತಂದು ಈ ಕಾರ್ಯಕ್ರಮ ಯಶಸ್ವಿ ಮಾಡುವದಕ್ಕೆ ತಯಾರಿ ಮಾಡಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ್ ನಾಡಗೌಡ, ಮುಖಂಡರಾದ ಎಮ್ ಡಿ ನದಿ ಮುಲ್ಲಾ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ, ದಾಸರಿ ಸತ್ಯನಾರಾಯಣ, ಅಶೋಕ್ ಗೌಡ ಗದ್ರಟಗಿ, ದೇವೇಂದ್ರ ಗೌಡ ಹೊಸಳ್ಳಿ, ರಂಗರಡ್ಡಿ ಸಾಸಲಮಾರಿ, ವೀರೇಶ್ ನಾಡಗೌಡ, ಸೈಯದ್ ಆಸಿಫ್ ಇತರರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
