;

ಕಳಪೆ ಮಟ್ಟದ ಕಾಮಗಾರಿ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ : ನಾಡಗೌಡ…!!!

ಕಳಪೆ ಮಟ್ಟದ ಕಾಮಗಾರಿ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ : ನಾಡಗೌಡ.

ಸಿಂಧನೂರು : ತಾಲೂಕಿನಲ್ಲಿ ನಡೆದಿರುವ 24×7 ಕುಡಿಯುವ ನೀರಿನ ಯೋಜನೆ,ಸಿಸಿ ರಸ್ತೆ ಮತ್ತು ಯುಜಿಡಿ ಕಾಮಗಾರಿಯಲ್ಲಿ ಕಳಪೆಯಾಗಿದೆ ಎಂಬ ಬಸನಗೌಡ ಬಾದರ್ಲಿ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನೆಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಇಂದು ಶಾಸಕರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ತಮ್ಮದೇ ಕಾಂಗ್ರೆಸ್ ಪಕ್ಷದ ಬಹುಮತದ ಆಡಳಿತ ಸರ್ಕಾರ ರಚಿಸಿತ್ತು, ತಾಲೂಕಿನಲ್ಲಿ ಕೂಡ ಕಾಂಗ್ರೆಸ್ ಪಕ್ಷದ ಶಾಸಕರೇ ಅಧಿಕಾರದಲ್ಲಿದ್ದರು, ಅವರಿಗೆ ಏಕೆ ಮುಂದಾಲೋಚನೆ ಇರಲಿಲ್ಲ, ಬಿಡುಗಡೆಯಾದ ಅನುದಾನವನ್ನು ಸಂಪೂರ್ಣವಾಗಿ ಯಾಕೆ ಬಳಸಿಕೊಂಡು ಕಾಮಗಾರಿಗಳನ್ನು ಮುಗಿಸಲಿಲ್ಲ, ನೀವು ಮಾಡಿದ ಆರೋಪಗಳಿಗೆ ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿಯವರೇ ನೇರ ಹೋಣೆಯಾಗುತ್ತಾರೆ.ನನ್ನ ಮೇಲೆ ಆರೋಪ ಮಾಡುವ ಬಸನಗೌಡ ಬಾದರ್ಲಿ ಅವರು ಆಗ ಯಾವ ಪಕ್ಷದಲ್ಲಿ ಇದ್ದೀರಿ ಎಂದು ಉತ್ತರ ನೀಡಬೇಕು ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿಯೇ ಅತಿ ಹೆಚ್ಚು ಕುಡಿಯುವ ನೀರಿನ ಕೆರೆಗಾಗಿ 258 ಎಕರೆ ಭೂಮಿಯನ್ನು ಪಾರದರ್ಶಕವಾಗಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಖರೀದಿ ಮಾಡಿದ್ದೇವೆ. ಹೆಚ್ಚುವರಿಯಾಗಿ 35 ಕೋಟಿ ಅನುದಾನದಲ್ಲಿ 15 ಕೋಟಿ ಪಿಡಬ್ಲ್ಯೂಡಿ, 10 ಕೋಟಿ ಪಂಚಾಯತ್ ರಾಜ್ ಇಲಾಖೆ ಮತ್ತು 10 ಕೋಟಿ ಉಪ್ಪಳ – ಗಿಣಿವಾರ ಸೇತುವೆ ನಿರ್ಮಾಣಕ್ಕೆ ಬಿಡುಗಡೆಯಾಗಿದೆ.ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಬಗ್ಗೆ ಮುಖ್ಯಂತ್ರಿಗಳ ಗಮನಕ್ಕೆ ತರಲಾಗಿದೆ,ಇವುಗಳೆಲ್ಲವೂ ನಿಮ್ಮ ಕಣ್ಣಿಗೆ ಕಾಣುವುದಿಲ್ಲವೆ ? ನಾನು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಸಹಿಸದೆ ಸುಳ್ಳು ಆರೋಪ ಮಾಡುತ್ತೀರಿ, ನೀವು ಮಾಡಿರುವ ಆರೋಪಗಳು ದಾಖಲೆ ಸಮೇತ ರುಜುವಾತು ಮಾಡಿದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ, ಆದರೆ ನೀವು ಆರೋಪ ಮಾಡಿದ್ದು ಸುಳ್ಳಾದರೆ ತಮ್ಮ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಿರಾ ಎಂದು ಪ್ರಶ್ನಾರ್ಥಕವಾಗಿ ಮಾತನಾಡಿದರು.

ಬಸನಗೌಡ ಬಾದರ್ಲಿ ಅವರು ಭವಿಷ್ಯದ ನಾಯಕರು ಅದನ್ನು ನಾವು ಒಪ್ಪುತ್ತೇವೆ, ಅವರಿಗೆ ಅಭಿನಂದನೆಗಳು ಕೂಡಾ ಸಲ್ಲಿಸುತ್ತೇನೆ.ಆದರೆ ಯಾರ ಬಗ್ಗೆಯಾದರೂ ಆರೋಪ ಮಾಡುವ ಮುನ್ನ ನಿಖರವಾದ ದಾಖಲೆ ಸಮೇತ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ವಿರೋದ ಪಕ್ಷದವರು ಕೆಲಸ ಮಾಡುವವರಿಗೆ ಆರೋಪ ಮತ್ತು ಟೀಕೆ ಮಾಡುವುದು ಸಹಜ ಸನ್ಮಾನ ಮಾಡಲು ಸಾಧ್ಯವೇ ? ಭತ್ತ ಖರೀದಿ ಕೇಂದ್ರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಕಳೆದ ಅಧಿವೇಶನದಲ್ಲಿ ಚರ್ಚೆ ಮಾಡಿದ್ದೇನೆ. ಕೇಂದ್ರ ಸರ್ಕಾರ ಜೋಳ, ರಾಗಿ,ಗೋದಿ, ರೈತರಿಂದ ಖರೀದಿ ಮಾಡಿ ಅದನ್ನು ನ್ಯಾಯಬೆಲೆ ಅಂಗಡಿಯ ಮೂಲಕ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ, ಆದರೆ.ಭತ್ತಕ್ಕೆ ಈ ರೀತಿಯ ಅವಕಾಶಗಳು ಇಲ್ಲ ಎಂದು ಹೇಳಿದರು.

ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ ಮಾತನಾಡಿ ಬಸನಗೌಡ ಬಾದರ್ಲಿಯವರು ನಮ್ಮ ಮೇಲೆ ಆರೋಪ ಮಾಡಿದ್ದಾರೋ ಅಥವಾ ಪರೋಕ್ಷವಾಗಿ ತಮ್ಮದೇ ಪಕ್ಷದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಬಗ್ಗೆ ಮಾತನಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಮ್ ಡಿ ನದಿ ಮುಲ್ಲಾ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ, ದಾಸರಿ ಸತ್ಯನಾರಾಯಣ, ಅಶೋಕ್ ಗೌಡ ಗದ್ರಟಗಿ, ದೇವೇಂದ್ರಗೌಡ ಹೊಸಳ್ಳಿ,ರಂಗರಡ್ಡಿ ಸಾಸಲಮಾರಿ, ವೀರೇಶ್ ನಾಡಗೌಡ, ಸೈಯದ್ ಆಸಿಫ್ ಇತರಿದ್ದರು…

 

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;