ಇಟ್ಟಿಗಿ ಗ್ರಾಮದಲ್ಲಿ ದನದ ಕೊಟ್ಟಿಗೆ ಪರಶೀಲಿಸಿದ ತಾ.ಪಂ.ಅಧಿಕಾರಿ ಶ್ರೀ ಸೋಮಶೇಖರ್ ಸರ್.
ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ 6/5/2022ರ ಶುಕ್ರವಾರ ಇಟ್ಟಿಗಿಯ ಬಳಿಗಾರ ವೀರಮ್ಮ ಗಂಡ ಲೇಟ್ ವಿರೂಪಾಕ್ಷಪ್ಪ ಇವರ ಜಾಗದಲ್ಲಿ ದನದ ಕೊಟ್ಟಿಗೆ ನಿರ್ಮಾಣವು ಗ್ರಾ ಪಂ ವತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಡಿ ನಿರ್ಮಿಸಲಾಗಿದ್ದು ಇದಕ್ಕೆ ಯೋಜನೆಯ 19625ರೂ ಗಳ ಸಹಾಯ ಧನದ ಜೊತೆಗೆ ಫಲಾನುಭವಿಯ ವಂತಿಕೆ ಸೇರಿ ಸುಮಾರು 1ಲಕ್ಷದ 80 ಸಾವಿರ ರೂ ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣವಾಗಿದೆಂದು ವೀರಮ್ಮ ಇವರ ಪುತ್ರ ನಾಗರಾಜ್ ರವರು ಸ್ಥಳಕ್ಕೆ ಭೇಟೆ ನೀಡಿದ ಹಡಗಲಿ ತಾ. ಪಂ ಅಧಿಕಾರಿ ಸೋಮಶೇಖರ್ ಸರ್ ರವರಿಗೆ ತಿಳಿಸಿರುತ್ತಾರೆ..ಮಳೆಗಾಲದಲ್ಲಿನ ಗಾಳಿ ಮಳೆಯ ಗುಡುಗು ಸಿಡಿಲಿಗೆ 2 ಹಸು ಗಳನ್ನು ಸಾವಿಗೀಡಾಗಿದ್ದನ್ನು ನೋಡಿ ದನಗಳ ಸಂರಕ್ಷಣೆಗಾಗಿ ಇಟ್ಟಿಗಿ ಗ್ರಾಮ ಪಂಚಾಯತಿಯ ನೆರವಿನೊಂದಿಗೆ ರೀತಿ ಕಟ್ಟಿಸಲು ಸಾಧ್ಯವಾಯಿತು. ಸಕಾಲಕ್ಕೆ ನಮಗೆ ಧನ ಸಹಾಯವಾದರೆ ಅಷ್ಟೇ ಸಾಕು ಆದಷ್ಟು ಬೇಗ ನಿರ್ಮಿಸಿದ ಹಣ ಬಿಡುಗಡೆ ಮಾಡಬೇಕೆಂದು ಸಹ ಭಿನ್ನವಿಸಿಕೊಂಡರು. ಇದಕ್ಕೆ ಆದಷ್ಟು ಬೇಗ ನಿಮ್ಮ ದುಡ್ಡು ಬರುತ್ತೆ ನೀವು ನರೇಗಾ ಯೋಜನೆಯಡಿ ಒಬ್ಬ ಫಲಾನುಭವಿಯು ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದು ನಿರ್ಮಾಣ, ಬೋರ್ವೆಲ್ ರಿಚಾರ್ಜ್, ತೋಟಗಾರಿಕೆ ಇಲಾಖೆಯಿಂದ ವಿವಿಧ ವಾಣಿಜ್ಯ ಬೆಳೆಗಳನ್ನು ರೈತರ ಹೊಲದಲ್ಲಿ ಬೆಳೆಯ ಬಹುದು ಹೀಗೆ ಸುಮಾರು 250000ರೂ ನೆರವನ್ನು ಸರ್ಕಾರದಿಂದ ಪಡೆಯಬಹುದು ಗ್ರಾ ಪಂ ಗೆ ಅರ್ಜಿ ಸಲ್ಲಿಸಿ ಯೋಜನೆಯ ಅನುಕೂಲ ಪಡೆದು ಕೊಳ್ಳಿ ಎಂದು ಸೋಮಶೇಖರ್ ಸರ್ ತಿಳಿಸಿದರು.ಈ ಸಂಧರ್ಭದಲ್ಲಿ ತಾ ಪಂ ಯ ತಾಲೂಕು ತಾಂತ್ರಿಕ ಸಹಾಯಕರಾದ ರವಿಕುಮಾರ್, ಐ ಇ ಸಿ ಕೋ ಆರ್ಡಿನೇಟರ್ ವಿನಯ್ ಸರ್ ಗ್ರಾ ಪಂ ಟಿ ಎ ಜ್ಯೋತಿ ಮೇಡಂ, ಕ್ಲರ್ಕ್ ಕಂ ಡಿ ಇ ಒ ಪ್ರಕಾಶ್, ಬಿ ಎಫ್ ಟಿ ರೇಣುಕೇಶ್ ಮತ್ತು ನರೇಗಾ ರಾಯಭಾರಿ ಟಿಪ್ಪು ಸುಲ್ತಾನ್ ಜೊತೆಯಲ್ಲಿ ಇದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
