ಅದ್ದೂರಿಯಾಗಿ ಜರುಗಿದ ಬೂತಲದಿನ್ನಿ ಹಳ್ಳಿ ಬಸವೇಶ್ವರ ಜಾತ್ರೆ.
ಸಿಂಧನೂರು : ತಾಲ್ಲೂಕಿನ ಭೂತಲದಿನ್ನಿ ಗ್ರಾಮದ ಆರಾಧ್ಯ ದೈವ ಹಳ್ಳಿ ಬಸವಣ್ಣನ ಜಾತ್ರೆ ಅತ್ಯಂತ ವೈಭವದಿಂದ ನಡೆಯಿತು. ಕೊರೋನಾ ಮಹಾಮಾರಿ ಅಟ್ಟಹಾಸದಿಂದ ಎರಡೂ ವರ್ಷಗಳ ಕಾಲ ಜಾತ್ರೆ ಹದ್ದೂರಿಯಾಗಿ ಮಾಡಿರಲಿಲ್ಲ ಈ ವರ್ಷ ಮಾಡುತ್ತಿರುವುದು ಗ್ರಾಮದ ಜನರಿಗೆ ಸಂತೋಷದ ವಿಷಯವಾಗಿದೆ. ಎಪ್ರಿಲ್ 17 ರಂದು ಪ್ರಾರಂಭವಾಗಿ ಮೇ 3 ರಂದು ಹೇಮರೆಡ್ಡಿ ಮಲ್ಲಮ್ಮನ ಪುರಾಣ ಮಂಗಲಗೊಂಡಿತ್ತು. ದಿನನಿತ್ಯ ಊರಿನ ಭಕ್ತರಿಂದ ದಾಸೋಹ ಕಾರ್ಯಕ್ರಮ ನಡೆಯಿತು.ಬಸವ ಜಯಂತಿಯ ದಿನದಂದು ಬೆಳಗ್ಗೆ ಮಹಿಳೆಯರು ಕುಂಭ ಕಳಸದೊಂದಿಗೆ ಗಂಗೆ ಸ್ಥಳಕ್ಕೆ ಅತ್ಯಂತ ವೈಭವದಿಂದ ಪುರವಂತರ ಜೊತೆಯಲ್ಲಿ ಹಾಗೂ ಕಂಪ್ಲಿಯ ವಾದ್ಯ ಮೇಳದೊಂದಿಗೆ ಯುವಕರು ಕುಣಿಯುತ್ತಾ ಗಂಗೆ ಸ್ಥಳ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ನಂತರ ಹರೇ ಶ್ರೀನಿವಾಸ ತಂಡದಿಂದ ಬೂತಲದಿನ್ನಿ ಮುದ್ದು ಮಕ್ಕಳು ಹಾಗೂ ಮಹಿಳೆಯರಿಂದ ಕೋಲಾಟ ಕಾರ್ಯಕ್ರಮ ನಡೆಯಿತು.ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿ ಮಕ್ಕಳ ಕೋಲಾಟವನ್ನು ನೋಡಿ ಸಂಭ್ರಮಿಸಿದರು.
ನಂತರ ಯುವಕರು ದಿವಂಗತ ಪುನೀತ್ ರಾಜಕುಮಾರ್ ಭಾವಚಿತ್ರ ಮೆರವಣಿಗೆ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸೂಚಿಸಿದರು ಸಂಜೆ 6:30 ಕ್ಕೆ ಶ್ರೀ ಹಳ್ಳಿ ಬಸವೇಶ್ವರ ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಬಿ. ಬಸವರಾಜಗೌಡ ಮಿತ್ರ ಮಂಡಳಿ ನಾಟ್ಯ ಸಂಘದಿಂದ ರಾತ್ರಿ 10:30 ಕ್ಕೆ ಭೂತಲದಿನ್ನಿ ರಂಗಭೂಮಿ ಕಲಾವಿದರಿಂದ ಸಿಡಿದೆದ್ದ ಸೂರ್ಯ-ಚಂದ್ರ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ನಾಟಕ ಉದ್ಘಾಟನೆಯನ್ನು ಶ್ರೀ ಸಿದ್ದರಾಮೇಶ್ವರ ಶರಣರು ವೆಂಕಟಗಿರಿ ಕ್ಯಾಂಪ್, ಹಾಗೂ ಶಾಸಕರ ಪುತ್ರ ಅಭಿಷೇಕ್ ನಾಡಗೌಡ,ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಶಿವನಗೌಡ ಗೊರೆಬಾಳ,
N ಅಮರೇಶ್, ಬಸವರಾಜ್ ಸ್ವಾಮಿ ಹಸಮಕಲ್, ಯಂಕನಗೌಡ ಪೊಲೀಸ್ ಪಾಟೀಲ್, ಮಹಮದ್ ಖಾಜಾಸಾಬ್ ಬಂಕದಮನೆ,
ಭೂತಲದಿನ್ನಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಗ್ರಾಮಸ್ಥರು ಭಾಗಿಯಾಗಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
