;

ಹಗರಿಬೊಮ್ಮನಹಳ್ಳಿ ರಾಮನಗರ ಪ್ರಥಮ ದರ್ಜೆಯ ಆವರಣದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ…!!!

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ, ದಿನಾಂಕ 29- 4 -2022, ಶುಕ್ರವಾರ, ಆರೋಗ್ಯ ಮೇಳವನ್ನು ಆಯೋಜಿಸಲಾಗಿತ್ತು.


ಈ ಆರೋಗ್ಯ ಮೇಳದಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳಾದ ಡಾಕ್ಟರ್ ಸುಜಾತ ಪಾಟೀಲರವರ ಮಾರ್ಗದರ್ಶನದಲ್ಲಿ ನಿರ್ಮಿಸಿದ ಆಯುಷ್ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯನ್ನು ಸನ್ಮಾನ್ಯ ಶಾಸಕರಾದ ಶ್ರೀಯುತ ಭೀಮಾನಾಯಕ ರವರು ಉದ್ಘಾಟನೆ ಮಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಸಲಿಂ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾಕ್ಟರ್ ಶಂಕರ್ ನಾಯಕ್, ತಹಸಿಲ್ದಾರ್ ಶ್ರೀಮತಿ ಶರಣಮ್ಮ, ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ ಶಿವರಾಜ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೋವಿಡ್ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಆಯುಷ್ ವೈದ್ಯಾಧಿಕಾರಿಗಳು ಸಲ್ಲಿಸಿದ ಅನುಪಮ ಸೇವೆಯನ್ನು ಇದೇ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರು ಮತ್ತು ಆರೋಗ್ಯ ಅಧಿಕಾರಿಗಳು ಸ್ಮರಿಸಿಕೊಂಡು, ತುಂಬು ಹೃದಯದಿಂದ ಶ್ಲಾಘಿಸಿದರು.

ಆಯುಷ್ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯಲ್ಲಿ ಆಯುಷ್ ಇಲಾಖೆಯ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಯಿತು. ದಿನಚರ್ಯೆ, ಋತುಚರ್ಯೆ ಯೋಗ, ಪ್ರಾಣಾಯಾಮ, ಧ್ಯಾನ, ಮುದ್ರೆಗಳು ಪೌಷ್ಟಿಕಾಹಾರ, ಸಿರಿಧಾನ್ಯಗಳು, ಮನೆಮದ್ದು, ಸೌಂದರ್ಯವರ್ಧಕಗಳು, ಮಧುಮೇಹ, ಡೆಂಗು, ಚಿಕನ್ ಗುನಿಯಾ ಮತ್ತು ಕೊರೋನಾ ರೋಗಗಳ ನಿಯಂತ್ರಣ, ರೋಗನಿರೋಧಕ ಶಕ್ತಿ ವರ್ಧಕ ಔಷಧಿಗಳು ಮತ್ತು ಇನ್ನಿತರ ಅಮೂಲ್ಯ ಮಾಹಿತಿಗಳನ್ನು ಒಳಗೊಂಡ ಆಕರ್ಷಕ ಭಿತ್ತಿಪತ್ರಗಳ ಪ್ರದರ್ಶನ ಮತ್ತು ಉಪಯುಕ್ತವಾದಂತಹ ಕರಪತ್ರಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ಆಯುಷ್ ಔಷಧಿಗಳ ವಿತರಣೆಯನ್ನು ಮಾಡಲಾಯಿತು. ಅನೇಕ ತಜ್ಞ ಅಲೋಪತಿ ವೈದ್ಯರು ಕೂಡ ಆಯುಷ್ ಚಿಕಿತ್ಸಾ ಕೊಠಡಿಗಳಿಗೆ ಹುಡುಕಿಕೊಂಡು ಬಂದು ಆಯುರ್ವೇದ ಔಷಧಿಗಳನ್ನು ಕೇಳಿ ಪಡೆಯುತ್ತಿದ್ದ ದೃಶ್ಯ ಬಹಳ ವಿಶೇಷವಾಗಿತ್ತು. ಆಯುಷ್ ಚಿಕಿತ್ಸಾ ಶಿಬಿರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಚಿಕಿತ್ಸಾ ಸೌಲಭ್ಯವನ್ನು ಪಡೆದರು.

ಈ ಆರೋಗ್ಯ ಮೇಳದಲ್ಲಿ ಆಯುಷ್ ವೈದ್ಯರಾದ ಡಾಕ್ಟರ್ ಕೆ ಹೆಚ್ ಗುರುಬಸವರಾಜ್, ಡಾಕ್ಟರ್ ಹಾಲಮ್ಮ, ಡಾಕ್ಟರ್ ಭೀಮನಗೌಡ, ಡಾಕ್ಟರ್ ವಿಜಯಕುಮಾರ್ ಮತ್ತು ಡಾಕ್ಟರ್ ಮರುಳಸಿದ್ದನಗೌಡ ಹಾಗೂ ಆಯುಷ್ ಇಲಾಖೆಯ ಸಿಬ್ಬಂದಿ ವರ್ಗದವರು ಸೇವೆಯನ್ನು ಸಲ್ಲಿಸಿದರು.

ಆಯುಷ್ ವಸ್ತುಪ್ರದರ್ಶನ ಮತ್ತು ಆಯುಷ್ ವೈದ್ಯರ ಚಿಕಿತ್ಸೆಯ ಕುರಿತಾಗಿ ಸಾರ್ವಜನಿಕರು ತುಂಬು ಹೃದಯದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು…

 

ವರದಿ. ಗಣೇಶ್. ಕೆ. ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;