ಹೊಸಳ್ಳಿ ಇಜೆ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು.
ಸಿಂಧನೂರು : ತಾಲೂಕಿನ ಹೊಸಳ್ಳಿ ಇಜೆ ಗ್ರಾಮದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಬಾಲಕಿಯೊಬ್ಬಳ ಬಾಲ್ಯ ವಿವಾಹ ನೆರವೇರುವುದಕ್ಕೂ ಮೊದಲೇ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಳ್ಳಿ ಗ್ರಾಮದ ಸಾಬಣ್ಣ ಜತೆಗೆ ಅದೇ ಗ್ರಾಮದ ಶಿವಗಂಗಾ ತಂದೆ ವಿರೇಶ ಬಾಲಕಿಯೊಂದಿಗೆ ಗುರುವಾರ ವಿವಾಹ ನಿಶ್ಚಯವಾಗಿತ್ತು. ಈ ಬಾಲಕಿ ಪಿಯುಸಿ ಒದುತ್ತಿದ್ದು ಅಪ್ರಾಪ್ತ ವಯಸ್ಸಿನಳಾಗಿರುವುದು ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆ ಪಿ ಎಸ್ ಐ ಯರಿಯಪ್ಪ, ಪಿಸಿ ಶೆಟ್ಟೆಪ್ಪ, ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಮೇಲ್ವಿಚಾರಕಿ ಶಾರದಾ, ಅಂಗನವಾಡಿ ಕಾರ್ಯಕರ್ತೆಯರು,ನೇತೃತ್ವದಲ್ಲಿ ಗುರುವಾರ ಮದುವೆ ನಡೆಯುವ ಆಧಿಬಸವೇಶ್ವರ ದೇವಸ್ಥಾನಕ್ಕೆ ತೆರಳಿ, ಮದುವೆ ತಯಾರಿಯಲ್ಲಿದ್ದ ಪೋಷಕರ ಮನವೊಲಿಸಿ ವಿವಾಹ ತಡೆದು ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡುವುದು ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದರು. ಬಾಲ್ಯ ವಿವಾಹದ ದುಷ್ಪರಿಣಾಮ ಮತ್ತು ಶಿಕ್ಷೆಯ ಅರಿವು ಮೂಡಿಸಿದ್ದಾರೆ. ಅಲ್ಲದೇ ಬಾಲಕಿಯ ಪಾಲಕರಿಂದ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಬರೆದು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಹುಡುಗಿಯ ತಂದೆ ತಾಯಿಗಳು ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಮತ್ತು ಪತ್ರಕರ್ತರಿಗೆ ಕಾನೂನಿನ ಬಗ್ಗೆ ಮಾಹಿತಿ ಇಲ್ಲದೇ ಕಣ್ಣಿರಿಟ್ಟರು.
ಇದೇ ದಿನ ಸಿಂಧನೂರು ತಾಲೂಕಿನ ಚಿಕ್ಕಬೇರಗಿ ಗ್ರಾಮದ ಮಹಾಲಿಂಗರಾಯ ತಂದೆ ನಾಗಪ್ಪ ಗೋನಾಳ ವಯಸ್ಸು 18 ವರ್ಷ,ಮಹಿಳೆ ಹೆಸರು ಗೊತ್ತಿಲ್ಲ ವಯಸ್ಸು 15 ವರ್ಷ ಖಚಿತ ಮಾಹಿತಿ ಮೇರೆಗೆ ತುರ್ವಿಹಾಳ ಠಾಣೆ ಪಿಎಸ್ಐ ಚಂದ್ರಪ್ಪ ಮೇಲ್ವಿಚಾರಕಿ ಉಮಾದೇವಿ, ಅಂಗನವಾಡಿ ಕಾರ್ಯಕರ್ತೆಯರು ಇತರರು ವಿವಾಹ ತಡೆದು ಪೋಷಕರ ಮನವೊಲಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
