;

ರಾಜ್ಯ ಮತ್ತು ದೇಶಕ್ಕೆ ಸಂದೇಶ ಸಾರುವ ವಿಶಿಷ್ಟ ರೀತಿಯಲ್ಲಿ ಬಸವ ಜಯಂತಿ ಮತ್ತು ರಂಜಾನ್ ಆಚರಣೆ: ಹಂಪನಗೌಡ ಬಾದರ್ಲಿ….!!!!

ರಾಜ್ಯ ಮತ್ತು ದೇಶಕ್ಕೆ ಸಂದೇಶ ಸಾರುವ ವಿಶಿಷ್ಟ ರೀತಿಯಲ್ಲಿ ಬಸವ ಜಯಂತಿ ಮತ್ತು ರಂಜಾನ್ ಆಚರಣೆ: ಹಂಪನಗೌಡ ಬಾದರ್ಲಿ.

ಸಿಂಧನೂರು : ಬಸವ ಬಳಗ ಹಾಗೂ ಮುಸ್ಲಿಂ ಮುಖಂಡರು ಸೇರಿ ಒಂದೇ ದಿನ ಬಂದಿರುವ ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನ ಬಹಳ ವಿಶಿಷ್ಟ ರೀತಿಯಲ್ಲಿ ನಗರದಲ್ಲಿ ಆಚರಿಸಲು ತೀರ್ಮಾನ ಮಾಡಲಾಗಿದೆಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 3 ರಂದು ಬಸವ ಜಯಂತಿ ಹಾಗೂ ರಂಜಾನ್ ಪವಿತ್ರ ಹಬ್ಬಗಳು ಬಂದಿದ್ದು,ಹಿಂದೂ ಮುಸ್ಲಿಂ ಸಮುದಾಯದ ಜನರು ಒಗ್ಗಟ್ಟಾಗಿ ಉತ್ತಮ ಭಾಂದವ್ಯವನ್ನು ಬೆಳೆಸಿಕೊಂಡಿದ್ದಾರೆ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಹಿಂದೂ ಮುಸ್ಲಿಂರ ಸಂಯುಕ್ತಾಶ್ರಯದಲ್ಲಿ ಭಾವೈಕ್ಯತೆಯ ವಿನೂತನ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಲಾಗುವುದೆಂದರು.

ಬೆಳಿಗ್ಗೆ ಬಸವ ಮೂರ್ತಿ ಮೆರವಣಿಗೆ ಮಾಡಲಾಗುತ್ತಿದ್ದು, ಭಾವೈಕ್ಯತೆ ಸಾರುವ ಬಸವಣ್ಣನ ವಚನ ಹಾಗೂ ಖುರಾನ ತತ್ವ ಸಿದ್ಧಾಂತ ಸಾರುವ ಸ್ಥಬ್ದಚಿತ್ರಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬಸವ ವೃತ್ತದಿಂದ ಹಳೇ ಬಜಾರ ಮೂಲಕ ಚೆನ್ನಮ್ಮ ಸರ್ಕಲ್, ಕನಕದಾಸ ವೃತ್ತ, ವಾಲ್ಮಿಕೀ ವೃತ್ತದ ಮೂಲಕ ತಹಶೀಲ್ದಾರ ಕಾರ್ಯಾಲಯದವರೆಗೆ ಮೆರವಣಿಗೆ ಮಾಡಲಾಗುವುದು.

ಈದ್ಗಾ ಮೈದಾನದಲ್ಲಿ ನಮಾಜ್ ಮುಗಿಸಿಕೊಂಡು ಬಸವ ವೃತ್ತದಲ್ಲಿ ಬಂದ ಮುಸ್ಲಿಂ ಬಂಧುಗಳಿಗೆ ಬಸವ ಬಳಗದಿಂದ ಸಿಹಿ ಮತ್ತು ತಂಪು ಪಾನೀಯ ಕೊಡಲಾಗುತ್ತದೆ. ಬಸವ ಭಾವಚಿತ್ರ ಮೆರವಣಿಗೆ ಹಳೇ ಬಜಾರ್ ನ ಬಡಿಬೇಸ್ ಮಸೀದಿ ಹತ್ತಿರ ಬಂದಾಗ ಮುಸ್ಲಿಂ ಸಮಾಜದಿಂದ ತಂಪಾದ ಪಾನಿಯ ಕೊಡುವ ಮೂಲಕ ಸಾಮರಸ್ಯದ ಭಾಂದವ್ಯ ಕಾಪಾಡುವ ಜೊತೆಗೆ ಹಿಂದೂ ಮುಸ್ಲಿಮರು ಸೋದರತೆ ಭಾವನೆಯಿಂದ ಕೂಡಿದ್ದಾರೆ ಎನ್ನುವ ಸಂದೇಶವನ್ನು ರಾಜ್ಯಕ್ಕೆ ಮತ್ತು ದೇಶಕ್ಕೆ ಸಾರಲಾಗುವುದು ಎಂದರು.

ನಂತರ ವೀರಭದ್ರಪ್ಪ ಕುರುಕುಂದಿ ಮಾತನಾಡಿ ಹಿಂದೂ ಧರ್ಮದ ಬಸವ ಜಯಂತಿ ಮತ್ತು ಮುಸ್ಲಿಂ ಧರ್ಮದ ರಂಜಾನ್ ಹಬ್ಬ ಒಂದೇ ದಿನ ಬಂದಿರುವುದರಿಂದ ನಮಗೆಲ್ಲ ಶುಭ ಸಂದೇಶ, ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚುವ ವಾತಾವರಣ ಸರಿಯಲ್ಲ. ಪಕ್ಷಾತೀತವಾಗಿ ಎಲ್ಲಾ ಪಕ್ಷದವರು, ಎಲ್ಲಾ ಸಮಾಜದವರು, ಹಿತವನ್ನು ಬಯಸಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಜನರೆಲ್ಲ ಜಾತಿ ಮತ ಪಂತ ಭೇದವಲ್ಲದ ವಾತಾವರಣ ಇಡೀ ರಾಜ್ಯ ಮತ್ತು ದೇಶಕ್ಕೆ ತಲುಪಲಿ ಅನ್ನೋ ಆಸೆಯನ್ನ ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರ ಆಕಾಂಕ್ಷೆಗೆ ನಾವೆಲ್ಲರೂ ಬೆಂಬಲಿಸೋಣ, ಒಟ್ಟಾಗಿ ಸಾಮರಸ್ಯವನ್ನ ಸಾರೋಣ ಎಂದರು.

ದೇವನೊಬ್ಬ ನಾಮ ಹಲವು ಎಂಬಂತೆ ಸಿಂಧನೂರು ನಗರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕ ಹಿಂದೂ ಮುಸ್ಲಿಂ ಭಾವೈಕ್ಯದಲ್ಲಿ ನಂಬಿಕೆಯಿಟ್ಟು ತೆರಳುವ ಸಾವಿರಾರು ಜನರು ಭಕ್ತಿ ಸಮರ್ಪಣೆ ಮಾಡುವುದು ಹಲವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ್ದ ವಿಶ್ವಗುರು ಬಸವಣ್ಣ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಧಾರ್ಮಿಕ ಸಾಮರಸ್ಯದ ಸಂಕೇತವಾದ ಹಿಂದೂ ಮುಸ್ಲಿಂ ಭೇದಭಾವ ಇಲ್ಲದ, ಶತಮಾನಗಳಿಂದ ವಿಜೃಂಭಣೆಯಿಂದ ಹಿಂದೂ, ಮುಸ್ಲಿಮರು ಒಟ್ಟು ಗೂಡಿ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರಾದ ಹನುಮನಗೌಡ ಬೆಳಗುರ್ಕಿ, ಟಿ.ಎಮ್.ಪಾಟೀಲ್,ಅಶೋಕಗೌಡ,ಸೋಮನಗೌಡ ಬಾದರ್ಲಿ, ಜಿಲಾನಿಪಾಷ, ನದಿಮುಲ್ಲಾ, ಖಾದರ್ ರಬ್ಬಾನಿ, ಬೀರಪ್ಪ ಶಂಭೋಜಿ, ಖಾಜಿ ಮಲ್ಲಿಕ್, ಶರಣಪ್ಪ ತೆಂಗಿನಕಾಯಿ , ಎಚ್. ಜಿ. ಹಂಪಣ್ಣ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;