ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ದಿನಾಂಕ 21 -4 -2022ರ ಗುರುವಾರ ಹೊಸಪೇಟೆ ಯಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಗುಡೇಕೋಟೆಯಲ್ಲಿಉತ್ತಮವಾಗಿ ಕೆಲಸ ನಿರ್ವಹಿಸಿದ ಶ್ರೀ ಮಹಮ್ಮದ್ ರಫೀಕ್ ಸರ್ ರವರಿಗೆ ಶಿಕ್ಷಣ ಇಲಾಖೆಯಿಂದ ಜಿಲ್ಲಾಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಯನ್ನು ಮಾನ್ಯಜಿಲ್ಲಾಧಿಕಾರಿಯಾದ ಶ್ರೀ ಅನಿರುದ್ಧ ಶ್ರವಣ್ ಸರ್, ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಭೂಯಲ್ ಹರ್ಷಲ್ ನಾರಾಯಣರಾವ್ ಸರ್ ಪ್ರಶಸ್ತಿ ನೀಡಿ ಗೌರವಿಸಿದರು. ಅಪರ ಜಿಲ್ಲಾಧಿಕಾರಿ ಆದ ಶ್ರೀ ಮಹೇಶ್ ಬಾಬು sir ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ್ರು ಕೂಡ್ಲಿಗಿ ಅಧ್ಯಕ್ಷರಾದ ಶಿವರಾಜ್ ಸರ್ಇನ್ನು ಮುಂತಾದ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಸ್ತ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು. ಇದು ಗುಡೆಕೋಟೆ ಭಾಗಕ್ಕೆ, ವಿಜಯನಗರ ಜಿಲ್ಲೆಗೆ, ನಮ್ಮ ತಾಲೂಕಿಗೆ ಬರುತ್ತಿರುವ ಪ್ರಪ್ರಥಮ ಪ್ರಶಸ್ತಿಇದಾಗಿದೆ.
ಅವಳಿ ಜಿಲ್ಲೆಗಳ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಕೊಟ್ರೇಶ್ ಸರ್ & ಹನುಮಕ್ಕ ಮೇಡಂ , ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಯುವರಾಜ naik sir ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು, ಎಲ್ಲಾ ECO ಗಳು, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶಿವರಾಜ್ ಸರ್ ಮತ್ತು ಎಲ್ಲಾ ಪದಾಧಿಕಾರಿಗಳು, ಕೊಟ್ಟೂರು ಭಾಗದ ಅಧ್ಯ ಕ್ಷರು ಮತ್ತು ಸಮಸ್ತ ಪದಾಧಿಕಾರಿಗಳು, ನಮ್ಮ ತಾಲೂಕಿನ ಸಮಸ್ತ ಶಿಕ್ಷಕ ವೃಂದದವರು, ಕೆಪಿಎಸ್ ಕಾಲೇಜಿನ ಪ್ರಾಚಾರ್ಯರು ಸಿಬ್ಬಂದಿ ವರ್ಗದವರು ಮತ್ತು ಉಪನ್ಯಾಸಕ ವರ್ಗದವರು ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಪಾಂಡುರಂಗ ಸರ್ ಹಾಗೂ ಎಲ್ಲಾ ಶಿಕ್ಷಕ ವರ್ಗದವರು ಮತ್ತು ಸಿಬ್ಬಂದಿ ವರ್ಗದವರು ಗುರುಮಾತೆ ಯರು, ಕೂಡ್ಲಿಗಿ ಮತ್ತು ಗುಡೆಕೋಟೆ ಭಾಗದ ಸಂಘಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳ ಬಳಗದವರು, ಸರ್ಕಾರಿ ನೌಕರರು, ಅಭಿನಂದಿಸಿ ರುತ್ತಾರೆ.

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
