;

ಸರ್ಕಾರಿ ವೈದ್ಯಧಿಕಾರಿಯ ಮೊಬೈಲ್ ಪುರಾಣ, ಸಾರ್ವಜನಿಕರ ಪಂಚಾಂಗ ಸುಳಿಯಲ್ಲಿ, ಅಕಟಕಟಾ ಏನಿದು…???

ತಾವೋಬ್ಬ ಸರ್ಕಾರಿ ಅಧಿಕಾರಿ ಎಂಬುದನ್ನುಮರೆತು ಮೊಬೈಲ್ ನಲ್ಲಿ ತಲ್ಲಿನರಾದ ಡಾ. ಹನುಮಂತ ರಡ್ಡಿ.

ಸಿಂಧನೂರು : ನಗರದ ತಾಲೂಕು ತಹಸೀಲ್ ಕಛೇರಿಯಲ್ಲಿ ತಾಲೂಕು ದಂಡಾಧಿಕಾರಿ ಮಂಜುನಾಥ ಭೋಗಾವತಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆ ಅಡಿಯಲ್ಲಿ ಆರೋಗ್ಯ ಮೇಳದ ಪೂರ್ವಭಾವಿ ಸಭೆ ಇಂದು ತಾಲೂಕು ಕಛೇರಿಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ತಾನೂ ಮುಖ್ಯ ವೈದ್ಯಾಧಿಕಾರಿ ಎನ್ನುವುದನ್ನು ಮರೆತ ಡಾ. ಹನುಮಂತರಡ್ಡಿ ಯವರು ಮೊಬೈಲ್ ನಲ್ಲಿ ಕ್ಯಾಂಡಿ ಕ್ರಷ್ ಗೇಮನಲ್ಲಿ ಪುಲ್ ಬ್ಯುಸಿಯಾಗಿದ್ದರು.

ತಮ್ಮದೇ ಇಲಾಖೆಯ ಸಭೆಯಲ್ಲಿ ತಹಸೀಲ್ದಾರ ಮಾತನ್ನು ಕೇಳಬೇಕಾದ ಡಾ. ಹನುಮಂತರಡ್ಡಿ ತನ್ನದೇ ಲೋಕದಲ್ಲಿ ಬ್ಯುಸಿಯಾಗಿದ್ದು ಕಂಡು ಬಂತು. ಸಾರ್ವಜನಿಕರು ಯಾವುದೇ ಸಮಸ್ಯೆಗಳಿಗೆ ಸಂಪರ್ಕಿಸಿದಾಗ ಅಧಿಕಾರಿಗಳು ಸಂಪರ್ಕಕ್ಕೆ ಸಿಗುವುದಿಲ್ಲ ಆದರೆ ಸಭೆಯಲ್ಲಿ ಮೊಬೈಲ್ ನಲ್ಲಿ ಕ್ಯಾಂಡಿ ಕ್ರಷ್ ಗೇಮ್ ಆಡುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಆಡಳಿತದಲ್ಲಿ ಶ್ರದ್ಧೆ,ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸಲು ಇಷ್ಟವಿಲ್ಲದ ಅಧಿಕಾರಿಗಳು ಮನೆಯಲ್ಲಿ ಕುಳಿತು ಏನಾದರೂ ನೋಡಬಹುದು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;