ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರೋಡ್ ಪಕ್ಕದಲ್ಲಿರುವ ದಲಿತರ ಮನೆಗಳಿಗೆ ನುಗ್ಗಿದ ಮಳೆಯನೀರು…!!!

ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರೋಡ್ ಪಕ್ಕದಲ್ಲಿರುವ ದಲಿತರ ಮನೆಗಳಿಗೆ ನುಗ್ಗಿದ ಮಳೆಯನೀರು
ತಡರಾತ್ರಿ ಸುರಿದ ಮಳೆಗೆ ಕಾನ ಹೊಸಹಳ್ಳಿ ಗ್ರಾಮದ ಎನ್.ಎಚ್ ಐವತ್ತರ ಪಕ್ಕದಲ್ಲಿರುವ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಹಾಗೂ ಅಂಡರ್ ಪಾಸ್ ನಲ್ಲಿ ಸುರಿದ ಮಳೆಯಿಂದ ದಲಿತರ ಕಾಲೋನಿಗೆ ಹಾಗೂ ಮನೆಗಳಿಗೆ ಮಳೆಯ ನೀರು ನುಗ್ಗಿದ್ದು ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸಲು ಹರಸಾಹಸಪಡುತ್ತಿದ್ದಾರೆ.-ಮಳೆಗಾಲದಲ್ಲಿ ಎಷ್ಟು ಜನ ವಾಹನ ಸವಾರರು ಬಿ ದ್ದು ಆಸ್ಪತ್ರೆಗೆ ಸೇರಿದ ಪ್ರಕರಣಗಳಿವೆ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳಿಗೆ ಈ ವಿಷಯದ ಬಗ್ಗೆ ಸುಮಾರು ಬಾರಿ ಗ್ರಾಮಸ್ಥರು ತಿಳಿಸಿದ್ದಾರೆ ಹಾಗೂ ಮಾಧ್ಯಮದಲ್ಲೂ ಪ್ರಕಟಣೆಯನ್ನು ಮಾಡಿದ್ದಾರೆ. ಆದರೂ ಕೂಡ ಈ ಕಾಮಗಾರಿಯನ್ನು ಸುರಕ್ಷಿತವಾಗಿ ಮಾಡಿಸದೆ ಅವೈಜ್ಞಾನಿಕ ಕಾಮಗಾರಿ ಯಾಗಿ ಮಾಡಿ ಸಾರ್ವಜನಿಕರಿಗೂ ಹಾಗು ವಾಹನಗಳ ಸಂಚಾರಕ್ಕೆ, ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಸಿಸುತ್ತಿರುವ ದಲಿತ ಕುಟುಂಬದವರಿಗೆ ಬಹಳ ತೊಂದರೆ ಆಗುತ್ತದೆ, ಪ್ರತಿವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆಯಾಗಿ ಬಂದಿದೆ ಈ ಸಮಸ್ಯೆಯನ್ನು ಬಗೆಹರಿಸುವ ವ ರು ಯಾರು ಎಂದು ಇಲ್ಲಿ ವಾಸ ಮಾಡುವ ಜನರಿಗಿ ಮತ್ತು ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ. ಈಗಲಾದರೂ ಇಂಥ ಪರಿಸ್ಥಿತಿಯನ್ನು ನೋಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅತಿ ಶೀಘ್ರದಲ್ಲಿ ಬಂದು ಸ್ಥಳ ಪರಿಶೀಲಿಸಿ ಶೀಘ್ರದಲ್ಲಿ ಇಲ್ಲಿ ಹಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸಾರ್ವಜನಿಕರು ಹೊಸ ಹಳ್ಳಿಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಊರಿನ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend