ಎನ್, ಶೀರನಹಳ್ಳಿ ಗ್ರಾಮದಲ್ಲಿ ಮುರುಡಬಸವೆಶ್ವೇರ ಜಾತ್ರೆಯ ಪ್ರಯುಕ್ತ ಎಂ. ಪಿ. ವೀಣಾಮಹಾಂತೇಶ್ ಪಾಲ್ಗೊಂಡ ಸಂದರ್ಭ…!!!

ಇಂದು 18/04/2022 ರಂದು ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎನ್ ಶೀರನಹಳ್ಳಿ ಗ್ರಾಮದಲ್ಲಿ ನಾಟಕವನ್ನು ಉದ್ಘಾಟಿಸಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕರಾದ ಶ್ರೀಮತಿ ಎಂಪಿ ವೀಣಾ ಮಹಾಂತೇಶ್……

ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎನ್ ಶೀರನಹಳ್ಳಿ ಗ್ರಾಮದಲ್ಲಿ ಮುರುಡಬಸವೆಶ್ವೇರ ಜಾತ್ರೆಯ ಪ್ರಯುಕ್ತ ಊರಿನ ಕಲಾಪ್ರೇಮಿಗಳು ಸೇರಿ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದರು. ಈ ನಾಟಕವನ್ನು ಉದ್ಘಾಟಿಸಿದ ಕಲಾಪೋಷಕರಾದ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ರವರು ನಾಟಕವನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಂದೆ ಎಂಪಿ ಪ್ರಕಾಶ್ ಹಾಗೂ ಅಣ್ಣ ಎಂಪಿ ರವೀಂದ್ರ ಅವರನ್ನು ಸ್ಮರಿಸಿಕೊಂಡರು. ಅವರಿಬ್ಬರೂ ನಾಟಕ ಕಲೆಗೆ ನೀಡಿದ ಪ್ರೋತ್ಸಾಹ, ಕಲಾವಿದರಿಗೆ ನೀಡುತ್ತಿದ್ದ ಗೌರವ ಹಾಗೂ ಅವರು ಆಡಿಸಿದೆ ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ ನಾಟಕದ ಹಾಡುಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಒಬ್ಬಟ್ಟು,ಮುರುಡೇಶಿ, ಬೆಟ್ಟನಗೌಡ ಮತ್ತಿಹಳ್ಳಿ ಮುಂತಾದ ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಮಕ್ಕಳು ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಕಲಾಭಿಮಾನಿಗಳು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend