ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿಯಲ್ಲಿ ಅಂಗಾರಕ ಸಂಕಷ್ಟಿ ಅಂಗವಾಗಿ ಶ್ರೀ ಗಣೇಶನಿಗೆ ಬೆಣ್ಣೆ ಅಲಂಕಾರ…!!!

ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ 19.ಅಂಗಾರಕ ಸಂಕಷ್ಟಿ ಅಂಗವಾಗಿ ಶ್ರೀ ಗಣೇಶನಿಗೆ ಬೆಣ್ಣೆ ಅಲಂಕಾರ ಮತ್ತು ಎಲೆ ಪೂಜೆ ಹೂವಿನ ಅಲಂಕಾರ ಪೂಜೆ ವಿಶೇಷವಾಗಿ ಮಾಡಲಾಗಿದೆಯೆಂದು ಅರ್ಚಕರಾದ .ಪಿ.ಸಂತೋಷ ಅರ್ಚಕರು.ಹೇಳಿದರು .ಪಟ್ಟಣದ ಜೆಸ್ಕಾಂ ಆವರಣದಲ್ಲಿರುವ ಶ್ರೀ ಗಣೇಶನ ದೇವಾಲಯದಲ್ಲಿ ಪತ್ರಿಕೆಯೊಂದಿಗೆ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಅಂಗಾರಕ ಸಂಕಷ್ಟಿಯ ಅಂಗವಾಗಿ ಶ್ರೀ ಪಂಚಮುಖಿ ಗಣಪನನ್ನು ವಿಶೇಷವಾಗಿ ಅಲಂಕರಿಸಲಾಗಿದೆ .ಬೆಳಗಿನ ಜಾವದಿಂದಲೇ ಮಜ್ಜನ ಅಭಿಷೇಕಾದಿ ಕೈಂಕರ್ಯ ಮುಗಿದು ವಿವಿಧ ಸುವಾಸನೆ ಭರಿತ ಪುಷ್ಪಗಳಿಂದ ಗಣಪನನ್ನು ಅಲಂಕರಿಸಲಾಯಿತು ಆ ನಂತರ ಪೂಜಾ ವಿಧಿ ವಿಧಾನಗಳ ಮೂಲಕ ಮೋದಕಗಳ ನೈವೇದ್ಯ ಸಮರ್ಪಿಸಿ ಧೂಪ ದೀಪಗಳಿಂದ ಗಣಪತಿಯನ್ನು ಆರಾಧಿಸಲಾಯಿತು ಮಂಗಳ ವಾರ ಸಂಕಷ್ಟಿಗಳಲ್ಲಿ ಬಂದಿರುವುದು ವಿಶೇಷವಾಗಿದ್ದು ಈ ಅಂಗಾರಕ ಸಂಕಷ್ಟಿ ಬೆಳಿಗ್ಗೆಯಿಂದಲೇ ನಮ್ಮ ಪಂಚಮುಖಿ ಗಣೇಶನ ದರ್ಶನಕ್ಕೆ ಭಕ್ತಾದಿಗಳು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ .ವರ್ಷದಲ್ಲಿ 1ಬಾರಿ ಬರುವ ಅಂಗಾರಕ ಸಂಕಷ್ಠಿ ಬಹಳ ವಿಶೇಷವಾಗಿದ್ದು .ಎಂದು ಪ್ರಧಾನ ಅರ್ಚಕರು ಸಂತೋಷ ಆಚಾರ್ ತಿಳಿಸಿಕೊಟ್ಟರು…

ವರದಿ. ಧನಂಜಯ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend