;

ಶಾಸಕ ನಾಡಗೌಡರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ…!!!

ಶಾಸಕ ನಾಡಗೌಡರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ.

ಸಿಂಧನೂರು ಏ.9 ಈಗಾಗಲೇ ಕ್ಷೇತ್ರದಲ್ಲಿ ಶೇ 80 % ಸಿಸಿ ರಸ್ತೆ ಪೂರ್ಣ ಗೊಂಡಿವೆ. ಕೆಲವೊಂದು ಕಡೆ‌ ಬಾಕಿ ಇದ್ದು ಅವುಗಳನ್ನು ಕೈಗೆತ್ತಿಕೊಂಡು ಸಿಸಿ ರಸ್ತೆ, ಚರಂಡಿ ನಿರ್ಮಾಣ ಕ್ಕೆ ಅನುದಾನ ಇಟ್ಟು ಗ್ರಾಮಗಳ ಸ್ವಚ್ಛತೆಗೆ ಅನುಕೂಲ ಮಾಡಿಕೊಡಲಾಗುವದೆಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ಲೋಕಪಯೋಗಿ ಇಲಾಖೆಯ ಅನುದಾನದಲ್ಲಿ ತಾಲ್ಲೂಕಿನ ಉದ್ಬಾಳ ಇಜೆ, ಅಲಬನೂರು, ಹರೆಟನೂರು ,ಒಳಬಳ್ಳಾರಿ ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಪ್ರತಿ ಗ್ರಾಮಕ್ಕೆ 20 ಲಕ್ಷ ರೂ ಮತ್ತು ಹೆಡಗಿನಾಳ ,ಚಿಂತಮಾನ ದೊಡ್ಡಿ ಗ್ರಾಮಗಳಲ್ಲಿ 25 ಲಕ್ಷ ರೂ, ಹುಲಗುಂಚಿ ಗ್ರಾಮದಲ್ಲಿ 15 ಲಕ್ಷ ,ಯದ್ದಲದೊಡ್ಡಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸಿಸಿ ರಸ್ತೆ ,ಚರಂಡಿ ಗಳನ್ನು ಕಾಲ ಮಿತಿಯೊಳಗೆ ತುಂಬಾ ಗುಣಮಟ್ಟದಲ್ಲಿ ಮಾಡಬೇಕೆಂದು ಗುತ್ತೆದಾರರಿಗೆ ತಿಳಿಸಿದರು ಮತ್ತು ಪ್ರತಿ ಗ್ರಾಮಗಳಲ್ಲಿನ ಗ್ರಾಮಸ್ಥರು ಕಾಮಗಾರಿಯನ್ನು ಸರಿಯಾಗಿ ಮಾಡಿಸಿಕೊಳ್ಳಬೇಕು ಕಳಪೆ ಕಂಡಲ್ಲಿ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ ಎಂದು ಗ್ರಾಮಸ್ಥರಿಗೆ ಶಾಸಕರು ಸೂಚನೆ ನೀಡಿದರು.
ಪ್ರತಿ ಗ್ರಾಮಗಳಲ್ಲಿ ಸಿಸಿ ರಸ್ತೆಗಳ ಮೇಲೆ ಅನಾವಶ್ಯಕವಾಗಿ ನೀರನ್ನು ಹರಿಸಬೇಡಿ ಮತ್ತು ಕಸ ( ತಿಪ್ಪೆ )ವನ್ನು ಹಾಕದೇ ಗ್ರಾಮವನ್ನು ಸುಂದರವಾಗಿಟ್ಟುಕೊಳ್ಳಿ ಎಂದರು.

ಈ ಸಂಧರ್ಭದಲ್ಲಿ ಮುಖಂಡರಾದ ಅಯ್ಯನಗೌಡ ನಾಯಕ ,ಚಂದ್ರಭೂಪಾಲ ನಾಡಗೌಡ,ಗ್ರಾಮ ಪಂಚಾಯತಿ ಅದ್ಯಕ್ಷರಾದ ನಾಗ ಲಿಂಗಪ್ಪ ಮಾಡಶಿರವಾರ ಬಸನಗೌಡ, ವೀರೇಶ ಅಮರೇಶ, ಮಂಜುನಾಥ,ಪಂಪಯ್ಯಸ್ವಾಮಿ ,ಮಲ್ಲಯ್ಯ ಸ್ವಾಮಿ ಜೆಇ ಶಿವಪ್ಪ ಪಿಡಿಒಗಳಾದ ಜಯಶ್ರೀ, ಮುದಕಪ್ಪ ,ಆಶಾ ,ಹನುಮಂತ ಕಲ್ಲಶೆಟ್ಟಿ ಸೇರಿದಂತೆ ಇತರರು ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;