ನಮ್ಮ ಭಾರತ ದೇಶ, ಸಹಬಾಳ್ವೆಯನ್ನು ಹೊಂದಿರುವ ದೇಶ ಮತ್ತು ಎಲ್ಲರೂ ಸಮಾನರು ಎನ್ನುವ ಒಂದು ದ್ಯಾಯೆಯನ್ನು ಹೊಂದಿರುವ ಅವಿಭಕ್ತ ಕುಟುಂಬಗಳನ್ನು ಹೊಂದಿರುವ ರಾಷ್ಟ, ತಮಗೆಲ್ಲರಿಗೂ ಗೊತ್ತಿರುವ ವಿಷಯವೆಂದರೆ ದೇಶ ಉದ್ದಾರ ಆಗಬೇಕೆಂದರೆ ದೇಶದ ಪ್ರಧಾನಿಗಳು ಮುಖ್ಯ ರಾಜ್ಯ ಉದ್ದಾರವಾಗಬೇಕೆಂದರೆ ರಾಜ್ಯದ ಮುಖ್ಯಮಂತ್ರಿಗಳು ಕಾರಣ, ಹಾಗೂ ಜಿಲ್ಲೆಗಳು ಉದ್ದಾರವಾಗಬೇಕೆಂದರೆ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಷ್ಟು ಶ್ರಮವನ್ನು ಹಾಕಿರುತ್ತಾರೆ ಎನ್ನುವ ಒಂದು ವಿಷಯ ಬಹಳ ಮುಖ್ಯ ಮತ್ತು ತಾಲೋಕು ಅಭಿರುದ್ದಿಯಾಗಬೇಕೆಂದರೆ ಅಲ್ಲಿನ ತಾಲೋಕು ದಂಡಾಧಿಕಾರಿಗಳ ಆಡಳಿತ ಬಹು ಮುಖ್ಯ. ಅದೇ ತರನಾಗಿ ಒಂದು ಗ್ರಾಮದ ಆಡಳಿತ ವ್ಯವಸ್ಥೆ, ಸುವ್ಯವಸ್ತೆಯಾಗಿ ಇರಬೇಕು ಅಂದರೆ ಹಲ್ಲಿನ ಗ್ರಾಮಪಂಚಾಯಿತಿಯ ಆಡಳಿತ ವ್ಯವಸ್ಥೆಯು ಕೂಡ ಬಹಳ ಮುಖ್ಯ ಮತ್ತು ಅಲ್ಲಿನ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಪಾತ್ರವು ಸಹ ಸಾರ್ವಜನಿಕರಿಗೆ ತುಂಬಾ ಅಗತ್ಯ ಇಷ್ಟೆಲ್ಲಾ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಸುಗಮವಾಗಿ ನಡೆದರೆ ಮಾತ್ರ ಎಲ್ಲಾ ಆಡಳಿತ ವ್ಯವಸ್ಥೆಗೆ ಒಂದು ಮಹತ್ವ ಪೂರ್ಣ ಅರ್ಥವಿರುತ್ತದೆ ಇದನ್ನೆಲ್ಲಾ ಬಿಟ್ಟು ದುರಾಡಳಿತ ಇದ್ದರೆ ಯಾವೊಂದು ಕಾರ್ಯಗಳು ಕುಂಟಿತರೀತಿಯಲ್ಲಿ ಸಾಗುತ್ತವೆ. ಅಲೆ ಇದೇನ್ನಪ್ಪ ಇಷ್ಟೊಂದು ರೀತಿಯಲ್ಲಿ ಯಾಕೆ ವಿಶ್ಲೇಷಣೆ ಮಾಡುತ್ತಾರೆ ಎನ್ನುವ ಒಂದು ಕ್ಯೂರಿಯಸಿಟಿ ಎಲ್ಲರಿಗೂ ಇರಬಹುದು ಅದೇ ನೋಡಿ ಇಲ್ಲಿನ ನಿಜವಾದ ವಿಷಯ ಇವೆಲ್ಲವಕ್ಕೂ ವಿರುದ್ಧ ರೀತಿಯಲ್ಲಿ ಆಡಳಿತ ವ್ಯವಸ್ಥೆ ಇಲ್ಲೊಂದು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು “ಉಂಡು ಹೋದ ಕೊಂಡು ಹೋದ “ಎನ್ನುವ ರೀತಿಯಲ್ಲಿ ಆಡಳಿತ ನಡೆಸಿದರೆ ಯಾವೊಬ್ಬ ಸಾರ್ವಜನಿಕರಿಗೆ ನಿಜವಾದ ಸರ್ಕಾರದ ಸವಲತ್ತು ಸಿಗಲು ಸಾಧ್ಯ ಏಳಿ?
ನೇರವಾಗಿ ವಿಷಯಕ್ಕೆ ಬರುತ್ತೇನೆ ನೋಡಿ. ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ, “ರಾಸ್ತಾಪುರ” ಗ್ರಾಮಪಂಚಾಯಿತಿಯ ದುರಾಡಳಿತ ವ್ಯವಸ್ಥೆಯ ಬಗ್ಗೆ ಇಂಚಿoಚು ಮಾಹಿತಿಯನ್ನು ನಿಮ್ಮಗಳ ಮುಂದೆ ಇಡುತ್ತಿದೆ ನಮ್ಮ ಎಚ್ಚರಿಕೆ ಪತ್ರಿಕಾ ತಂಡ ಅಂದರೆ ಅದೇನಿರಬಹುದು ಅನ್ನುವ ಕುತೋಹಲ ವೀರಬಹುದು ನಮ್ಮ ಓದುಗ ದೊರೆಗಳಿಗೆ ಇರವಬಹುದು ಅಲ್ವಾ ಇದೋ ಇಲ್ಲಿದೆ ನೋಡಿ!!

ಯಾಕೆ ಇಂದು ಸುಮಾರು ವಿದ್ಯಾವಂತರು ಸರ್ಕಾರಿ ಕೆಲಸವಿಲ್ಲದೆ ಖಾಸಗಿ ಕಂಪನಿಗಳಲ್ಲಿ ಹಗಲಿರುಳು ಅವರು ಕೊಟ್ಟಷ್ಟು ಸಂಬಳಕ್ಕೆ ಕಣ್ಣಿಗೆ ಎಣ್ಣೆಯನ್ನು ಬಿಟ್ಟುಕೊಂಡು ದುಡಿಯುತ್ತಾರೆ ಆದರೆ ಕೆಲವರಿಗೆ ಸರ್ಕಾರಿ ಕೆಲಸಸಿಕ್ಕರು ಅವರು ಮಾತ್ರ ಹಗ್ಗ ಕಡಿಯುವ ಚಾಳಿಯೊಂದಿಗೆ ಸರ್ಕಾರದ ಒಂದು ಬೊಕ್ಕಸಕ್ಕೆ ಕನ್ನ ಹಾಕಲೆಂದೆ ಹಗಲಿರುಳು ಯೋಚನೆಗಳು ಮಾಡುತ್ತಾರೋ ಏನೋ ಆ ದೇವರಿಗೆ ಗೊತ್ತು ಬೀಡಿ “ಭ್ರಷ್ಟರು “ಸರ್ಕಾರದ ಕೆಲಸ ದೇವರ ಕೆಲಸ ನಿಜ “ಆದರೆ ಹಣ ಮಾಡಲಿಕ್ಕೆoದೆ ಕೆಲವರು ಹೊಂಚು ಹಾಕಿ ಬರುತ್ತಾರೆ ಅದರಲ್ಲಿ ಒಂದು ಕೈ ಮೇಲೆ ನೋಡಿ ರಸ್ತಾಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಸಾರ್ವಜನಿಕರಿಗೆ ಕೆಲಸವನ್ನು ಕೊಡದೆ ಅನುದಾನ ಬಂದಷ್ಟು ಕಳ್ಳ ಬಿಲ್ ಅಂದರೆ, ಕೆಲಸ ಮಾಡದೇ ಉಡಾಪೆ ಬಿಲ್ ಗಳನ್ನು ಮಾಡಿ
ಅವರು ಮತ್ತು ಅವರ ಕುಟುಂಬಗಳು ಸೇಫ್ ಆಗಿರುತ್ತವೆ ಅಂತವರನ್ನು, ಹುದ್ದೆಯಿಂದ ವಜಾಮಾಡಿದರೆ ಪ್ರಯೋಜನವಿಲ್ಲ, ಅಂತವರನ್ನು ವಜಾಮಾಡುವುದರ ಜೊತೆಗೆ, ಜೈಲಿಗೆ ದಾರಿಯನ್ನು ತೋರಿಸಬೇಕು ಮತ್ತು ಸರ್ಕಾರದ ಹಣವನ್ನು ಎಷ್ಟು ಲೂಟಿಯನ್ನು ಮಾಡಿರುತ್ತಾರೋ ಅದರ ಅಸಲು ಮತ್ತು ಬಡ್ಡಿಯೊಂದಿಗೆ ಹಣವನ್ನು ವಸೂಲಿ ಮಾಡಿ ಬುದ್ದಿಯನ್ನು ಕಲಿಸಿದರೆ ಮಾತ್ರ ಇನ್ನುಳಿದ ಅಧಿಕಾರಿಗಳಿಗೆ ಪಾಠವನ್ನು ಕಲಿಸಿದಂತಾಗುತ್ತದೆ.

ನೋಡಿ ಶಹಾಪುರ ತಾಲೂಕಿನಲ್ಲಿ ಹಲವಾರು ಗ್ರಾಮಪಂಚಾಯಿತಿಗಳಲ್ಲಿ ಸಾಕಷ್ಟು ಹಗರಣಗಳ ಕಂತೆಗಳಿವೆ ಅನ್ನುವ ಒಂದು ದೂರುಗಳು ನಮ್ಮ ಒಂದು ಪತ್ರಿಕಾ ತಂಡದ ಗಮನಕ್ಕೆ ಬರುತ್ತಿದ್ದು ಬಹಳ ಆತಂಕದ ವಿಷಯ ಎನ್ನುವುದು ಮಾತ್ರ ಸತ್ಯ, 14ನೆ ಹಣಕಾಸಿನಲ್ಲಿ ಮತ್ತು ಆಶ್ರಯ ಮನೆ ಯೋಜನೆಯಲ್ಲಿ ದುಡ್ಡು ಕೊಟ್ಟವರಿಗೆ ಮನೆ ಮುಂಜೂರು ಮಾಡಿದ್ದರೆ ಅಲ್ಲಿರುವ ಸ್ಥಳೀಯ ಸದಸ್ಯರ ಜೊತೆಗೆ ಸೇರಿ 10ರಿಂದ 20ಸಾವಿರ ರೂಪಾಯಿಗಳನ್ನು ಕೊಟ್ಟವರಿಗೆ ಮಾತ್ರ ಆಶ್ರಯ ಮನೆ ಮುಂಜೂರು ಮಾಡುವ ಕಾರ್ಯ ಮಾಡಿದ್ದರೆ, ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿಯೂ ಸಹ ಭಾರಿ ಭ್ರಷ್ಟಾಚಾರ ಆಗಿದೆ ಹಾಗೂ “ಸ್ವಚ್ಚ ಭಾರತ ಮಷಿನ್ “ಯೋಜನೆಯಲ್ಲಿಯು ಒಂದೊಂದು ಮನೆಗೆ 2ಇಲ್ಲ 3 ಶೌಚಾಲಯಗಳನ್ನು ನಿರ್ಮಿಸದೆ ಬಿಲ್ ತೆಗೆದಿರುವ ಅನುಮಾನವು ಸಹ ಇದೆ ಎನ್ನುತ್ತಾರೆ ಸ್ಥಳೀಯರು, ಹಾಗೂ ವಜಗೊಂಡಿರುವ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯು 14&15ನೇ ಹಣಕಾಸು ಯೋಜನೆಯಲ್ಲಿ SC &ST ಸಮುದಾಯದಲ್ಲಿ ಮಾಡಬೇಕಾದ ಕಾಯಗಾರಿಗಳನ್ನು ಜನರಲ್ ವಾರ್ಡ್ ಗಳಲ್ಲಿ ಕೆಲಸ ಮಾಡಿದ್ದಾರೆ ಹಾಗೆ SC and ST ಜನಸಂಖ್ಯೆ ಇರಲಾರದನ್ನೆ ತಾವೆ ಸೃಷ್ಟಿ ಮಾಡಿ ಬಿಲ್ಲು ಪಾವತಿ ಮಾಡಿರುತ್ತಾರೆ.
ವಸಂತ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಏಗಿದ್ದಾರೆ ನೋಡಿ ಮಹಾರಾಜರ ರೀತಿಯಲ್ಲಿ..
ಇವರು ಅಂದರೆ ಈ ಇಂದೇ ಇದ್ದ ವಸಂತ ಎನ್ನುವ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈಗಾಗಲೇ ಬೇರೆ ಕಡೆಗೆ ವರ್ಗಾವಣೆಯಾಗಿದ್ದು ಹಾಲಿ ಅಭಿವೃದ್ಧಿ ಅಧಿಕಾರಿ ಯಮನೂರಪ್ಪ ಎನ್ನುವ ಗ್ರಾಮಪಂಚಾಯಿತಿ ಅಧಿಕಾರಿಯನ್ನು ಸಾರ್ವಜನಿಕರು ಈ ಒಂದು ಅನ್ಯಾಯದ ವಿರುದ್ಧ ಕೇಳಿದರೆ ನಾನು ಇದ್ದ ಸಮಯದಲ್ಲಿ ಈ ಒಂದು ಕೃತ್ಯ ನಡೆದಿಲ್ಲ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವ ನುಣುಪಾದ ಉತ್ತರವನ್ನೇ ನೀಡುತ್ತಾರೆ ಅಂದರೆ ಇವರು ಅಧಿಕಾರವನ್ನು ವಹಿಸಿಕೊಳ್ಳುವ ಸಮಯದಲ್ಲಿ ಎಲ್ಲಾ ದಾಖಲೆಗಳನ್ನು ಪರಿಶೀಲನೆಯನ್ನು ಮಾಡಿ ಅಧಿಕಾರವನ್ನು ವಹಿಸಿಕೊಂಡಿಲ್ಲವೇ ಅಂದರೆ ಇದು ಯಾರಪ್ಪ ಆಸ್ತಿ ಆಗಾದರೆ ಇದೆ ತರನಾಗಿ ಇನ್ನು ಎಷ್ಟು ಗ್ರಾಮಪಂಚಾಯಿತಿಯಲ್ಲಿ ಈ ಯಮನೂರಪ್ಪನವರು ಕಾರ್ಯವನ್ನು ನಿರ್ವಹಿಸಿದ್ದಾರೋ ಆ ದೇವರಿಗೆ ಗೊತ್ತು ಬೀಡಿ “ಅದು ಏನೇ ಆಗಲಿ ಈ ವಸಂತ ಎನ್ನುವ ಅಡ್ನಾಡಿ” ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಡಿರುವ ಕೆಲಸಕ್ಕೆ ಮಾತ್ರ ಆ ಒಂದು ಗ್ರಾಮಪಂಚಾಯಿತಿಗೆ ಸಂಬಂಧ ಪಟ್ಟ ಗ್ರಾಮಸ್ಥರು ಮಾತ್ರ ಇಡೀ ಶಾಪವನ್ನೇ ಹಾಕುವ ಒಂದು ಪರಿಸ್ಥಿತಿ ಎದುರಾಗಿರುದರಲ್ಲಿ ಎರಡು ಮಾತಿಲ್ಲ ಬೀಡಿ.

ಹಾಲಿ ಅಭಿವೃದ್ಧಿ ಗ್ರಾಮಪಂಚಾಯಿತಿ ಅಧಿಕಾರಿ ಯಮನೂರಪ್ಪ..
ಅಕಟಕಟಾ ನೋಡಿ ಅಂದರೆ “ಹಾಲಿ ಮತ್ತು ಮಾಜಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆಡಳಿತದಲ್ಲಿ ಸಾರ್ವಜನಿಕರು ಸಿಕ್ಕಿ ವಿಲವಿಲ ಒದ್ದಾಡುತ್ತಿರುವುದು ತುಂಬಾ ವಿಪರ್ಯಾಸ ಬೀಡಿ “ಆಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಇಲ್ಲಿನ ಗ್ರಾಮಪಂಚಾಯಿತಿಯ ಆಡಳಿತ ವ್ಯವಸ್ಥೆಯನ್ನು ಸಂಬಂಧ ಪಟ್ಟ ಮೇಲಾಧಿಕಾರಿಗಳು ಕ್ರಮವನ್ನು ತೆಗೆದುಕೊಳ್ಳುವರೋ ಅಥವಾ ನನಗೆ ಇದಕ್ಕೂ ಸಂಬಂಧವಿಲ್ಲವೆಂಬಂತೆ ಇರುವರೋ ಅಥವಾ ಇದಕ್ಕೆಲ್ಲ ಅವರ ಕುಮ್ಮಕ್ಕು ಇದೆಯೋ ಎನ್ನುವುದನ್ನು ಕಾಯ್ದುನೋಡೋಣ ಎನ್ನುತ್ತಾರೆ, ಅಲ್ಲಿನ ಗ್ರಾಮಸ್ಥರು ಇವರಿಗೆಲ್ಲ ನ್ಯಾಯಲಯ ಸರಿಯಾದ ಶಿಕ್ಷೆ ಕೊಡಲಿ ಮತ್ತು ನಮ್ಮ ಒಂದು ರಾಜ್ಯದಲ್ಲಿ ಇಂತಹ ಒಂದು ಭ್ರಷ್ಟಾಚಾರದ ಆಡಳಿತ ವ್ಯವಸ್ಥೆ ಸುಮಾರು ಗ್ರಾಮಪಂಚಾಯಿತಿಗಳಲ್ಲಿ ನಡೆಯುತ್ತಿವೆ ಇವಲ್ಲಾ ಯಾವಾಗ ಸರಿದಾರಿಗೆ ಬರುತ್ತವೆಯೋ ಎಂಬುದೇ ನಮ್ಮ ಮೂಲ ಉದ್ದೇಶ ಇದು “ಎಚ್ಚರಿಕೆ ಕನ್ನಡ ನ್ಯೂಸ್ ವರದಿಗೆ ಸಿಕ್ಕ ಒಂದು ಭ್ರಷ್ಟಾಚಾರದ ಸುದ್ದಿ ರಾಜ್ಯದ ಹಲವಾರು ಮೂಲೆಗಳಲ್ಲಿ ಇಂತಹ ಹಲವಾರು ಸುದ್ದಿಗಳು ನಡೆಯುತ್ತಿದ್ದರೆ ನೇರವಾಗಿ “ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ವರದಿ.ಎಚ್ಚರಿಕೆ ಕನ್ನಡ ನ್ಯೂಸ್ ಸಂಚಿಕೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
