;

ಜಲಜೀವನ ಮಿಷನ್ ಯೋಜನೆಯು ಭ್ರಷ್ಟರ ಕೈ ಕೆಳಗೆ ಸಿಲುಕಿರುವ ಯೋಜನೆ – ಮರಿದೇವಪ್ಪ…!!!

ಜಲಜೀವನ ಮಿಷನ್ ಯೋಜನೆಯು ಭ್ರಷ್ಟರ ಕೈ ಕೆಳಗೆ ಸಿಲುಕಿರುವ ಯೋಜನೆ – ಮರಿದೇವಪ್ಪ.

ಸಿಂಧನೂರು : ಜಲಜೀವನ ಮಿಷನ್ ಯೋಜನೆಯು ಭ್ರಷ್ಟರ ಕೈ ಕೆಳಗೆ ಸಿಲುಕಿ ಗೋರೆಬಾಳ ಗ್ರಾಮದ ಕೆರೆ ಪೂರ್ತಿ ಕಳಪೆ ಕಾಮಗಾರಿಯಾಗಿದ್ದ ಪರಿಣಾಮವಾಗಿ ಈ ಕೆರೆ ಹೊಡೆದು ಹೋಗಿದೆ ಎಂದು ಮರಿದೇವಪ್ಪ ಆರೋಪಿಸಿದರು.

ನಮ್ಮ ಬಳಿ ಅಧಿಕಾರವಿದೆ ಶಾಸಕರು ನಮ್ಮಬೆಂಬಲಕ್ಕೆ ಇದ್ದಾರೆ ಎಂದು ಗುತ್ತೆದಾರಾದ ಬಸವರಾಜು ಉಗಿಬಂಡಿ ಎನ್ನುವವರು ಇಲ್ಲಿಯವರೆಗಾದರೂ ಕಾಮಗಾರಿ ಸ್ಥಳಕ್ಕೆ ಬೇಟಿ ನಿಡಿಲ್ಲ,ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಸೇರಿ 4 ಎಕರೆ 15 ಗುಂಟೆ ಜಾಗದ ಹದ್ದುಬಸ್ತು ಮಾಡಿಕೊಡಲು ಅಧಿಕಾರಿಗಳಿಗೆ ಮನವಿ ಮಾಡಿದರು ,ಸದಸ್ಯರ ಮನವಿ ಸ್ಪದ್ದಿಸದೇ ಮನಸೋ ಇಚ್ಛೆ ಮಾಡಿದ್ದಾರೆ,ಕೆರೆಯು ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಒತ್ತಾಯ ಮಾಡಿದ ಮೇಲೆ ಕಾಟಾಚಾರಕ್ಕೆ ದಾಖಲೆಗಾಗಿ ಒಂದು ದಿನ ರೋಡ ರೂಲರ್ ತಂದು ಪೋಟೊ ತೆಗೆಸಿಕೊಂಡು ತಮಗೆ ತಿಳಿದ ಹಾಗೆ ಮಾಡಿದ್ದಾರೆ, ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬೇಕಾದರೆ ಒಂದು ಸಮಿತಿ ರಚನೆ ಮಾಡಬೇಕು, ಅದನ್ನು ಮಾಡಿಲ್ಲ, ಅಧಿಕಾರಿಗಳು ಕಳ್ಳರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಜಲ ನಿರ್ಮಲನಾ ಸಮಿತಿ ಅಧ್ಯಕ್ಷ ಮತ್ತು ಗ್ರಾ.ಪ.ಸ. ಮರಿದೇವಪ್ಪ ಪತ್ರಿಕೆ ಹೇಳಿಕೆ ನೀಡಿದರು.

ಪ್ರಥಮ ದರ್ಜೆ ಗುತ್ತೆದಾರರಾದ ಬಸವರಾಜ ಉಗಿಬಂಡಿ ಮತ್ತು ಇಂಜಿನಿಯರರಾದ ಶ್ರೀನಿವಾಸ್ ರಂಗ ರವರ ಬೇಜವಾಬ್ದಾರಿ ತನದಿಂದ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದ್ದರ ಪರಿಣಾಮವಾಗಿ ಈ ಕೆರೆ ಹೊಡೆದು ಹೋಗಿದೆ ಎಂದು ಗೋರೆಬಾಳ ಗ್ರಾಮಸ್ಥರು ತಿಳಿಸಿದರು.

ಗ್ರಾಮಸ್ಥರು ಸುದ್ದಿ ತಿಳಿಸಿದ ಎರಡೂ ತಾಸು ತಡವಾಗಿ ಬಂದ ಅಧಿಕಾರಿ ಅಶೋಕ ರಡ್ಡಿ ನೀರು ಬಿಡುವ ವಾಟರ್ ಮ್ಯಾನಗೆ ನೀನು ನೀರು ಯಾಕೆ ಜಾಸ್ತಿ ಬಿಟ್ಟಿದ್ದಿಯಾ ಎಂದು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ಗ್ರಾಮಸ್ಥರು ಅಧಿಕಾರಿ ಮತ್ತು ಗುತ್ತೆದಾರರು ಮಾಡಿದ ತಪ್ಪಿಗೆ ಅವರನ್ನು ಯಾಕೆ ದೂಷಿಸುತ್ತಿರಿ ಎಂದರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಕೆರೆ ಅಂದಾಜು 1 ಕೋಟಿ 63 ಲಕ್ಷ ರೂಪಾಯಿ ಗಳಲ್ಲಿ ಮಂಜೂರಾಗಿದ್ದು, ಕೆರೆ ಕಾಮಗಾರಿ ಮುಗಿದು ಕೆರೆಗೆ ನೀರು ತುಂಬಿಸಿದ ದಿನವೇ, ಕೆರೆಯು ಹೊಡೆದು ಹೋಗಿದೆ. ಇದಕ್ಕೆಲ್ಲಾ ಕಾರಣ ಅಧಿಕಾರಿಗಳ ನಿರ್ಲಕ್ಷ್ಯತನ, ಗುತ್ತೆದಾರರ ಕಳಪೆ ಗುಣಮಟ್ಟದ ಕಾಮಗಾರಿಯ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದರು.

ಕೆರೆ ಹೊಡೆದ ಸುದ್ದಿ ಗ್ರಾಮಸ್ಥರು ತಿಳಿಸಿದರು,ಎರಡು ತಾಸಾದರೂ ಸ್ಥಳಕ್ಕೆ ದಾವಿಸಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಯು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಸೂಕ್ತ ತನಿಖೆ ನಡೆಸಿ ಕಾಮಗಾರಿ ಮಾಡಿದ ಗುತ್ತೆದಾರರ ಲೈಸನ್ಸ್ ರದ್ದು ಪಡಿಸಬೇಕು,ಮಂಜೂರು ಮಾಡಿದ ಹಣವನ್ನು ರೀಕವರಿ ಮಾಡಬೇಕು ಎಂದು ನೆಟೆಕಲ್ ಬೀಮನಗೌಡ ಒತ್ತಾಯಿಸಿದರು.

ಕರ್ನಾಟಕ ಸರ್ಕಾರ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಗೋರೆಬಾಳ ಗ್ರಾಮದಲ್ಲಿ ಜಲ ಜೀವನ್ ಮೀಷೇನ್ ಯೋಜನೆಡಿಯಲ್ಲಿ ಕುಡಿಯುವ ನೀರಿನ ಕೆರೆ ಬಸವರಾಜ ಉಗಿಬಂಡಿ ಎನ್ನುವ ಪ್ರಥಮ ದರ್ಜೆ ಗುತ್ತೇದಾರನಿಗೆ ಟೆಂಡರ್ ಆಗಿದ್ದು ಈ ಕಾಮಗಾರಿಯು ಮೂರು ತಿಂಗಳ್ ಹಿಂದೆ ಮುಗಿಯಬೇಕಾಗಿತ್ತು ಆದರೆ ವಿಳಂಬವಾಗಿದ್ದು ಕೆರೆ ದುರಸ್ಥಿ ಕಾರ್ಯ ಕಳಪೆ ಆಗಿದರಿಂದ ಈ ಕೆರೆಯು ಹೊಡದಿದೆ. ಕಾಮಗಾರಿಯು ಕೇಂದ್ರ ಸರ್ಕಾರದ ಯೋಜನೆ ಯಾಗಿದ್ದರಿಂದ ಕೊಪ್ಪಳ ಲೋಕಸಭಾ ಸಂಸದರಾದ ಕರಡಿ ಸಂಗಣ್ಣ ಗಮನಕ್ಕೆ ತಂದಿದ್ದು ಅವರು ಕಾಮಗಾರಿ ಸ್ಥಳ ಪರಿಶೀಲನೆಗಾಗಿ ಬರುವದಾಗಿ ತಿಳಿಸಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಸದಸ್ಯರಾದ ನಾಗರಬೆಂಚಿ ದೇವಪ್ಪಗೌಡ,ರಾಘವೇಂದ್ರ ಪೂಜಾರಿ,ಅಶೋಕ ಗ್ರಾ.ಪಂ. ಸದಸ್ಯರ ಪತಿ, ಶರಣಪ್ಪ ನಂದವಾಡಗಿ ಮಾಜಿ.ಗ್ರಾ.ಪಂ. ಸದಸ್ಯರು, ರಂಗನಾಥ ಗೌಡನಬಾವಿ, ಕುದರಿ ಅಂಬಣ್ಣ ನಾಯಕ,ಹನುಮಂತಪ್ಪ ಹೀರೆಕುರುಬರ,ಶಿವಪ್ಪ ಬೆನ್ನೂರು, ಮುತ್ತಪ್ಪ, ಯಮನೂರು ನಾಯಕ, ಯಂಕೋಬ, ಇನ್ನೂ ಮುಂತಾದವರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;