ಸರ್ಕಾರಿ ಆಸ್ಪತ್ರೆಗೆ ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಭೇಟಿ. ಕರ್ತವ್ಯ ನಿರ್ಲಕ್ಷ್ಯಕ್ಕೆ ವೈದ್ಯರಿಗೆ ತರಾಟೆ.
ಸಿಂಧನೂರು : ನಗರದ ಸರ್ಕಾರಿ ಆಸ್ಪತ್ರೆಗೆ ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪನವರು ದಿಢೀರ್ ಭೇಟಿ ನೀಡಿದ ವಿಷಯ ತಿಳಿದು ಎಲ್ಲಾ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಹಾಜರಾದರು. ಸಂಸದರು ಪೋನ ಮಾಡಿದಾಗ ಮುಖ್ಯ ವೈದ್ಯಾಧಿಕಾರಿ ಡಾ. ಹನುಮಂತರಡ್ಡಿ ಒಂದು ಘಂಟೆ ತಡವಾಗಿ ಬಂದು ಸಮಾಜಾಯಿಸಿ ನೀಡಿದರು.
ಆಸ್ಪತ್ರೆಯಲ್ಲಿ 12 ಜನ ವೈದ್ಯಾಧಿಕಾರಿಗಳು ಸರ್ಕಾರಿ ವೇತನ ಪಡೆದು ಕೇವಲ 4 ರಿಂದ 5 ಜನ ಇದ್ದು ಇನ್ನುಳಿದ ವೈದ್ಯಾಧಿಕಾರಿಗಳು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದರು, ಕರ್ತವ್ಯದಲ್ಲಿ ಇರಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರಿ ಎಂದು ಪ್ರಶ್ನೆ ಮಾಡಿದಾಗ ಇಲ್ಲಾ ಎಲ್ಲಾ ವೈದ್ಯರು ಕರ್ತವ್ಯದಲ್ಲಿರುತ್ತಾರೆ ಎಂದು ಸಮರ್ಥನೆ ಮಾಡಿಕೊಂಡು ಬೇಜವಾಬ್ದಾರಿ ಹೇಳಿಕೆ ನೀಡಿದರು.
200 ಹಾಸಿಗೆಗಳನ್ನು ಹೊಂದಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಟ ಸೌಲಭ್ಯಗಳಿಲ್ಲ.ಈ ಆಸ್ಪತ್ರೆಯಲ್ಲಿ ಇರುವ 4 ರಿಂದ 5 ಜನ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುತ್ತಾರೆ. ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಲ್ಲದೇ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಬೇಕು. ಹೆರಿಗೆಗೆಂದು ಬಂದ ಮಹಿಳೆಯರು ತಮ್ಮ ಖಾಸಗಿ ಆಸ್ಪತ್ರೆಗೆ ಕಳಿಸಿಕೊಡುತ್ತಾರೆ. ನಂತರ ತಾವೇ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡಿ 20ರಿಂದ 30 ಸಾವಿರ ಹಣ ವಸೂಲಿಗೆ ಇಳಿದಿದ್ದಾರೆ.ಆಸ್ಪತ್ರೆಯಲ್ಲಿಯೇ ಔಷಧಿ ಕೊಡುವ ಬದಲು ಚೀಟಿ ಬರೆದು ಖಾಸಗಿ ಔಷಧೀಯ ಅಂಗಡಿಯಲ್ಲಿ ತೆಗೆದುಕೊಂಡು ಬರಲು ಹೇಳುತ್ತಾರೆ.ಹೀಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ವೈದ್ಯರ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಆಸ್ಪತ್ರೆಗೆ ಬಂದಿರುವ ಸುದ್ದಿ ತಿಳಿದು ಕೆಲ ವೈಧ್ಯರುಗಳು ದೌಡಾಯಿಸಿದರು. ಹಾಜರಿ ಪುಸ್ತಕದಲ್ಲಿ ಎಲ್ಲಾ ವೈದ್ಯಾಧಿಕಾರಿಗಳು ಸಹಿ ಮಾಡಿದರು ಆಸ್ಪತ್ರೆಯಲ್ಲಿ ಇರಲಿಲ್ಲ.ಒಂದೇ ಕೊಠಡಿಯೊಳಗೆ ಮೂರು ಜನ ವೈಧ್ಯರು ಚಿಕಿತ್ಸೆ ನೀಡುವುದನ್ನು ಸಂಸದರು ಯಾಕೆ ಒಂದೇ ರೂಮಿನಲ್ಲಿ ಕುಳಿತ್ತಿದ್ದಿರಿ ಎಂದು ಕೇಳಿದಾಗ ಕೊಠಡಿಗಳ ಕೊರತೆಯಿದೆ ಎಂದು ಹೇಳಿದರು.ಒಂದು ಮಿಷಿನ್ ಇದೆ ಇನ್ನೊಂದು ಇಸಿಜಿ ಮಿಷನ್ ಕಳವು ಆಗಿದ್ದಾಗಿ ತಿಳಿಸಿದರು. ಇದರ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸರ್ಕಾರ ಪ್ರತಿಯೊಬ್ಬ ಅಧಿಕಾರಿಯು ತಾವೂ ಕುಳಿತು ಕೊಳ್ಳುವ ಕಛೇರಿಯಲ್ಲಿ ಪದನಾಮ ಬೋರ್ಡು ಇರಬೇಕು ಮತ್ತು ಪ್ರತಿಯೊಬ್ಬರು ಐಡಿ ಕಾರ್ಡ್ ಕಡ್ಡಾಯವಾಗಿಹಾಕಿಕೊಳ್ಳಬೇಕು ಎಂದು ಸುತ್ತೋಲೆ ಹೋರಡಿಸಿದರು. ಯಾರು ಪಾಲನೆ ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಶಿವನಗೌಡ ಗೋರೆಬಾಳ, ಹನುಮೇಶ ಸಾಲುಗುಂದಾ ಇದ್ದರು….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
