;

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸ್ನೇಹ ಸಮ್ಮೇಳನ…!!!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸ್ನೇಹ ಸಮ್ಮೇಳನ.

ಸಿಂಧನೂರು : ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಮಂಜುನಾಥ ಭೋಗಾವತಿ ತಿಳಿಸಿದರು.

ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಎಲ್.ಬಿ.ಕೆ. ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಗಿಡಕ್ಕೆ ನಿರೇರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನನ್ನ ವಿದ್ಯಾರ್ಥಿ ಜೀವನ ಬಸವ ತತ್ವ ಇರುವ ಶಾಲೆ ಮತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದೇನೆ. ಅದು ನನ್ನ ಪುಣ್ಯ. ಮನಸಿಗೆ ಶಾಂತಿ ಪಡೆಯಲು ಬುದ್ಧ, ಹಸಿವಿಗೆ ಅನ್ನ ನೀಡಲು ಬಸವಣ್ಣ, ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ಸಿಗಲು ಅಂಬೇಡ್ಕರ ರವರು ಕಾರಣ ಎಂಬುದು ನಾವೇಲ್ಲ ಮರೆಯಬಾರದು. ಸ್ವತಂತ್ರ ನಂತರ ಅಂಬೇಡ್ಕರ ರವರು ಸಂವಿದಾನವನ್ನು ರಚನೆ ಮಾಡಿದರು. ಈ ಸಂವಿದಾನದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 371ಜೆ ಯಿಂದ ಉದ್ಯೋಗಗಳು ದೊರಕಿವೆ. ಸಂಬಂಧಿಗಳು ನಾವು ಬೆಳೆವದನ್ನು ಸಹಿಸುವುದಿಲ್ಲ, ನಮ್ಮ ಸೋಲನ್ನು ಸಂಭ್ರಮಿಸುತ್ತಾರೆ.ತಮ್ಮದೇ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟಿ. ಎಮ್.ಪಾಟೀಲ ಮಾತನಾಡುತ್ತಾ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರ ಹೊಮ್ಮಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್.ಬಿ.ಕೆ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪರಶುರಾಮ ಮಲ್ಲಾಪೂರು ಇವರು ವಿದ್ಯಾರ್ಥಿಗಳಿಗೆ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸುತ್ತಾ, 2004ರಲ್ಲಿ 11ಲಕ್ಷ ದೇಣಿಗೆಯಿಂದ ದಾಸೋಹದ ಮೂಲಕ ಪ್ರಾರಂಭವಾದ ಈ ಸಂಸ್ಥೆ, 14 ವರ್ಷದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಏಕೈಕ ಸಂಸ್ಥೆ ಇದಾಗಿದೆ. ಉಚಿತ ವಸತಿ ಮತ್ತು ಊಟ ನೀಡುವದರ ಜೊತೆಗೆ ಸಂಸ್ಕೃತಿ ಮತ್ತು ವೈಚಾರಿಕತೆಯನ್ನು ಕಲಿಸಿದೆ. ಅನ್ನ ದಾಸೋಹ ಜೊತೆಗೆ ಅಕ್ಷರ ದಾಸೋಹವನ್ನಾಗಿ ಪರಿವರ್ತಿಸಿದೆ. ಇಂದು 50 ಬಡ ಹೆಣ್ಣುಮಕ್ಕಳಿಗೆ ವರ್ಷಕ್ಕೆ 15 ಸಾವಿರ ವಿದ್ಯಾಭ್ಯಾಸದ ಖರ್ಚನ್ನು ವೈದ್ಯಕೀಯ ಸಂಘ, ಧಾನಿಗಳು, ಸಂಸ್ಥೆಯ ದರ್ಮದರ್ಶಿಗಳು ಬರಿಸಲಿದ್ದಾರೆ.ಇದರ ಜೊತೆಗೆ ಸಮಾಜದಲ್ಲಿ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದೆ ಆದರೆ ಯಾವುದೇ ಪ್ರಚಾರವಿಲದೇ ಸಹಾಯ ಹಸ್ತ ಮಾಡುತ್ತಾ ಬಂದಿದೆ. ಕರೋನಾದಂತಹ ಸಂಕಷ್ಟದ ಸಮಯದಲ್ಲಿ ತಾಲೂಕಿನ 31ವಾರ್ಡಿಗಳಿಗೂ ಕರಪತ್ರ ಹಂಚುವದರ ಮೂಲಕ 2ದಿನ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ನೆರೆಹಾವಳಿ ಸಂಧರ್ಭದಲ್ಲಿ 50 ಸಾವಿರ ಬಟ್ಟೆ ವಿತರಿಸಿದೆ ಎಂದು ಪ್ರಾಸ್ತಾವಿಕ ಮಾತನಾಡಿದರು.

ಮಕ್ಕಳ ವೈಧ್ಯರಾದ ಡಾ. ಕೆ. ಶಿವರಾಜ ಮಾತನಾಡಿ ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದರ ಜೊತೆಗೆ ಸಂಸ್ಕಾರ ಕಲಿತರೆ ನೀವು ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ.ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಪ್ರಾಮುಖ್ಯವೆಂದು ವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ಹೇಳಿದರು.

ಕಾಲೇಜಿನ ಉಪನ್ಯಾಸಕರು ತಮ್ಮ ಹಿತನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ಟಿ. ಎಮ್. ಪಾಟೀಲ್ ಮುಖ್ಯ ಅತಿಥಿಗಳಾಗಿ ನಾಗರಾಜ್ ಬೋಮ್ಮನಾಳ ಸಂಪಾದಕರು ಪ್ರಾದೇಶಿಕ ಕನ್ನಡ ದಿನಪತ್ರಿಕೆ. ಅನುಭಾವ ನುಡಿಗಳು ನಾಗರಾಜ ಅರಳಿಮರ, ಉಪನ್ಯಾಸಕರಾಗಿ ಶಂಕರ ಪತ್ತಾರ,ಡಾ.ಅರುಣಕುಮಾ ಬೇರಗಿ, ಜಯಪ್ಪ ಗೋರೆಬಾಳ ವಹಿಸಿದ್ದರು.ನೊಬೆಲ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;