;

ಮಾರ್ಚ್ 28,29 ರಂದು ಆಖಿಲ ಭಾರತ ಕಾರ್ಮಿಕರ ಮುಷ್ಕರ ಯಶಸ್ವಿಗೊಳಿಸಿ- ಎಂ ಗಂಗಾಧರ್…!!!

ಮಾರ್ಚ್ 28,29 ರಂದು ಆಖಿಲ ಭಾರತ ಕಾರ್ಮಿಕರ ಮುಷ್ಕರ ಯಶಸ್ವಿಗೊಳಿಸಿ- ಎಂ ಗಂಗಾಧರ್

ಸಿಂಧನೂರು : 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಲು, ಅಗತ್ಯ ವಸ್ತುಗಳ ಹಾಗೂ ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಇಳಿಸಲು, 2020 ವಿದ್ಯುತ್ ಬಿಲ್ ರದ್ದತಿಗಾಗಿ, ಕನಿಷ್ಟ ವೇತನವನ್ನು 25000 ರೂ. ನಿಗದಿಗಾಗಿ, ಎಲ್ಲಾ ಸಾರ್ವತ್ರಿಕ ಸೇವಾ ವಲಯಗಳ ಖಾಸಗೀಕರಣ ವಿರೋಧಿಸಿ ಮಾರ್ಚ್ 28,29-2022ರ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ-ಟಿಯುಸಿಐ ಮತ್ತು ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಬೆಂಬಲಿಸಿ ಸಿಂಧನೂರಿನಲ್ಲಿ ಮುಷ್ಕರದಲ್ಲಿ ಪಾಲ್ಗೊಂಡು ಹೋರಾಟಕ್ಕಿಳಿಯುತ್ತದೆ ಎಂದರು.

ಮಾರ್ಚ್ 28 ರಂದು ನಗರದ ಗಾಂಧಿ ವೃತ್ತದಲ್ಲಿ ಬೆಳಿಗ್ಗೆ 11.30 ಕ್ಕೆ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳ ಪ್ರತಿಕೃತಿ ದಹನ ಮಾಡುವುದರ ಮೂಲಕ ಅಲ್ಲಿಂದ ಮಾನ್ಯ ತಹಶಿಲ್ದಾರರ ಕಛೇರಿಗೆ ತೆರಳಿ ಕೇಂದ್ರ ಸರಕಾರಕ್ಕೆ ಕಾರ್ಮಿಕರ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಗುವುದು.ತಾಲೂಕಿನ ಎಲ್ಲಾ ಸಂಘಟಿತ, ಅಸಂಘಟಿತ ಕಾರ್ಮಿಕರು ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೆಕೆಂದು ಪತ್ರಿಕೆ ಮೂಲಕ ಎಂ.ಗಂಗಾಧರ, ಟಿಯುಸಿಐ ರಾಜ್ಯ ಸಮಿತಿ ಸದಸ್ಯರು ಕರ್ನಾಟಕ, ವಿನಂತಿಸಿದರು.

ಈ ಸಂದರ್ಭದಲ್ಲಿ ಮಾಬುಸಾಬ ಬೆಳ್ಳಟ್ಟಿ, ಅಧ್ಯಕ್ಷರು, ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ, ನಾಗಪ್ಪ ಉಮಲೂಟಿ, ಉಪಾಧ್ಯಕ್ಷರು, ತಿಮ್ಮಣ್ಣ ಯಾದವ್ ಖಜಾಂಚಿ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಸಿಂಧನೂರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;