ಹರಪನಹಳ್ಳಿ ಬಸ್ ಸ್ಟ್ಯಾಂಡ್ ನಲ್ಲಿ ಕೆ ಎಸ್ ಅರ್ ಟಿ ಸಿ ಬಸ್ ಡ್ರೈವರ್ ಹಾಗೂ ಕಂಡೆಕ್ಟರ್ ಗೋಳು ಕೇಳುವವರ್ಯಾರು.??
ಇಡೀ ದಿನ ದೂರದ ಊರುಗಳಿಂದ ಬಸ್ ಓಡಿಸಿಕೊಂಡು ಬಂದ ಡ್ರೈವರ್ ಮತ್ತು ಕಂಡಕ್ಟರ್ ಗಳು, ಉಗುಳು, ಗುಟಿಖಾ ಚಿತ್ತಾರ, ಕಸ, ಉಚ್ಚೆ ಮತ್ತು ಗಟಾರು ನೀರಿನ ಮಧ್ಯೆ ಹೀಗೆ ಮಲಗಿ ರಾತ್ರಿ ಕಳೆಯುತ್ತಾರೆ.
ಬೆಳ್ಳಂಬೆಳಗ್ಗೆ ಮತ್ತೆ ಮರು ಪ್ರವಾಸ ಆರಂಭ.. “ನಿಮ್ಮ ಪ್ರಯಾಣ ಸುಖಕರವಾಗಿರಲಿ..” ಬೋರ್ಡ್ ಬೇರೆ..
ಭಯಂಕರ ಸೆಕೆ. ಸೊಳ್ಳೆಗಳು. ಚಿಕ್ಕಾಡು. ನೊಣ..
ಟಾವೆಲ್ ಬೀಸುತ್ತ, ಸೊಳ್ಳೆ ಓಡಿಸುವ ಬತ್ತಿಹಚ್ಚಿಟ್ಟುಕೊಂಡು ಮಧ್ಯರಾತ್ರಿಯಲ್ಲಿ ಸೊಳ್ಳೆ ಪರದೆಯಲ್ಲಿ ಕುಳಿತು, ಮನೆಯಿಂದ ತಂದ ಆರಿದ ಬುತ್ತಿ ಬಿಚ್ಚಿ ಉಣ್ಣುವುದನ್ನು ನೋಡಿ, ನನಗಂತೂ ಅಸಹನೀಯ ವೇದನೆ ಎನಿಸಿತು..
ಇಡೀ ಬಸ್ ಸ್ಟ್ಯಾಂಡ್ ನಲ್ಲಿ ಮೇಲ್ ಮಾಳಿಗೆ ಕಟ್ಟಿಸಿ, 10 ಬೆಡ್, ಕಾಟ್ ಹಾಸಿಟ್ಟರೆ, ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ,
ನೌಕರಿ ಮನಸ್ಸುಗೊಟ್ಟು ಮಾಡಬಹುದು. ಆರೋಗ್ಯ ಕಾಪಾಡಿಕೊಳ್ಳಬಹುದು.
ಚಿತ್ತ ವಿಕಾರದಿಂದ ತಪ್ಪಿಸಿಕೊಳ್ಳಬಹುದು..
ನೂರಾರು ಜೀವಗಳನ್ನು ಸುರಕ್ಷಿತವಾಗಿ ಗಮ್ಯಕ್ಕೆ ತಲುಪಿಸಬೇಕಾದ ಜವಾಬ್ದಾರಿ ಇರುವ ಚಾಲಕ, ನಿರ್ವಾಹಕರು 5 ರಿಂದ 7 ತಾಸಿನ ನೆಮ್ಮದಿಯ ನಿದ್ರೆಯಿಂದ ಎದ್ದರೆ.. ಎಲ್ಲರ ಬದುಕೂ ಸಹ್ಯ.. ಸುರಕ್ಷಿತ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
