ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ಬೈಕ್ ಅಪಘಾತ ಸವಾರ ಸ್ಥಳದಲ್ಲೇ ಸಾವು
ಕಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಿನಕೆರೆ ಗ್ರಾಮದ ಬಳಿ ಪ್ರದೀಪ 30ವರ್ಷ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಮೊಳಕಾಲ್ಮೂರು ತಾಲ್ಲೂಕು ಅಮಕುಂದಿ ಗ್ರಾಮವಾಸಿ ಪ್ರದೀಪ 30 ವರ್ಷ ಈತನು ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದ ತನ್ನ ಚಿಕ್ಕಮ್ಮ ರುದ್ರಮ್ಮ ನನ್ನು ನೋಡಿಕೊಂಡು ಬರಲು ಮೋಟಾರ್ ಬೈಕಿನಲ್ಲಿ ಹೋಗಿದ್ದು ಹೋಗಿ ಪುನಹ ವಾಪಸ್ ಅಮ್ಮುಕುಂದಿ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಈತನು ಮೋಟಾರ್ ಬೈಕ್ ನ್ನು ಅತಿ ವೇಗವಾಗಿ ಓಡಿಸಿದ್ದರಿಂದ ಮೀನಕೆರೆ ಗ್ರಾಮದ ಕುಂಟ ಕಂಪ್ಲೇ ಮಲ್ಲಯ್ಯ ಎಂಬವರ ಹೊಲದ ಹತ್ತಿರ ಡಾಂಬರ್ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ವಿಷಯ ತಿಳಿಯುತ್ತಿದ್ದಂತೆ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ, ತಿಮ್ಮಣ್ಣ ಚಾಮನೂರು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ…

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
