ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಷಯ ರೋಗ ದಿನ ಆಚರಣೆ.
ಸಿಂಧನೂರು : ಇಂದು ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಜಾತಾ ತೆಗೆಯುವುದರ ಮೂಲಕ ಆಚರಿಸಲಾಯಿತು.
ಈ ಜಾಥವನ್ನು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಹನುಮಂತರೆಡ್ಡಿ ಚಾಲನೆ ನೀಡಿ ಮಾತನಾಡಿದ ಅವರು ಕ್ಷಯರೋಗ ದಿನಾಚರಣೆ ಮಾಡುವ ಉದ್ದೇಶ ಕ್ಷಯ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ 2025ರ ಒಳಗಡೆ ಕ್ಷಯಮುಕ್ತ ಭಾರತ ಮಾಡಲು ಎಲ್ಲಾರು ಸಹಕಾರ ನೀಡಬೇಕೆಂದು ಹೇಳಿದರು.

ಈ ಜಾಥಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ವಿನಯಕುಮಾರ,ಡಾ. ಗಂಗಾಧರ,ಡಾ.ವೀರೇಶ, ಡಾ.ನಾಗವೇಣಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿ ರಂಗನಾಥಗುಡಿ, ಆರೋಗ್ಯ ನಿರೀಕ್ಷಕ ಅಧಿಕಾರಿ ಸಂಗನಗೌಡ ಮಾ.ಪಾಟಿಲ್, ತಾಲೂಕು ಕ್ಷಯರೋಗ ಘಟಕದ ಸಿಬ್ಬಂದಿಗಳಾದ ಅಮೀರ್, ಯಮನೂರ, ಅಬ್ದುಲ ಹಮೀದ್, ನವೀನಕುಮಾರ, ನಿಸಾರ ಅಹಮದ್ ಹಾಗೂ ತಾಲೂಕು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
