;

ಸಾಮೂಹಿಕ ಅತ್ಯಾಚಾರ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯ…!!!

ಸಾಮೂಹಿಕ ಅತ್ಯಾಚಾರ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯ.

ಸಿಂಧನೂರು : ರಾಮತ್ನಾಳ ಗ್ರಾಮದ ದಲಿತಸಮುದಾಯದ (ಮಾದಿಗ) ವಿವಾಹಿತ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಸಮಗ್ರ ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟವು ಒತ್ತಾಯಿಸಿದರು.

ನಗರದ ತಹಸೀಲ್ದಾರ ಕಾರ್ಯಾಲಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮೂಲಕ ಸರಕಾರದ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ತಹಸೀಲ್ದಾರ ಮುಖಾಂತರ ಗೃಹ ಸಚಿವರಿಗೆ,ಎಸ್ಸಿ ಎಸ್ಟಿ ಆಯೋಗ ಮತ್ತು ಮಹಿಳಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು.

ಒಕ್ಕೂಟದ ಮುಖಂಡ ನಾಗರಾಜ ಪೂಜಾರಿ ಮಾತನಾಡಿ ಮಹಿಳೆ ಮೇಲೆ ಪೈಶಾಚಿಕ ಕೃತ್ಯ ನಡೆದು ವಾರ ಗತಿಸಿದರೂ ಘಟನಾ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾಗಲಿ ಬೇಟಿ ಕೊಡದೇ ನಿರ್ಲಕ್ಷ್ಯ ತೋರಿರುವುದು ಜಿಲ್ಲಾಡಳಿತದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇದು ಜಿಲ್ಲಾಮಟ್ಟದ ಅಧಿಕಾರಿಗಳು ದಲಿತ ಸಮುದಾಯಗಳ ಬಗ್ಗೆ ತೋರುತ್ತಿರುವ ತಾರತಮ್ಯ ಹಾಗೂ ಸಂವಿಧಾನ ವಿರೋಧಿ ಭಾವನೆಗೆ ಜ್ವಲಂತ ನಿದರ್ಶನವಾಗಿದೆ. ಹಾಗಾಗಿ ಈ ಘಟನೆಯನ್ನು ಗೃಹ ಇಲಾಖೆ, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕೃತ್ಯವನ್ನು ಸಮಗ್ರ ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
ಆ ಮೂಲಕ ಸರ್ಕಾರವನ್ನು ದುಷ್ಕೃತ್ಯ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ತಾಳಿದ್ದೇ ಆದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಮಹಾದೇವಪ್ಪ ದುಮತಿ ಮಾತನಾಡಿ ಮಾರ್ಚ 17ರಂದು ರಾತ್ರಿ 12 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ದಲಿತ ಮಹಿಳೆಯನ್ನು 5ಕ್ಕೂ ಹೆಚ್ಚು
ಜನರು ಬಲವಂತವಾಗಿ ಹೊತ್ತೊಯ್ದು ಸಮೀಪದ ಬನ್ನಿಗನೂರು ಗ್ರಾಮದ ಹೊಲವೊಂದರಲ್ಲಿ ಪ್ರಜ್ಞೆ ತಪ್ಪಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ವಿಕೃತಿ ಮೆರೆದು ಅಲ್ಲಿಯೇ ಬಿಟ್ಟುಹೋಗಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಬೆಳಗ್ಗೆ ಪ್ರಜ್ಞೆ ಬಂದಿದೆ. ಮಹಿಳೆಯೊಬ್ಬರು ಹೊಲದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡ ನೆರೆಹೊರೆಯವರು ಆಕೆಯ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ತದನಂತರ
ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಪೈಶಾಚಿಕ ದುಷ್ಕೃತ್ಯದಿಂದ ದಲಿತ ಮಹಿಳೆ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾಳೆ, ಮಾರ್ಚ್ 17, 2022ರಂದು ದುಷ್ಕೃತ್ಯ ನಡೆದರೂ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟದಂತೆ, ದೂರು ದಾಖಲಿಸಲಾಗದಂತೆ ಆಕೆ ಮತ್ತು ಕುಟುಂಬದವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರು ಪ್ರಭಾವಿಗಳ ಮೂಲಕ ಒತ್ತಡ ಹೇರಿದ್ದಾರೆ. ದಬ್ಬಾಳಿಕೆ, ದೌರ್ಜನ್ಯದ ನಡುವೆಯೂ ಮಾರ್ಚ್ 21 ರಂದು ನೊಂದ ಕುಟುಂಬದವರುಬಳಗಾನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಸಾಮೂಹಿಕ ಅತ್ಯಾಚಾರ ನಡೆಸಿದವರು ಸಂತ್ರಸ್ತ ಮಹಿಳೆ ಮತ್ತು ಕುಟುಂಬದ ಮೇಲೆ ಕೊಲೆ ಹಾಗೂ ದೌರ್ಜನ್ಯದ ಬೆದರಿಕೆ ಹಾಕುತ್ತಲೇ, ಇತ್ತ ಕೇಸಿನಿಂದ ಪಾರಾಗಲು ಪ್ರಬಲ ರಾಜಕಾರಣಗಳಿಗೆ ಇನ್ನಿಲ್ಲದ ಒತ್ತಡ ಹೇಳಿದ್ದಾರೆ.ಇದರಿಂದಾಗಿ ಈ ಕುಟುಂಬ ಜೀವಭಯ ಎದುರಿಸುತ್ತಿದೆ. ರಾಜಕೀಯ ಮುಖಂಡರು ವಿಶ್ವ ಮಹಿಳಾ ದಿನಾಚರಣೆಯನ್ನು ಟಿವಿ ಪತ್ರಿಕೆಯಲ್ಲಿ ಆಚರಣೆ ಮಾಡುತ್ತಾರೆ, ನಿಜವಾಗಿಯೂ ಮಹಿಳೆ ಪರವಾಗಿದ್ದರೆ ನೊಂದ ಮಹಿಳೆ ಪರವಾಗಿ ಧ್ವನಿ ಎತ್ತಿ ಎಂದು ಅಶೋಕ ನಂಜಲದಿನ್ನಿ ಮಾತನಾಡಿದರು.

ರಾಮತ್ನಾಳ ಗ್ರಾಮದ ದಲಿತ ಮಹಿಳೆ ಮೇಲೆ ನಡೆದ ದುಷ್ಕೃತ್ಯವನ್ನು ಗಮನಿಸಿದಾಗ ದಲಿತ ಮಹಿಳೆಯರು ಮನೆಯಲ್ಲಿ ಮಲಗಿದ್ದರೂ ಅವರಿಗೆ ಭದ್ರತೆ, ಸುರಕ್ಷತೆ ಇಲ್ಲ ಎನ್ನುವುದು ಸಾಬೀತಾಗಿದೆ. ಅತ್ಯಾಚಾರ ನಡೆದು 5 ದಿನಗಳ ನಂತರ ಪ್ರಕರಣ ದಾಖಲಾಗಿರುವುದು, ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಗೆ ವೈದ್ಯಕೀಯ ತಪಾಸಣೆ ಸೇರಿದಂತೆ ಪ್ರಕರಣದ ಭಾಗವಾಗಿ ಅಗತ್ಯವಾಗಿ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೇ ಪೊಲೀಸರು ಉಲ್ಲಂಘಿಸಿರುವುದನ್ನು ಗಮನಿಸಿದರೆ ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಪ್ರಕರಣದಿಂದ ಪಾರು ಮಾಡುವ ಹುನ್ನಾರ ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ಹನುಮಂತಪ್ಪ ಗೋಮರ್ಸಿ ಹೇಳಿದರು.

ಈ ಸಂದರ್ಭದಲ್ಲಿ ಅಲ್ಲಂಪ್ರಭು ಹನುಮಂತಪ್ಪ ಬನ್ನೂರ್ ನರಸಪ್ಪ ಕಟ್ಟಿಮನಿ, ಗುರುರಾಜ್ ಮುಕುಂದ ನಿರುಪಾದಿ ಸಾಸಲಮರಿ ವಿರುಪಮ್ಮ ಈರಮ್ಮ ರಂಗಮ್ಮ ಮಲ್ಲಪ್ಪ ವೆಂಕಟಲಕ್ಷ್ಮಿ ಬಸವರಾಜ್ ಯಾಪಲಪರ್ವಿ ಬಿ ಎಂ ಯರದಿಹಾಳ ಜಾಕೋಬ್ ದೊಡ್ಮನಿ ಮೌನೇಶ್ ಹುಳುಗಪ್ಪ ಮಂಜುನಾಥ್ ನಾಗರಾಜ್ ಹನುಮಂತ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;