ಮೂಡಲಗಿ ತಾಲ್ಲೂಕಿನ ಯಾದವಾಡದಲ್ಲಿ ಬಜಾಜ್ ಕಂಪನಿಯ ಬೈಕ್ ಶೋರೂಮ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕೋಟಿ ಮೌಲ್ಯದ ಬೈಕ್ ಗಳು ಸುಟ್ಟು ಕರಕಲಾದ ಘಟನೆ .
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಯಾದವಾಡ ಪಟ್ಟಣದಲ್ಲಿ ಪಕಿರಪ್ಪ ಹಣಮಪ್ಪ ಗೊಬ್ಬರಗುಂಪಿ ಎಂಬುವರ ಬಜಾಜ್ ಬೈಕ್ ಶೋರೂಮಗೆ ಬೆಂಕಿ ಹತ್ತಿ ಕೋಟಿ ರೂ ಮೌಲ್ಯದ ಬೈಕಗಳು ಸುಟ್ಟು ಕರಕಲಾದ ಘಟನೆ ನಡೆದಿದೆ ಭಾನುವಾರ ಬೆಳಗಿನ ಜಾವ ಎರಡು ವರೆ ಗಂಟೆ ಸುಮಾರಿಗೆ ಶೂರುಮನಲ್ಲಿ ಬೆಂಕಿ ಕಂಡು ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ ಬೆಂಕಿಯ ಪ್ರಮಾಣ ದೊಡ್ಡ ಮಟ್ಟದಲ್ಲಿ ಹತ್ತಿದ್ದರಿಂದ ಬೈಕಗಳು ಮತ್ತು ಲಕ್ಷಾಂತರ ಕಚ್ಚಾ ವಸ್ತುಗಳು ಸುಟ್ಟು ಕರಕಲಾಗಿವೆ.

ಬೆಂಕಿ ನಂದಿಸುವಲ್ಲಿ ಮುಧೋಳ ಅಗ್ನಿಶಾಮಕ ದಳ ಮತ್ತು ಸ್ಥಳೀಯ ದಾಲ್ಮಿಯಾ ಕಾರ್ಖಾನೆಯ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗದ್ದರು ಪಕ್ಕದ ಮತ್ತೊಂದು ಬೈಕ್ ಗ್ಯಾರೇಜ್ ಗೂ ಬೆಂಕಿ ತಗುಲಿ ಎರಡು ಮೂರು ಬೈಕ್ ಸುಟ್ಟಿವೆ ಈ ಶೋರುಮ್ ಯಾದವಾಡಲ್ಲಿ ಗ್ರಾಮೀಣ ಮಟ್ಟದಲ್ಲಿ ನೂರಾರು ಬೈಕ್ ಮಾರಾಟ ಮಾಡಿದ್ದ ದಾಖಲೆಯು ಸಹ ಇತ್ತು ಆದರೆ ದುರ್ಧೈವ ಅಚಾನಕ್ಕಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾಗಿದೆ ಇದರ ಮಾಲೀಕ ಬಿದಿಗೆ ಬಿಳ್ಳುವ ಸ್ಥಿತಿಯಾಗಿದೆ ಎಂದು ಸ್ಥಳೀಯರು ಮರುಗುವಂತಾಗಿದೆ ಕುಲಗೋಡ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡ ತನಿಖೆ ನಡೆಸುತ್ತಿದ್ದಾರೆ ಮತ್ತು ಆದಷ್ಟು ಮಟ್ಟಿಗೆ ಕಂಪನಿಯವರು ಮಾಲೀಕನಿಗೆ ನೇರವು ಆಗುವಂತಾಗಬೇಕಾಗಿದೆ.

ವರದಿ.
ಶಿವಶಂಕರ ಕಡಬಲ್ಲವರ
ಯಾದವಾಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
