;

ಸರ್ವಧರ್ಮಗಳ ಭಾವಕ್ಯ ರತ್ನ ಕನ್ನಡ ಕಬೀರ್ ಇಬ್ರಾಹಿಂ ಸುತಾರ…!!!

ಸರ್ವಧರ್ಮಗಳ ಭಾವಕ್ಯ ರತ್ನ ಕನ್ನಡ ಕಬೀರ್ ಇಬ್ರಾಹಿಂ ಸುತಾರ

ಮಹಾಲಿಂಗಪುರ: ಸ್ಥಳೀಯ ಕೌಜಲಗಿ ನಿಂಗಮ ಸ್ಮಾರಕ ರಂಗ ಮಂದಿರದಲ್ಲಿ ನಡೆದ ದಿ. ಇಬ್ರಾಹಿಂ ಸುತಾರ ಅವರ ನೆನಪಿನಲ್ಲಿ ಹಮ್ಮಿಕೊಂಡಿದ್ದ ನುಡಿನಮನ, ಭಾವಕ್ಯ ದಿನೋತ್ಸವ ಮತ್ತು ಭಾವಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಸಡೆಸಲಾಯಿತು.
ಕಾರ್ಯಕ್ರಮ ಪಾಲ್ಗೊಂಡ ಡಾ. ಶಿವಕುಮಾರ್ ಸ್ವಾಮಿಜಿ ಧರ್ಮಶಾಸ್ತ್ರಗಳು ಸಮಾನತೆ ಮತ್ತು ಏಕತೆಯನ್ನು ಸಾರುತ್ತವೆ.
ದಾರಿ ಹಲವು ಆದರೂ ಗುರಿ ದೇವರ ಸೇರುವುದೊಂದೆ ಎಂದು ಹೇಳಿದರು.
ಇಬ್ರಾಹಿಂ ಸುತಾರ ಭಾವೈಕ್ಯ ಆಧ್ಯಾತ್ಮದ ಅನರ್ಘ್ಯ ರತ್ನ , ಭಾರತ ಸರ್ವಧರ್ಮಗಳನ್ನು ಒಳಗೊಂಡ ಜಾತ್ಯಾತೀತ ರಾಷ್ಟ್ರ ಭಾರತದಂತಹ ಡೊಡ್ಡ ದೇಶಕ್ಕೆ ಇಬ್ರಾಹಿಂ ಸುತಾರಂತಹ ಆಧ್ಯಾತ್ಮ ಪ್ರವಚನಕಾರರ ಅತ್ಯವಶ್ಯವಾಗಿದೆ ಎಂದು
ಸ್ಥಳೀಯ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು. ಸಮಾರೋಪ ಸಮಾರಂಭ ಮುಗಿದನಂತರ ಜಾನಪದ ಕಲೆಗಳು ಜನಪದ ಸಾಹಿತ್ಯ ಪ್ರಸ್ತುತಪಡಿಸಿ ಭಾವಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೈಲಹೊಂಗಲದ ಡಾ. ಫಾದರ್ ಎಂ ಗೊನ್ಸಾಲ್ವಿಸ ಮತ್ತು ಕದರವಳ್ಳಿಯ ಮೌ. ತನ್ವೀರಸಾಬ ಮಜಾವರ,ಬಸನಗೌಡ ಪಾಟೀಲ್, ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ,ಸಜನಸಾಬ ಪೆಂಡಾರಿ, ಶೇಖರ್ ಅಂಗಡಿ, ಮಹಾಂತೇಶ ಹಿಟ್ಟಿನಮಠ,
ಶ್ರೀಶೈಲಪ್ಪ ಉಳ್ಳಾಗಡ್ಡಿ,ಎಸ್ ಕೆ ಗಿಂಡೆ, ಬಸವರಾಜ ಮೇಟಿ ಬಸವರಾಜ ಢಫಳಾಪುರ ಉಪಸ್ಥಿತರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;