;

ಸೂಪರ್ ಮಾರ್ಕೆಟದಲ್ಲಿ ವಿದ್ಯುತ್ ಶಾಟ್ ಸರ್ಕಿಟ್ಟದಿಂದ ನೊಂದ ಕುಟುಂಬಕ್ಕೆ ತಮ್ಮ ಕೈನಿಂದ 25 ಸಾವಿರ ರೂಪಾಯಿ ಸಹಾಯ ಧನ ನೀಡಿದ ಮಾಜಿ ಸೈನಿಕರು…!!!

ಹಂದಿಗುಂದ ಗ್ರಾಮದಲ್ಲಿ ಶ್ರೀ ಹನುಮಾನ್ ಸೂಪರ್ ಮಾರ್ಕೆಟದಲ್ಲಿ ವಿದ್ಯುತ್ ಶಾಟ್ ಸರ್ಕಿಟ್ಟದಿಂದ ಅವಘಡ ಆದ ಅಂಗಡಿಗೆ ಭೇಟಿ ನೀಡಿ ಮಾಜಿ ಸೈನಿಕರು ಹಾಗೂ ಕುಡಚಿ ಕ್ಷೆತ್ರದ ಯುವ ದುರಿಣರು ಆದ ಶ್ರೀ ಶ್ರೀಶೈಲ ಹ ಭಜಂತ್ರಿ ಇವರು ಸಾಂತ್ವನ ಹೇಳಿ ಸಂತ್ರಸ್ತರಿಗೆ ತಮ್ಮ ಕೈನಿಂದ 25 ಸಾವಿರ ರೂಪಾಯಿ ಸಹಾಯ ಧಣ ನೀಡಿದರು.

ಬೆಳಗಾವಿ ಜಿಲ್ಲಾ ರಾಯಬಾಗ ತಾಲೂಕು ಹಂದಿಗುಂದ ಗ್ರಾಮದಲ್ಲಿ ಇಂದು ಸಂಜೆ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಕಣ್ಣೀರು ಒರೆಸಿ ಸಂತೈಸಿ ಧೈರ್ಯ ನಿಮ್ಮ ಜೊತೆ ನಾವಿದ್ದೇವೆ. ಸರಳ ಹೃದಯ ಧೀಮಂತ ನಾಯಕ ಸರಳತೆಯನ್ನು ಮೈಗುಡಿಸಿಕೊಂಡ ಯುವಕರ ಕಣ್ಮಣಿ, ಸನ್ಮಾನ್ಯ ಶ್ರೀ ಶ್ರೀಶೈಲ ಹ ಭಜಂತ್ರಿ ಮಾಜಿ ಸೈನಿಕರು ರಾಜಕೀಯ ಯುವಧುರಿಣರು ಕುಡಚಿ ಮತಕ್ಷೇತ್ರದ ಹಂದಿಗುಂದ ಗ್ರಾಮಕ್ಕೆ ಭೇಟಿ ಅಂಗಡಿ ಮಾಲೀಕರಾದ ವಾಲಿ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡಿದರು. ಸ್ಥಳದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಶೈಲ್ ಪಾಟೀಲ್, ಅಶೋಕ್ ಗುಡ್ಡದಮಣಿ, ಮಹಾಂತೇಶ್ ಶೆಟ್ಟರ್, ಮಹಾಲಿಂಗ ಜಂಬಗಿ, ವಾಲಿ ಕುಟುಂಬದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ಮಹಾಲಿಂಗ ಹ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ,9902346557

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;