ಹಂದಿಗುಂದ ಗ್ರಾಮದಲ್ಲಿ ಶ್ರೀ ಹನುಮಾನ್ ಸೂಪರ್ ಮಾರ್ಕೆಟದಲ್ಲಿ ವಿದ್ಯುತ್ ಶಾಟ್ ಸರ್ಕಿಟ್ಟದಿಂದ ಅವಘಡ ಅಪಾರ ಪ್ರಮಾಣ ದಿನಸಿ ಸಾಮಗ್ರಿಗಳು ಹಾನಿ.
ಬೆಳಗಾವಿ ಜಿಲ್ಲಾ ರಾಯಬಾಗ ತಾಲೂಕು ಹಂದಿಗುಂದ ಗ್ರಾಮದಲ್ಲಿ ಇಂದು ಮಧ್ಯಾಹ್ನ ಸುಮಾರು 3:20 ಗಂಟೆಗೆ ಗುರುಪಾದ. ಮ. ವಾಲಿ ಇವರ ಶ್ರೀ ಹನುಮಾನ್ ಸೂಪರ್ ಮಾರ್ಕೆಟ್ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಅಪಾರ ಪ್ರಮಾಣದ ದಿನಸಿ ವಸ್ತುಗಳು ಅಂದಾಜು ಸುಮಾರು 16 ರಿಂದ 20 ಲಕ್ಷ ದವರೆಗೆ ದಿನಸಿ ವಸ್ತುಗಳು ಸುಟ್ಟು ಕರಕುಲ ಆಗಿರುತ್ತದೆ.ಬೆಂಕಿ ನಂದಿಸಲು ಸ್ಥಳೀಯ GSM ಕಾರ್ಖಾನೆ ಅಗ್ನಿ ಶಾಮದವರು, ಹಾಗೂ ಸಾರ್ವಜನಿಕರು ಹರ ಸಾಹಸ ಪಟ್ಟರು.

ಸ್ಥಳಕ್ಕೆ KEB ಮುಗಳಕೋಡ S O ಆಸೀಫ್ ಕಾಗವಾಡ, ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಟ್ನಿಂದ ಹಾನಿಯಾದ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು, ಸ್ಥಳೀಯ ಮುಖಂಡರು ಆದ M A ಖಾನಗೌಡ, ಮುರಿಗೆಪ್ಪ ಅಂದಾನಿ, ಮಲ್ಲಿಕಾರ್ಜುನ ಮುರಗೋಡ, ಮಹಾದೇವ ಘಾಟ್ಯಾಗೊಳ್,ವಾಲಿ ಕುಟುಂಬಸ್ತರು ಹಾಜರಿದ್ದರು..
ವರದಿ :ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ
9902346557
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
