ಅಸಹ್ಯವಾಗಿ ವರ್ತಿಸಿದ ವ್ಯಕ್ತಿಗೆ ಮಂಗಳಮುಖಿಯರಿಂದ ದರ್ಮದೆಟು.
ಸಿಂಧನೂರು :ಇಂದು ನಗರದ ತಹಶೀಲ್ ಕಾರ್ಯಾಲಯದ ಎದುರಿಗಿನ ಗುರುಪ್ರಸಾದ್ ಹೋಟೆಲ್ ನ ಪಕ್ಕದ ಪಾಪುಲರ್ ಪುಟವೇರ್ ಅಂಗಡಿಯ ಮುಂಬಾಗದಲ್ಲಿ ರಾತ್ರಿ 9.30 ಘಂಟೆ ಸುಮಾರಿನಲ್ಲಿ ನಾಲ್ಕು ಜನ ಮಂಗಳಮುಖಿಯರು ದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅಪರಿಚಿತ ವ್ಯಕ್ತಿ ಬಾಯಿಗೆ ಬಂದಂಗೆ ಕೆಟ್ಟ ಪದದಿಂದ ಬೈದಾ ಎನ್ನುವ ಕಾರಣಕ್ಕೆ ಹಿಗ್ಗಾಮುಗ್ಗಾ ಬಾರಿಸುವ ಮೂಲಕ ಕಾಲಿನಿಂದ ಒದ್ದು ಅವನನ್ನು ಒದೆಯುತ್ತಿರುವಾಗ ಅಲ್ಲೆ ಇದ್ದ ಸಾರ್ವಜನಿಕ ವಿಡಿಯೋ ಮಾಡುತ್ತಿದ್ದದನ್ನು ನೋಡಿ ಸುಮ್ಮನಾದ ಮಂಗಳ ಮುಖಿಯರು ಅಲ್ಲಿಂದ ಜಾಗ ಖಾಲಿ ಮಾಡಿ ಹೊರಟು ಹೋದರು. ಅಮರಾಪೂರು ಗ್ರಾಮದ ವಿರೇಶ ಎನ್ನುವ ವ್ಯಕ್ತಿ ಮಂಗಳಮುಖಿಯರು ಹೋದ ನಂತರ ಬಂದ ಹಲ್ಯೆಗೊಳಗಾದ ವ್ಯಕ್ತಿ ನಾನೇನು ತಪ್ಪು ಮಾಡಿಲ್ಲ ಸರ್ ಅವರು ನನ್ನನ್ನು ಡ್ರಾಪ್ ಕೊಡುವಂತೆ ಕೇಳಿದರು, ನಾನು ನನ್ನ ಗಾಡಿಯಲ್ಲಿ ಕೂಡಿಸಿಕೊಂಡು ಬರುವಾಗ ದಾರಿಯಲ್ಲಿ ನನ್ನ ಹತ್ತಿರ ಇರುವ ಐವತ್ತು ಸಾವಿರ ರೂ. ಹಣ ತೆಗೆದುಕೊಂಡಿದ್ದಾರೆ ಅದನ್ನು ಕೊಡಿ ಎಂದು ಕೇಳಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿರುವದಾಗಿ ತಿಳಿಸಿದರು.
ಮಂಗಳಮುಖಿಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಅವರನ್ನು ಎಲ್ಲರಂತೆ ಗೌರವದಿಂದ ನೋಡಬೇಕಾದಂದು ಎಲ್ಲರ ಜವಾಬ್ದಾರಿ.ಅವರಿಗೆ ಸಾಮಾಜಿಕ ನ್ಯಾಯ, ನೆಲೆ,ಗೌರವ ಸಿಗಬೇಕು. ಶಿಕ್ಷಣದಿಂದ ವಂಚಿತವಾಗಬಾರದು. ಸರಿಯಾದ ಉದ್ಯೋಗ ದೊರೆಯಬೇಕು.ಅವರ ಜೀವನ ಸಮಾಜದ ಕಣ್ಣಿಗೆ ಕೆಟ್ಟದಾಗಿ ಕಾಣಬಾರದು. ಅವರನ್ನು ತಾತ್ಸಾರದಿಂದ ಕಾಣುವ ಅಥವಾ ಸಮಾಜ ತಿರಸ್ಕರಿಸುವುದರಿಂದ ಅವರ ಬದುಕು ಕಡೆಗಣಿಸಲ್ಪಡುತ್ತದೆ. ಅವರೂ ಕೂಡಾ ಸಾರ್ವಜನಿಕರಲ್ಲಿ ಗೌರವಯುತವಾಗಿ ನಡೆದುಕೊಳ್ಳುವ ಜವಾಬ್ದಾರಿ ಅವರದ್ದಾಗಿದೆ ಎಂಬುದು ನಮ್ಮ ಆಶಯ..

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
