“ಸ್ನೇಹ ಜೀವಿ ಬೆಲ್ಲದ ಕೊಟ್ರಪ್ಪ”
ಸ್ಮರಣಿಕೆ ಮತ್ತು ಅಭಿನಂದನ ಗ್ರಂಥ ಬಿಡುಗಡೆ!!
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಸ್ನೇಹ ಜೀವಿ ಬೆಲ್ಲದ ಕೊಟ್ರಪ್ಪ”
ಸ್ಮರಣಿಕೆ ಮತ್ತು ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಿತು .ದಿವ್ಯ ಸಾನಿಧ್ಯವನ್ನಾ
ಗವಿಮಠದ ಶ್ರೀ ಡಾ. ಹಿರಿಶಾಂತವೀರ ಮಾಹಾ ಸ್ವಾಮಿಗಳು ಸಾನಿಧ್ಯ ಮಾತನಾಡಿ : ಬೆಲ್ಲದ ಕೊಟ್ರಪ್ಪ ಜಂಗಮಾ ಪ್ರೇಮಿ ಮತ್ತು ಸಮಾಜ ಪ್ರೇಮಿ
ಬಾಹಳ ಒಳ್ಳೆಯ ಕೆಲಸ ಮಾಡಿದವರು ಬಹಳ ದಿನ ಬದುಕಲಾರರರು ಎಂಬುದು ಇತ್ತಿಚೆಗೆ ಮಾತು ಸತ್ಯ ಅನಿಸಿತು , ಎಂ ಪಿ ಪ್ರಕಾಶ್ ರವರ ಬಲಗೈ ಯಂತೆ ಇದ್ದವರು ಎಂದರು
ಪ್ರಸ್ತಾವಿಕವಾಗಿ ಉಷಾ ಬೆಲ್ಲದ್ : ಶ್ರೀ ಬೆಲ್ಲದ ಕೊಟ್ರಪ್ಪ ನವರು ಗತಿಸಿ 9 ವರ್ಷ ವಾಯಿತು ಅವರ ಹೆಸರನ್ನ ಅಜರಾಮರವಾಗಿಸುವ ಕುಟುಂಬ ದ ಒತ್ತಾಸೆ ಫಲವಾಗಿ ಅವರ ಆಪ್ತರಾದ ಶ್ರೀ ಟಿ ಎಂ ಶಂಕ್ರಯ್ಯ ನವರು ಅಚ್ಚುಕಟ್ಟಾಗಿ ಪುಸ್ತಕಕ್ಕೆ ಜೀವ ತುಂಬಿದ್ದಾರೆ ,
ಉದ್ಘಾಟನೆ : ಶ್ರೀ ಹುಲುಗಪ್ಪ ಕಟ್ಟಿಮನಿ : ಕಲಾವಿದರು ರಂಗಾಯಣ ಮೈಸೂರು ಮಾತನಾಡಿ,
ಕೊಟ್ರಪ್ಪ ಇಲ್ಲ ಅಂತ ಅಂದುಕೊಳ್ಳುವುದೇ ಕಷ್ಟದ ಸಂಗತಿ
ಇಲ್ಲಿ ಅವರ ಬಗ್ಗೆ ಮಾತಡುವುದು ಅಂದರೆ ಅವರು ಬದುಕಿದ್ದ ಕಾಲದ ಬಗ್ಗೆ ಮಾತನಾಡುವುದು ಎಂದು
ತಾವು ನಿರ್ದೇಶನ ಮಾಡಿದಾಗ ಕೊಟ್ರಪ್ಪ ಅವರ ಒಡನಾಟದ ಕುರಿತು ನೆನಪು ಹಂಚಿಕೊಂಡರು
ಪ್ರೋ. ಶಾಂತಮೂರ್ತಿ ಬಿ ಕುಲಕರ್ಣಿ, ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು
ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ . ಕೆ ನಾಗರತ್ಮಮ್ಮ ಮರಿಯಮ್ಮನಹಳ್ಳಿ , ಸ್ಮರಣೆ ಬಿಡುಗಡೆ ಮಾಡಿ ಮಾತನಾಡಿದ ಅವರು ನಮಗೆ ಮೊದಲು ಆಧುನಿಕ ರಂಗಭೂಮಿ ಗೊತ್ತಿರಲಿಲ್ಲ , ಎಂ ಪಿ ಪ್ರಕಾಶ್ ರವರು ನಮಗೆ ಪರಿಚಯಿಸಿದ್ರೂ ಜೋಕುಮಾರ ಸ್ವಾಮಿ ನಾಟಕ ಮಾಡಿದ್ದೆವು ಆಗ ಜೊತೆಗೆ ಪಾತ್ರ ಮಾಡುತ್ತಿದ್ದ ಬೆಲ್ಲದ ಕೊಟ್ರಪ್ಪ ಅವರನ್ನ ಸ್ಮರಿಸಿದರು.
ವೈಧ್ಯರಾ ಡಾ. ಧರ್ಮಣ್ಣ ಕೊಟ್ರಪ್ಪ ಜೊತೆಗಿನ ನೆನಪುಗಳನ್ನ ಹಂಚಿಕೊಂಡು ಭಾವುಕರಾದರು.
ಗುಡೇಕೋಟೆ ಬಸವರಾಜ : ಒಡನಾಡಿ ಸಹಪಾಠಿಗಳು ನಾವು ಆತ ಸತ್ತ 9 ವರ್ಷದ ನಂತರ ಈಗ ಅಭಿನಂದನ ಗ್ರಂಥ ಬರುತ್ತಿದೆ ಅಂದ್ರೆ ಈಗ ಬೆಲ್ಲದ ಕೊಟ್ರಪ್ಪ ಈಗ ಹುಟ್ಟಿದ್ದಾರೆ ಎಂದು ಒಡನಾಡದ ನೆನಪು ಹಂಚಿಕೊಂಡರು.
ಟಿ .ಎಂ ಶಂಕ್ರಯ್ಯ : ಸ್ಮರಣಿಕೆ ಸಂಪಾದಕರು
ಶ್ರೀ ಮತಿ ವೀಣಾ ಮಂಹಾಂತೇಶ್ , ಶ್ರೀಮತಿ ರತ್ಮಮ್ಮ ಬೆಲ್ಲದ ಕೊಟ್ರಪ್ಪ ,ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಮತಿ ಎಂ ಪಿ ಸುಮಾ ವಿಜಯ್.ರಂಗಭಾರತಿ ಕಾರ್ಯದರ್ಶಿಗಳು ವಹಿಸಿಕೊಂಡಿದ್ದರು, ಕಲೆ ನಿಂತ ನೀರಲ್ಲ ಹರಿಯುವ ನೀರು ಕೊಟ್ರಪ್ಪ ಅವರಿಗೆ ಸಾವಿಲ್ಲ!! ರಂಗ ಪರಂಪರೆ ,ತಮ್ಮ ಬಾಲ್ಯದ ದಿನಗಳಲ್ಲಿ ಕೊಟ್ರಪ್ಪ ಅವರು ರಂಗಭಾರತಿಯಲ್ಲಿ ಜವಾಬ್ದಾರಿಗಳನ್ನ ನಿರ್ವಹಿಸಿದ ರೀತಿಯನ್ನ ಸ್ಮರಿಸಿದರು.
ಪ್ರಕಾಶ್ ಜೈನ್ , ಚಂದ್ರಪ್ಪ ತಂಡದಿಂದ ರಂಗಗೀತೆಗಳ ಗಾಯನದ ಮೂಲಕ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಲ್ಲದ ಕೊಟ್ರಪ್ಪ ಅವರ ಕುಟುಂಬ, ಅಪ್ತ ವಲಯದವರು, ರಂಗಭಾರತಿಯ ಸದಸ್ಯರು, ಕಲಾವಿದರು ಹಾಜರಿದ್ದರು…

ವರದಿ. ಅಜಯ್, ಚ. ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
