ಶಕ್ತಿ ಮಾರಿಕಾಂಬ ದೇವಿ ಜಾತ್ರೋತ್ಸವದ ಹಿನ್ನೆಲೆ ಶಾಂತಿ ಸಭೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ ಶ್ರೀ ಮಾರಿಕಾಂಬ ದೇವಿಯ ರಥೋತ್ಸವ ಹಾಗೂ ಜಾತ್ರೋತ್ಸವದ ಪ್ರಯುಕ್ತ ಶಾಂತಿ ಸಭೆ ನಡೆಯಿತು.
ಮಾರ್ಚ್ 15 ರಿಂದ 17 ರವರೆಗೆ ನಡೆಯುವ ಹೊಸಹಳ್ಳಿ ಗ್ರಾಮದೇವತೆ ಶ್ರೀ ಶಕ್ತಿ ಮಾರಿಕಾಂಬಾ ದೇವಿಯ ಜಾತ್ರೋತ್ಸವದಲ್ಲಿ ಪ್ರಾಣಿಬಲಿಯನ್ನು ಕಡ್ಡಾಯವಾಗಿ ನಿಷೇಧಿಸಿದ್ದು. ಪ್ರಾಣಿಬಲಿ ಕೊಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ ತಿಳಿಸಿದರು.
ಬೆಳೆಬಾಳುವ ವಸ್ತುಗಳನ್ನು ಹಾಗೂ ಆಭರಣಗಳನ್ನು ಜನಸಂದಣಿ ಪ್ರದೇಶದಲ್ಲಿ ಸೇರಿಸಿಕೊಳ್ಳಬೇಡಿ . ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ನಂತರ ರಥೋತ್ಸವ ಹಾಗೂ ಚೌಕಿ ಮನೆಯ ಸ್ಥಳವನ್ನು ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಪಿಎಸ್ಐ ತಿಮ್ಮಣ್ಣ ಚಾಮನೂರು. ನಾಗರತ್ನಮ್ಮ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಹಾಗೂ ಗ್ರಾಮದ ಮುಖಂಡರು ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
