;

ಮಹಿಳಾ ದಿನಾಚರಣೆ ಅಂಗವಾಗಿ ಬಾಗಳಿ ಗ್ರಾಮದಲ್ಲಿ ‘ಕಾವ್ಯ ರಂಗರೂಪಕ’ ಪ್ರದರ್ಶನ !!

ಮಹಿಳಾ ದಿನಾಚರಣೆ ಅಂಗವಾಗಿ ಬಾಗಳಿ ಗ್ರಾಮದಲ್ಲಿ ‘ಕಾವ್ಯ ರಂಗರೂಪಕ’ ಪ್ರದರ್ಶನ !!

ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದಲ್ಲಿ ಶ್ರೀ ಎಂಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಸಮಾರಂಭದಲ್ಲಿ ‘ಕಾವ್ಯ ರಂಗ ರೂಪಕ ‘ ನಾಟಕ ಪ್ರದರ್ಶನ ನಡೆಯಿತು. ಇದು ವಿಲ್ಸನ್ ಕಟೀಲ್ ರವರ ನಿಷೇಧಕ್ಕೊಳಪಟ್ಟ ಒಂದು ನೋಟು, ಮತ್ತು ಇತರೆ ಕವಿತೆಗಳನ್ನು ಒಳಗೊಂಡ ನಾಟಕವಾಗಿತ್ತು ,ಇದರ ರಂಗರೂಪ ಮತ್ತು ನಿರ್ದೇಶನವನ್ನ ಅಜಯ.ಚ ಮಾಡಿದ್ದರು ರಂಗಭಾರತಿಯ ಯುವ ಕಲಾವಿದರು ಅಭಿನಯಿಸಿದರು.
ಈ ಕಾಯ೯ಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಮ.ನಿ.ಪ್ರ. ಚೆನ್ನಬಸವ ಸ್ವಾಮಿಗಳು ಗುಡ್ಡದ ವಿರಕ್ತ ಸಂಸ್ಥಾನ ಮಠ ನೀಲಗುಂದ ಸ್ವಾಮೀಜಿಗಳು ಗ್ರಾಮೀಣ ಭಾಗದ ಜನರಿಗೆ ಆಧುನಿಕ ರಂಗಭೂಮಿ ಹೊಸದು! ಇಂತಹ ಪ್ರದರ್ಶನದ ಮೂಲಕ ಅರ್ಥೈಸಬೇಕಿದೆ ಎಂದು ಅಭಿಪ್ರಾಯ ಪಟ್ಟರು!.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಅವರು ರಂಗಭಾರತಿ ಐದು ದಶಕಗಳಿಂದ ರಂಗಭೂಮಿ ಗೆ ವಿಭಿನ್ನ ಪ್ರಯೋಗಗಳನ್ನು ನೀಡುತ್ತಾ ಬಂದಿದೆ ಅದರ ಮುಂದುವರೆದ ಭಾಗವಾಗಿ ಶ್ರೀಮತಿ‌ ಸುಮಾ ವಿಜಯ್ ಅವರ ನೇತೃತ್ವದಲ್ಲಿ ವಿಭಿನ್ನ ಪ್ರಯೋಗಗಳ ಮೂಲಭೂತ ರಂಗಭಾರತಿ ಮುಂದುವರೆಯುತ್ತಿದೆ!
ಪ್ರಸ್ತುತ ಕವಿತೆಗಳನ್ನೆ ಇಟ್ಟುಕೊಂಡು ನಾಟಕ ಕಟ್ಟಿರುವುದು ವಿಭಿನ್ನ ಪ್ರಯೋಗ, ನೋಟ್ ಬ್ಯಾನ್ ಆದ ದಿನದಿಂದ ಇವತ್ತಿನವರೆಗೂ ನಡೆದ ವಿಧ್ಯಮಾನಗಳೆಲ್ಲದರ ಮೇಲೆ ಈ ನಾಟಕ ಬೆಳಕು ಚೆಲ್ಲುತ್ತಿದೆ, ನಿಜಕ್ಕೂ ಜನರಿಗೆ ಆಗತ್ಯವಾಗಿ ತಲುಪಲೇ ಬೇಕಾದ ಆಗತ್ಯವಿದೆ,ಎಂದು ಅಭಿಪ್ರಾಯ ತಿಳಿಸಿ ಈ ಪ್ರಯೋಗ ಕಟ್ಟಿದ ನಿರ್ದೇಶಕರಿಗೆ, ತಂಡಕ್ಕೆ ಅಭಿನಂದನೆ ಸಲ್ಲಿಸಿ ಗೌರವಿಸಿದರು. ರಂಗ ಪ್ರಯೋಗದಲ್ಲಿ ಜಯಣ್ಣ, ಪ್ರಶಾಂತ, ಹರ್ಷ, ಪ್ರಕಾಶ್ ,ಚಂದ್ರಶೇಖರ, ದಿವ್ಯ,ಅಶ್ವನಿ, ಆದಿಶೇಷ ರಂಗಭಾರತಿಯ ಯುವ ಕಲಾವಿದರು ಅಭಿನಯಿಸಿದರು, ಈ ವಿಶೇಷ್ಟ ನಾಟಕವನ್ನ ಅಜಯ.ಚ ನಿರ್ದೇಶನ ಮಾಡಿದ್ದರು,ಸಂಗೀತ ನಿರ್ವಹಣೆಯಲ್ಲಿ ಮಲ್ಲೇಶ. ಮೈದೂರು ನಡೆಸಿಕೊಟ್ಟರು…

ವರದಿ.ಮಂಜುನಾಥ್, ಎಚ್, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;