ಜವಾಬ್ದಾರಿ ಸ್ಥಾನದಲ್ಲಿದ್ದು ರೈತ ವಿರೋಧಿ ಹೇಳಿಕೆ ಕೊಡುವುದು ಸರಿಯಲ್ಲ – ಕೆ. ವಿರುಪಾಕ್ಷಪ್ಪ.
ಸಿಂಧನೂರು : ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ಸ್ಥಾನದಲ್ಲಿ ಇದ್ದು, ನವಲಿ ಹತ್ತಿರದ ಸಮಾನಾಂತರ ಜಲಾಶಯದಿಂದ ಕ್ಷೇತ್ರಕ್ಕೆ ಒಳ್ಳೆಯದಾಗುವುದಿಲ್ಲ ಎಂಬ ಶಿವರಾಜ ತಂಗಡಗಿ ಹೇಳಿಕೆ ಸರಿಯಲ್ಲ,ಇದು ರೈತ ವಿರೋಧಿ ಹೇಳಿಕೆ ಎಂದರು.
ಸರಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಒಪ್ಪಿಗೆ ನೀಡಿದ್ದ ಶಿವರಾಜ ತಂಗಡಗಿ, ಸರ್ಕಾರ ಬಜೇಟನಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನ ನವಲಿಜಲಾಶಯಕ್ಕೆ ಮೀಸಲಿಟ್ಟಿದ್ದು ಮೂರು ಜಿಲ್ಲೆಗಳ ರೈತರಿಗೆ ಖುಷಿ ತಂದಿದೆ. ಆದರೆ ಕೇವಲ ತನ್ನ ಕ್ಷೇತ್ರದ ಜನರ ಹಿತವನ್ನು ಬಯಸಿದರೆ ಬೇರೆ ತಾಲೂಕಿನ ಅಥವಾ ಜಿಲ್ಲೆಯ ರೈತರಿಗೆ ಮಾಡಿದ ದ್ರೋಹವಾಗಿದೆ. ಮಾನ್ವಿ, ರಾಯಚೂರು ರೈತರಿಗೆ ನೀರು ತಲುಪುತಿಲ್ಲ ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಪ್ಟಿಯಲ್ಲಿ ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ ಮಾತನಾಡಿದರು.
ಇದು ಕಾಂಗ್ರೆಸ್ ಪಕ್ಷದ ಹೇಳಿಕೆಯೋ ಅಥವಾ ಅವರ ವೈಯಕ್ತಿಕ ಹೇಳಿಕೆಯೋ ಎಂಬುದು ಸ್ಪಪ್ಟಪಡಿಸಬೆಕೆಂದರು. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯದಲ್ಲಿ ಡಿ.ಕೆ.ಶಿವುಕುಮಾರ ಬಣ ಮತ್ತು ಸಿದ್ದರಾಮಯ್ಯ ಬಣ ತಾಲೂಕಿನಲ್ಲಿ ಹಂಪನಗೌಡ ಬಾದರ್ಲಿ ಬಣ, ಬಸನಗೌಡ ಬಾದರ್ಲಿ ಬಣ ಈ ಎರಡು ಬಣಗಳ ಗೊಂದಲದಿಂದ ಕಾರ್ಯಕರ್ತರು ಹೊರಬನ್ನಿ ಎಲ್ಲಾರು ಸೇರಿ ಸುಂದರವಾದ ನಗರವನ್ನು ಕಟ್ಟೋಣ ಎಂದು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ, ಮೈಬೂಬು ಮೈತ್ರಿ ,ಮಲ್ಲಯ್ಯ, ದೇವರಾಜ ಜಾಲವಾಡಗಿ, ಪೂಜಪ್ಪ ಸುಕಾಲಪೇಟೆ ಇದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
