ಮಾಜಿ ಶಾಸಕರ ನಿವಾಸದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಿಂಧನೂರು : ಇಂದು ನಗರದ ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ ಅವರ ನಿವಾಸದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಿರಮ್ಮ ಮಾಜಿ ಪುರಸಭೆ ಸದಸ್ಯರು , ಮಹಿಳಾ ಕಾಂಗ್ರೆಸ್ ಮುಖಂಡರು ವಹಿಸಿದ್ದರು.
” ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” : ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ನಮ್ಮ ಪರಂಪರೆ ಕಲಿಸಿದೆ.ಮಹಿಳೆಗೆ ಒಳ್ಳೆಯ ಸ್ಥಾನಮಾನ ಕೊಟ್ಟರೆ ಸಾರ್ಥಕವಾಗುತ್ತದೆ. 21ನೇ ಶತಮಾನದಲ್ಲಿ ಎಲ್ಲಾ ರಂಗಗಳಲ್ಲೂ ಚಾಪೂ ಮೂಡಿಸಿದ್ದಾಳೆ. ಮಹಿಳೆಗೆ ಎಲ್ಲಿ ಸ್ವಾತಂತ್ರ್ಯ ಸಿಗುತ್ತದೆಯೋ ಅಲ್ಲಿ ಗತ್ತು ದೌಲತ್ತನ್ನು, ಸ್ತ್ರೀ ಕುಲಕ್ಕೆ ಕಳಂಕ ತರದೇ ಕಷ್ಟಗಳನ್ನು ಸಹಿಸಿಕೊಂಡು ಪೂಜ್ಯನೀಯ ಸ್ಥಾನದಲ್ಲಿ ಮಹಿಳೆ ನೆಲೆಸಿದ್ದಾಳೆ ಎಂದು ದ್ರಾಕ್ಷಾಯಿಣಿ ಮಾಲಿ ಪಾಟೀಲ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ನಂತರ ನಾಗರತ್ನ ಮಹಿಳಾ ಘಟಕ ಅಧ್ಯಕ್ಷರು ಮಾತನಾಡಿ ಮಹಿಳೆಯರ ಕಾರ್ಯಕ್ಷೇತ್ರದ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ ಎಂದರು.
ಈ ಸಂದರ್ಭದಲ್ಲಿ ಪಂಪನಗೌಡ ಬಾದರ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ, ಮಲ್ಲಿಕಾರ್ಜುನ ಪಾಟೀಲ್ ನಗರಸಭೆ ಅಧ್ಯಕ್ಷರು , ಮುರ್ತುಜಾ ಹುಸೇನ್ ನಗರಸಭೆ ಉಪಾಧ್ಯಕ್ಷರು, ಖಾಜಿಮಲ್ಲಿಕ್ ಅಧ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್ , ಅನಿಲ್ ಕುಮಾರ್ ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ನಗರಸಭಾ ಸದಸ್ಯರಾದ ಶ್ರೀಮತಿ ಸರಿತಾ ರಾಜು ದತ್ತುರಾವ , ಶ್ರೀಮತಿ ಮಂಜುಳಾ ಪ್ರಭುರಾಜ್ , ಶ್ರೀಮತಿ ನಾಗಮ್ಮ ಛತ್ರಪ್ಪ, ಶ್ರೀಮತಿ ಲಕ್ಷ್ಮಿ ತಿಮ್ಮಯ್ಯ ಬಂಗಿ, ಶ್ರೀಮತಿ ಜಬೀನಾ ಬೇಗಂ, ಮೊಹಮ್ಮದ್ ಕರೀಂ ಸಾಬ, ಶ್ರೀಮತಿ ಯಂಕಮ್ಮ ಗೊರೆಬಾಳ, ಮುನೀರ ಪಾಷಾ , ಶಬ್ಬಿರ್ ನಾಯಕ, ಶೇಖರಪ್ಪ ಕೆಎಂಎಸ್, ಎಚ್ ಬಾಷಾ, ಆಲಮ್ ಭಾಷಾ , ಶೇಖರಪ್ಪ ಗಿಣಿವಾರ , ಸುರೇಶ್ ಜಾದವ್, ಹಾಗೂ ಪಕ್ಷದ ಕಾರ್ಯಕರ್ತರು ಇನ್ನು ಮುಂತಾದವರು ಉಪಸ್ಥಿತರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
