ಇಂದು ಚಳ್ಳಕೆರೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2022 ಹಾಗೂ ಬಾಲ್ಯ ವಿವಾಹ ನಿಷೇಧ ಅಭಿಯಾನ” ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದೆ.
ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ರೋಟರಿ ಕ್ಲಬ್, ಎಂ.ಎಸ್.ಸಿ.ಟಿ.ಸಿ ತಾಲೂಕು ಸ್ತ್ರಿಶಕ್ತಿ ಒಕ್ಕೂಟ, ಸರ್ಕಾರಿ ನೌಕರರ ಸಂಘ, ಆಶಾ ಕಾರ್ಯಕರ್ತರ ಒಕ್ಕೂಟ, ಸಾಂತ್ವನ ಕೇಂದ್ರ ಎಸ್.ಕೆ.ಆರ್.ಡಿ.ಪಿ, ವಿವಿಧ ಮಹಿಳಾ ಸಂಘ-ಸಂಸ್ಥೆಗಳು, ಮಹಿಳಾ ದಿನಾಚರಣಾ ಆಚರಣಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಎನ್. ರಘುಮೂರ್ತಿ, ನಗರಸಭಾ ಅದ್ಯಕ್ಷರಾದ ಶ್ರೀಮತಿ ಸುಮಕ್ಕ ಅಂಜನಪ್ಪ, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳ ಪ್ರಸನ್ನಕುಮಾರ್, ಸದಸ್ಯರಾದ ಶ್ರೀಮತಿ ಕವಿತಾ ಬೋರಮ್ಮ, ಶ್ರೀಮತಿ ಸುಮಕ್ಕ, ಶ್ರೀಮತಿ ಸುಜಾತಾ ಪಾಲಯ್ಯ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳಾದ ಶ್ರೀಮತಿ ಪ್ರೇಮಸುಧಾ, ಪಿ ಆರ್ ಇ ಡಿ ಎಇಇ ಶ್ರೀಮತಿ ಕಾವ್ಯ, ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಸಣ್ಣಸೂರಮ್ಮ, ಮಹಿಳಾ ಮುಖಂಡರುಗಳು ಉಪಸ್ಥಿತರಿದ್ದರು…

ವರದಿ. ಚಕ್ರಿ ಬಸವರಾಜ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
