“ಹರಮುನಿದರೆ ಗುರು ಕಾಯುಬಲ್ಲನು, ಗುರು ಮುನಿದರೆ ಹರ ಕಾಯಬಲ್ಲನೇ”- ಮಂಜಮ್ಮ ಜೋಗತಿ.
ಸಿಂಧನೂರು : ಮಕ್ಕಳು ಮೊಬೈಲ್ ಅತೀ ಹೆಚ್ಚು ಬಳಸಬೇಡಿ, ಮೊಬೈಲ್ ತಲೆ ತಗ್ಗಿಸಿ ನೋಡುವಾಗೇ ಮಾಡುತ್ತೆ ಜೀವಂತ ತಲೆ ಎತ್ತಲು ಬಿಡುವುದಿಲ್ಲ. ಅದರ ಬದಲು ಸಾಧಕರ ಆತ್ಮ ಚರಿತ್ರೆ, ಕನ್ನಡ ಪತ್ರಿಕೆಗಳನ್ನು ಓದಿ ಲಕ್ಷ ಲಕ್ಷ ಜನರಿಂದರೂ ತಲೆಎತ್ತಿ ತಿರುಗಿ ನೋಡುತ್ತೀರಿ. ತಂದೆ ತಾಯಿ, ಗುರುಗಳನ್ನು ಗೌರವದಿಂದ ನೋಡಿಕೊಳ್ಳಿ, ಶಾಲೆಯಲ್ಲಿ ಗುರುಗಳು ಕಾಲಿಂದ ಹೇಳಿದನ್ನು ಕೈಯಿಂದ ಮಾಡಿ ತೋರಿಸಿ “ಹರಮುನಿದರೆ ಗುರು ಕಾಯುಬಲ್ಲನು, ಗುರು ಮುನಿದರೆ ಹರ ಕಾಯಬಲ್ಲನೇ” ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಮಾಡಶಿರವಾರದಲ್ಲಿ ನಡೆದ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ಚರ್ಮವಾದ್ಯ ಕುರಿತು ಉಪನ್ಯಾಸ ಮತ್ತು ಪ್ರದರ್ಶನವನ್ನು ವಿಶೇಷ ಅಹ್ವಾನಿತರರಾಗಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚರ್ಮವಾದ್ಯವು ಸಂಸ್ಕೃತಿಯ ಪ್ರತೀಕ. ನಾಗರಿಕತೆ ಬೆಳೆದಂತೆ ಚರ್ಮವಾದ್ಯಗಳು ಕಣ್ಮರೆಯಾಗುತ್ತಾ ಪ್ಲಾಸ್ಟಿಕ್ ವಾದ್ಯಗಳಾಗಿವೆ. 10ರಿಂದ 20 ಕೆಜಿ ತೂಕವಿರುವ ಡೊಳ್ಳುಗಳನ್ನು ಹಾಕಿಕೊಂಡು ಕುಣಿಯುತ್ತಿದ್ದರು. ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗೆ ಕಳಿಸಿದಾಗ ಮಾತ್ರ ಸಾಧ್ಯ. ಹವ್ಯಾಸಿ ಕಲಾವಿದರಾಗಿ ವ್ರತ್ತಿ ಕಲಾವಿದರರಾಗಬೇಡಿ, ನನ್ನಂತ ಮಕ್ಕಳು ನಿಮ್ಮ ಮನೆಗಳಲ್ಲಿ ಜನಿಸಿದರೆ ಮನೆಯಿಂದ ಹೊರಗೆ ಕಳಿಸಬೇಡಿ.ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಅವರಿಗೆ ವಿದ್ಯಾಭ್ಯಾಸ ಕೊಡಿಸಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ನನ್ನಂತವರನ್ನು ಆಶ್ರಯ ಪಡೆದು ಟ್ರಾಫಿಕ್ ಸಿಗ್ನಲ್ ಬಳಿ, ಟೋಲ್ ಗೇಟಗಳಲ್ಲಿ, ಸೆಕ್ಷಗಳಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಹತ್ತಿರ ಬಲವಂತವಾಗಿ ಹಣ ಕೀವುವಂತಹ ಪರಿಸ್ಥಿತಿಗೆ ತಂದಿದ್ದು ಈ ಸಮಾಜ.ದೇವರು ದೇವಸ್ಥಾನದಲ್ಲಿ ಇಲ್ಲ, ನಾವು ಮಾಡುವ ಕೆಲಸದಲ್ಲಿ ಪರಮಾತ್ಮನನ್ನು ಕಾಣಬೇಕು. ನಾನು ಕೂಡ ನಿಮ್ಮತರ ಮೆರವಣಿಗೆಯಲ್ಲಿ ತಲೆಯಲ್ಲಿ ಬಿಂದಿಗೆ ಹೊತ್ತು ಕಾಲಿಗೆ ಗೆಜ್ಜೆ ಕಟ್ಟಿಕೊಂಡು 10 ರಿಂದ 20 ಕಿ.ಮೀ. ಕುಣಿಯುತ್ತಿರುವಾಗ ಕಾಲಲ್ಲಿ ರಕ್ತ ಸುರಿಯುತ್ತಿತ್ತು, ಇಂದು ಮಕ್ಕಳು 2 ರಿಂದ 3 ತಾಸು ಬೀಡು ಬಿಸಿಲನ್ನು ಲೆಕ್ಕಿಸದೇ ದಾರಿಯುದ್ದಕ್ಕೂ ಹೂವುಗಳನ್ನು ಚೆಲ್ಲುತ್ತಾ, ಡೊಳ್ಳು ಬಾರಿಸುತ್ತಾ ನಿಮ್ಮ ಕಾಲುಗಳಿಗೆ ನೋವಾದರೂ ಸಹಿಸಿಕೊಂಡಿದ್ದಿರಿ. ಇದನ್ನು ನೋಡಲು ನನ್ನ ತಂದೆ ತಾಯಿ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರು ಎಂದು ಭಾವುಕರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಜಾನಪದ ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಮೂಲ ಪರಂಪರೆಯ ಚರ್ಮವಾದ್ಯಗಳನ್ನು ಬಿಟ್ಟು ಪ್ಲಾಸ್ಟಿಕ್, ಫೈಬರ್ ವಾದ್ಯಗಳನ್ನು ಬಳಸುತ್ತಿದ್ದಾರೆ. ಚರ್ಮ ಸಿಗುವುದು ಕಷ್ಟವಿರುವುದು ಮತ್ತು ಚರ್ಮ ಹದ ಮಾಡುವುದು ಗೊತ್ತಿಲ್ಲ. ಪರಂಪರೆಯ ಮೂಲ ಚರ್ಮವಾದ್ಯಗಳನ್ನು ತಯಾರು ಮಾಡಿಕೊಂಡು ಬಾರಿಸುವ ನಾದಕ್ಕೂ ಫೈಬರ್ ವಾದ್ಯಗಳ ನಾದಕ್ಕೂ ವ್ಯತ್ಯಾಸವಿದೆ.
ತಲೆಮಾರಿನಿಂದ ಚರ್ಮವಾದ್ಯಗಳ ನಾದವೇ ಕೇಳಲು ಚಂದ. ಮೂಲ ತಲೆಮಾರಿನ ವಾದ್ಯಗಳನ್ನು ತಯಾರು ಮಾಡಿಕೊಂಡು ನುಡಿಸುವ ಪದ್ಧತಿಯನ್ನು ಕಲಾವಿದರಿಗೆ ಮೂಡಿಸುವ ಹಾಗೂ ಯುವಜನರಿಗೆ ಚರ್ಮವಾಧ್ಯ ಕುರಿತು ಉಪನ್ಯಾಸ ಮತ್ತು ಪ್ರದರ್ಶನವನ್ನು ಕರ್ನಾಟಕ ಜಾನಪದ ಅಕಾಡೆಮಿಯು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಲೆಗಳು ನಶಿಸಿ ಹೋಗಬಾರದು ಸದನದಲ್ಲಿ ಕಲಾವಿದರಿಗೆ ಕಡಿಮೆ ಅನುದಾನದ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮಂಜಮ್ಮ ಜೋಗತಿಯವರನ್ನ ತಾಲೂಕಿನ ಮಾಡಶಿರವಾರ ಗ್ರಾಮಕ್ಕೆ ಕರೆತಂದ ನಾರಾಯಣಪ್ಪ ಅವರಿಗೆ ಅಭಿನಂದನೆಗಳು ತಿಳಿಸಿದರು.
ಮಾಜಿ ಸಂಸದರು ಕೆ. ವಿರೂಪಾಕ್ಷಪ್ಪ ಮಾತನಾಡಿ ಜಗತ್ತಿನಲ್ಲಿ ಮನುಷ್ಯನ ನಾಗರಿಕತೆಗೆ ಬಂದ ನಂತರ ಚರ್ಮವಾದ್ಯ ಪ್ರಾರಂಭ ವಾಗಿರಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಚರ್ಮದ ನಗಾರಿಗಳನ್ನು ಬಾರಿಸುತ್ತಿದ್ದರು. ಪ್ರತಿ ಹಳ್ಳಿಗಳಲ್ಲಿ ನಮ್ಮ ಸಮಾಜ ಬಳಸುವಂತ ಡೊಳ್ಳು ಚರ್ಮದಿಂದ ಕೂಡಿರುತ್ತದೆ ಎಂದರು.
ನಾರಾಯಣಪ್ಪ ಮಾಡಶಿರವಾರ ಪ್ರಾಸ್ತಾವಿಕವಾಗಿ ನನ್ನ ತಾಲೂಕಿನ ಹೆಸರು ದೇಶದ ಮಟ್ಟದಲ್ಲಿ ಬೆಳೆಯಲು 64 ಪ್ರಕಾರಗಳನ್ನು ಹೊಂದಿದ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿಯವರು ಕಾರಣ, ಅವರು ನನಗೆ ಎರಡನೇ ತಾಯಿ, ಮತ್ತು ಗ್ರಾಮದ, ತಾಲೂಕಿನ ಮುಖಂಡರ ಸಹಕಾರವೂ ಕಾರಣ ಎಂದು ಮಾತನಾಡಿದರು.

ಬೀರಪ್ಪ ಶಂಬೋಜಿ ಜಿಲ್ಲಾಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ರಾಯಚೂರು ಚರ್ಮವಾಧ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕೆ.ಕರಿಯಪ್ಪ ಮಾಜಿ ಕೆಪಿಸಿಸಿ ಕಾರ್ಯದರ್ಶಿಗಳು ಬೆಂಗಳೂರು ಇವರು ಮಂಜಮ್ಮ ಜೋಗತಿಯ ಜೀವನ ಚರಿತ್ರೆಯ ದ್ವನಿಸುರುಳಿ ಬಿಡುಗಡೆ ಮಾಡಿದರು.
ಡೊಳ್ಳು ಕುಣಿತ : ಹನುಮಂತ ತಂಡ ಗೋನವಾರ, ಮಾಳಪ್ಪ ತಂಡ ಮಾಡಶಿರವಾರ, ಶ್ರೀನಿಧಿ ತಂಡ ಸಿಂಧನೂರ , ಹಲಗಿ ಮೇಳ : ಅಯ್ಯಪ್ಪ ತಂಡ ಗೋನವಾರ , ದರವೇಶ : ಸಬ್ಜಲಿ ತಂಡ ಮೈಬೂಬ್ ಕಾಲೋನಿ, ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ವಿಷೇಶವಾಗಿ ದೇವಪ್ಪ ತಂಡ ಚಿಕ್ಕ ಕೊಟ್ನೆಕಲ್ ಹಲಗಿಮೇಳ ನೋಡುಗರನ್ನು ಮತ್ತು ಮಂಜಮ್ಮ ಜೋಗತಿಯನ್ನು ಕುಡಿದು ಕುಪ್ಪಳಿಸುವಂತೆ ಮಾಡಿತು.
ಈ ಸಂದರ್ಭದಲ್ಲಿ ಶಿವನಗೌಡ ಗೋರೆಬಾಳ, ಶರಣಪ್ಪ ತೆಂಗಿನಕಾಯಿ, ಸಿದ್ರಾಮಪ್ಪ ಸಾಹುಕಾರ ಮಾಡಶಿರವಾರ, ನಿರುಪಾದೆಪ್ಪ ಕತ್ತಿಗೇರ , ರಾಜೇಶ್ವರಿ ಶ್ರೀನಿವಾಸ ಗ್ರಾ. ಪಂ.ಅಧ್ಯಕ್ಷರು,ಡಿ.ಎಚ್.ಕಂಬಳಿ ರಾಯಚೂರು ಸುದ್ದಿಬಿಂಬ ಸಂಪಾದಕರು , ಎಸ್. ದೇವೇಂದ್ರಗೌಡ , ಅಣ್ಣಪ್ಪ ಮೇಟಿ ಗೌಡ ಬೆಳಕು ಸಂಸ್ಥೆ ಮಾನ್ವಿ , ಶಂಕರ ದೇವರು ಹಿರೇಮಠ್ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ರಾಯಚೂರು , ವೀರೇಶ್ ಸಾಲಿಮಠ್ ಮುಖ್ಯಗುರುಗಳು ಹೊಸಳ್ಳಿ (ಇಜೆ), ಹನುಮಂತ ಭಜಂತ್ರಿ ಕ.ಕ.ಕಲಾವಿದರ ಒಕ್ಕೂಟ ಅಧ್ಯಕ್ಷರು ಸಿಂ, ಜಗದೀಶ್ ಪ್ರಭಾರಿ ಮುಖ್ಯ ಗುರುಗಳು ಮಾಡಶಿರವಾರ, ಧರ್ಮಮ್ಮ ಸಣ್ಣಬಸಪ್ಪ ಗ್ರಾ.ಪಂ.ಸ, ದುರ್ಗಮ್ಮ ಯಂಕಪ್ಪ ಗ್ರಾ. ಪಂ.ಸ , ತಾಯಪ್ಪ ಹೊಸೂರು , ಜಯಶ್ರೀ ಪಿ ಡಿ ಓ ಮಾಡಶಿರವಾರ , ಸುತ್ತಮುತ್ತಲಿನ ಗ್ರಾಮದ ಮುಖಂಡರು ,ವಿಧ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
