ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಭೀಮಸಮುದ್ರ
ಕುಡಿಯಲಿಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ
ಕುಡಿತಕ್ಕೆ ಹಣ ಕೊಡುತ್ತಿಲ್ಲವೆಂದು ಹೇಳಿ ಹೆಂಡತಿಯ ಸಂಗಡ ಜಗಳ ತೆಗೆದು ಕುಡಿದ ಅಮಲಿನಲ್ಲಿ ಕೋಲು ಮತ್ತು ಕಲ್ಲಿನಿಂದ ಹೊಡೆದು ಪತ್ನಿಯ ಕೈ ಕಾಲು ದೇಹಕ್ಕೆ ತೀವ್ರ ಗಾಯಗೊಳಿಸಿ ಪತಿಯೇ ಪತ್ನಿಯನ್ನು ಕೊಲೆಗೈದ ಘಟನೆ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಮಂಗಳವಾರ ಸಂಜೆ ಜರುಗಿದೆ.
ಭೀಮಸಮುದ್ರ ಗ್ರಾಮದ ಸಾಕಮ್ಮ (60 ವರ್ಷ) ಕೊಲೆಯಾದ ಮಹಿಳೆಯಾಗಿದ್ದು ಮೃತಳ ಪತಿ ಸಣ್ಣಮಲಿಯಪ್ಪ (65 ವರ್ಷ) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಂಗಳವಾರ ಸಂಜೆ ಸಣ್ಣಮಲಿಯಪ್ಪ ತನ್ನ ಹೆಂಡತಿ ಸಾಕಮ್ಮಳ ಹತ್ತಿರ ಬಂದು ಮದ್ಯ ಸೇವನೆಗೆ ಹಣ ಕೊಡುವಂತೆ ಪೀಡಿಸಿ ಹಣ ತೆಗೆದುಕೊಂಡು ಹೋಗಿ ಕುಡಿದು ಬಂದು ಕುಡಿಯಲು ಹಣ ಕೊಡುತ್ತಿಲ್ಲವೆಂದು ಹೆಂಡತಿಯೊಂದಿಗೆ ಜಗಳ ತೆಗೆದ ನಿನ್ನನ್ನು ಕೊಲೆ ಮಾಡುವುದಾಗಿ ಹೇಳುತ್ತಾ ಅಲ್ಲಿದ್ದ ಬಿದಿರಿನ ಕೋಲಿನಿಂದ ಕೈ ಕಾಲು ಮೈಗೆ ಹೊಡೆದಾಗ ಚೀರಾಡಿದ ಅವಳನ್ನು ಪಕ್ಕದ ಮನೆಯವರು ಬಂದು ಬಿಡಿಸಿದರು. ಕುಡಿದ ಅಮಲಿನಲ್ಲಿ ಬಿಡದೆ ಅಲ್ಲಿಯೇ ಇದ್ದ ಕಲ್ಲನ್ನು ಕೈಯಲ್ಲಿ ಹಿಡಿದು ಕಣ್ಣು, ತಲೆ ಬಾಯಿಗೆ ಮೈಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದರಿಂದ ಸಣ್ಣ ಮಲಿಯಪ್ಪನನ್ನು ಮನೆಯಿಂದ ಹೊರಗೆ ಕಳುಹಿಸಿ ಸಾಕಮ್ಮನನ್ನು ನೋಡಲಾಗಿ ತೀವ್ರಗಾಯವಾಗಿದ್ ಸಾಕಮ್ಮಳು ಮೃತಪಟ್ಟಿದ್ದಾಳೆಂದು ಗೊತ್ತಾಗಿರುತ್ತದೆ.
ನಂತರ ಚಳ್ಳಕೆರೆಯಲ್ಲಿ ಗಾರೆ ಕೆಲಸಕ್ಕೆ ಹೋಗಿದ್ದ ಮೃತಳ ಮಗ ವೆಂಕಟೇಶ ಬಂದು 02-02-2022 ನಸುಕಿನ ಜಾವ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ನಮ್ಮ ತಂದೆಯೇ ಕುಡಿದ ಮತ್ತಿನಲ್ಲಿ ಕೋಲಿನಿಂದ ಮತ್ತು ಕಲ್ಲಿನಿಂದ ಹೊಡೆದು ತೀವ್ರಗಾಯಗೊಳಿಸಿ ನಮ್ಮ ತಾಯಿಯನ್ನು ಕೊಲೆಮಾಡಿರುತ್ತಾನೆಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಮೇಲಾಧಿಕಾರಿಗಳ ಮಾರ್ಗದರ್ಶನ ಮೇರೆಗೆ ಸಿಪಿಐ ಸೋಮಶೇಖರ್ ಕೆಂಚ ರೆಡ್ಡಿ ಮತ್ತು ಪಿಎಸ್ಐ ತಿಮ್ಮಣ್ಣ ಚಾಮನೂರು ಮತ್ತು ಸಿಬ್ಬಂದಿ ಕೊಲೆ ಆರೋಪಿ ಸಣ್ಣಮಲಿಯಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
