ಪತ್ರಕರ್ತ ಸಂಘದ ರಾಯಚೂರು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ವೀರಭದ್ರಪ್ಪ ಜವಳಗೇರಾ ಅವರಿಗೆ ಸನ್ಮಾನ.
ಸಿಂಧನೂರು : ಇಂದು ನಗರದ ಪ್ರವಾಸಿ ಮಂದಿರದಲ್ಲಿ ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ತಾಲೂಕಿನ ಹಿರಿಯ ಪತ್ರಕರ್ತರಾದ ವೀರಭದ್ರಪ್ಪ ಜವಳಗೇರಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶಿವನಗೌಡ ಗೊರೆಬಾಳ, ಪರಮೇಶಪ್ಪ ಆದಿಮನಿ, ಹನುಮೇಶ್ ಸಾಲಗುಂದ ಬಿಜೆಪಿ ಅಧ್ಯಕ್ಷರು, ಸಿದ್ದು ಹೊಗಾರ್ ಬಿಜೆಪಿ ಯುವ ಮುಖಂಡ ಹಾಗೂ ವರದಿಗಾರರಾದ ಪಂಪಾಪತಿ ಹೂವಿನಭಾವಿ, ಹನುಮಂತಪ್ಪ, ದುಗ್ಗಪ್ಪ ಮಲ್ಲಾಪುರ, ವೀರೇಶ್ ಹೊಸಳ್ಳಿ, ಬಸಲಿಂಗಯ್ಯ ಸ್ವಾಮಿ, ಯಂಕೋಬ, ಶಿವರಾಜ್, ಯುನುಷ್ ಸನ್ಮಾನಿಸಿ ಗೌರವಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
