ವಿಧ್ಯಾರ್ಥಿ ನವೀನ್ ಸಾವಿಗೆ ಭಾರತದ ವೈಧ್ಯಕೀಯ ಶಿಕ್ಷಣ ವ್ಯವಸ್ಥೆಯೇ ಕಾರಣ : ಎಸ್ಎಫ್ಐ*,,,?

ವಿಧ್ಯಾರ್ಥಿ ನವೀನ್ ಸಾವಿಗೆ ಭಾರತದ ವೈಧ್ಯಕೀಯ ಶಿಕ್ಷಣ ವ್ಯವಸ್ಥೆಯೇ ಕಾರಣ : ಎಸ್ಎಫ್ಐ*,,,,,,,,,?

ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿಗೆ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾಗಿರುವುದು‌ ಅತ್ಯಂತ ನೋವಿನ ಸಂಗತಿ. ಮೃತ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ನಾಡಿನ ವಿದ್ಯಾರ್ಥಿ ಸಮುದಾಯದ ಪರವಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ರಾಜ್ಯ ಸಮಿತಿ ಸಾಂತ್ವನ ಕೋರಿದೆ.

ಯುಕ್ರೇನ್‌ನಲ್ಲಿ ನವೀನ್ ಸಾವಿಗೆ ಯುದ್ದದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಅಷ್ಟೇ ಹೊಣೆಯಾಗಿದೆ.

ರಷ್ಯಾ ಯುಕ್ರೇನ್‌ ಯುದ್ದಕ್ಕೆ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ ಎರಡು ರಾಷ್ಟ್ರಗಳು ಶಾಂತಿಯುತ ಮಾತುಕತೆಗೆ ಮಂದಾಗಿ ಯುದ್ದ ನಿಲ್ಲಿಸಬೇಕು. ಭಾರತದ ಪ್ರಧಾನಿಗಳು ಮತ್ತು ವಿದೇಶಾಂಗ ಇಲಾಖೆ ಅಂತರರಾಷ್ಟ್ರೀಯ ಸಂಬಂಧಗಳನ್ನು‌ ಬಳಸಿಕೊಂಡು ಯುದ್ಧದಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು, ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ನವೀನ್ ಸಾವಿಗೆ ಕಾರಣವಾಗಿರುವ ಭಾರತದ ವೈಧ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕೆಂದು ಎಸ್ಎಫ್ಐ ಒತ್ತಾಯಿಸಿದೆ.

ನಮ್ಮ ದೇಶ ಬಿಟ್ಟು ವೈಧ್ಯಕೀಯ ಶಿಕ್ಷಣಕ್ಕಾಗಿ ಹತ್ತಾರು ಸಾವಿರ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ ಹೋಗಲು ನಿಜವಾದ ಕಾರಣವಾಗಿರುವ ಅಂಶಗಳನ್ನು ಭಾರತ ಸರ್ಕಾರ ಮನಗಾಣಬೇಕು.
ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಅತಿಯಾದ ಖಾಸಗೀಕರಣ, ಕೇಂದ್ರೀಕರಣ ಹಾಗೂ ನೀಟ್ ಪ್ರವೇಶ ಪರೀಕ್ಷೆಯ ದುಷ್ಪರಿಣಾಮವಾಗಿ ‘ಭಾರತದಲ್ಲಿ ಪ್ರತಿವರ್ಷ ಸುಮಾರು 1.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಿದ್ದು, ಅವರಲ್ಲಿ 8 ಸಾವಿರ ಮಂದಿಗೆ ಮಾತ್ರ ಸರ್ಕಾರಿ ಸೀಟುಗಳು ಸೇರಿದಂತೆ 60 ಸಾವಿರ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತದೆ.
ಇನ್ನು ಮಿಕ್ಕ ಬಡ, ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಕೋಟ್ಯಂತರ ರುಪಾಯಿ ದುಬಾರಿ ಶುಲ್ಕ ಪಾವತಿ ಕಷ್ಟ, ಹಾಗೂ ನಿಗದಿತ ಸಂಖ್ಯೆಯಲ್ಲಿರುವ ಸೀಟು ಸೀಗುವುದಿಲ್ಲ. ಜೊತೆಗೆ ಭಾರತದಲ್ಲಿ ಕಲಿಯಲು ಶಿಕ್ಷಣ ಸಾಲ ಕೂಡ ಸಮರ್ಪಕವಾಗಿ ಸಿಗುವುದಿಲ್ಲ, ಉಕ್ರೇನ್ ನಲ್ಲಿ ಕಲಿಯುವುದಾದರೆ ಶೈಕ್ಷಣಿಕ ಸಾಲ ಸಹ ಸಿಗುತ್ತದೆ.

ಭಾರತದಲ್ಲಿ ನೀಟ್ ಪ್ರವೇಶ ಪರೀಕ್ಷೆ ಕಡ್ಡಾಯ ವಾಗಿದ್ದು, ನೀಟ್ ನಲ್ಲಿ ಕಡಿಮೆ ಅಂಕ ಪಡೆದವರಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರೆಯುವುದಿಲ್ಲ. ಈ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಐದಾರು ಲಕ್ಷ ರೂಪಾಯಿ ಸುರಿದು ತರಬೇತಿ ಪಡೆದುಕೊಳ್ಳಬೇಕು. ಈ ನೀಟ್ ಖಾಸಗಿ ಕೋಚಿಂಗ್ ಮಾಫಿಯಾ ಭಾರತದಲ್ಲಿ ಹತ್ತಾರು ಸಾವಿರ ಕೋಟಿ ರುಪಾಯಿಗಳ ದೊಡ್ಡ ವ್ಯವಹಾರವಾಗಿದೆ. ಈ ನೀಟ್ ಪರೀಕ್ಷೆಯಲ್ಲಿ ಅಗತ್ಯ ರ್ಯಾಂಕ್ ಪಡೆಯದ ಕಾರಣದಿಂದಾಗಿ ತಮಿಳುನಾಡು ಸೇರಿದಂತೆ ದೇಶದೆಲ್ಲೆಡೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದು ತಮಿಳುನಾಡು ರಾಜ್ಯ ಸರ್ಕಾರ ನೇಮಿಸಿದ ಎ.ಕೆ. ರಾಜನ್ ಆಯೋಗದ ತಿಳಿಸಿದೆ. ಆದ್ದರಿಂದ ನೀಟ್ ಪರೀಕ್ಷೆ ರದ್ದುಗೊಳಿಸಿ ಏಕ ರೂಪದ ಕೇಂದ್ರೀಯ ಶಾಸನ ಜಾರಿಗೆ ತರಲು ಎಸ್ಎಫ್ಐ ಒತ್ತಾಯಿಸುತ್ತದೆ.

ಪಿಯುಸಿ ಸೈನ್ಸ್ ಓದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿದ್ಯಾಭ್ಯಾಸದ ಕನಸು ದೊಡ್ಡದಾಗಿರುತ್ತದೆ. ಅಂಥವವರು ವೈದ್ಯಕೀಯ ಶಿಕ್ಷಣಕ್ಕೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದ ಉಕ್ರೇನ್‌ಗೆ ಹೋಗಲು ಇಚ್ಚಿಸುತ್ತಾರೆ. ಉಕ್ರೇನ್ ನಲ್ಲಿ ವಿವಿಧ ದೇಶಗಳ 75 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರ.

ಭಾರತೀಯ ವಿದ್ಯಾರ್ಥಿಗಳಿಗೆ ಇದು ಏಕೆ ನೆಚ್ಚಿನ ದೇಶವಾಯಿತು ಎಂದರೆ ಉಕ್ರೇನ್‌ನ ಖಾಸಗಿ ವೈದ್ಯಕೀಯ ಬೋಧನಾ ಶುಲ್ಕ ಭಾರತದ ಕಾಲೇಜುಗಳಿಗೆ ಹೋಲಿಸಿದರೆ ತುಂಬ ಅಗ್ಗ, ಉಕ್ರೇನಿಯನ್ ಕಾಲೇಜುಗಳು ವಿಶ್ವ ಆರೋಗ್ಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗಳ ಮಾನ್ಯತೆ ಗಳಿಸಿವೆ. ಯೂರೋಪ್ ವೈದ್ಯಕೀಯ ಮಂಡಳಿ, ಬ್ರಿಟನ್ ಜನರಲ್ ವೈದ್ಯಕೀಯ ಮಂಡಳಿಗಳು ಕೂಡ ಮಾನ್ಯತೆ ನೀಡಿರುವುದರಿಂದ ಯುರೋಪ್ ಸೇರಿದಂತೆ ಇಡೀ ವಿಶ್ವದಲ್ಲಿ ಅತ್ಯಂತ ಕಡಿಮೆ ವೆಚ್ಚದ ವೈಧ್ಯಕೀಯ ಶಿಕ್ಷಣ ನೀಡುವ ದೇಶ ಎಂಬ ಹಿರಿಮೆ ಉಕ್ರೇನ್ಗಿದೆ.

ಈ ಮೊದಲು ಯೂನಿಯನ್ ಆಫ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ಸ್ ಆಡಳಿತಕ್ಕೆ ಒಳಪಟ್ಟಿದ್ದ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಭಾರಿ ಅಗ್ಗ ಎಂಬುದು ಜನಜನಿತ. ಇದೇ ಕಾರಣಕ್ಕಾಗಿ ಭಾರತದಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ದುಸ್ಥಿತಿ ಉಂಟಾಗಿದೆ.

ಅಂಶಗಳನ್ನು ಮರೆಮಾಚಲು ” ಉಕ್ರೇನ್ ನಂತಹ ಸಣ್ಣ ರಾಷ್ಟ್ರದಲ್ಲಿ ಶಿಕ್ಷಣ ಪಡೆಯುವುದಕ್ಕಿಂತ ಭಾರತದಲ್ಲೇ ಶಿಕ್ಷಣ ಪಡೆಯಿರಿ ಎಂದು ಹೇಳಿರುವ ಪ್ರಧಾನಿ ಮೋದಿಯವರ ಬೇಜವಾಬ್ದಾರಿ ಹೇಳಿಕೆಯು ತೀರಾ ಹಾಸ್ಯಾಸ್ಪದವಾಗಿದೆ.

ಈ ಉಪದೇಶ ನೀಡುವ ಮೋದಿ ಸರ್ಕಾರ ಭಾರತ ದೇಶದಲ್ಲಿ ವೈಧ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಕನಿಷ್ಠ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಬೇಕು. ಆದರೆ ಕೇಂದ್ರ ಸರ್ಕಾರ ಈ ಯಾವುದೇ ಕೆಲಸಗಳು ಮಾಡದೆ ಜನರ ತೆರಿಗೆಯ ಹಣದಲ್ಲಿ ಪ್ರಚಾರಕ್ಕೆ ಪ್ರತಿಮೆಗಳು, ಮಂದಿರ, ಸೆಂಟ್ರಲ್ ವಿಸ್ಟಾ ಮುಂತಾದವು ನಿರ್ಮಿಸುವ ಮೂಲಕ ದೇಶದ ಶಿಕ್ಷಣ, ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ.

SFI ಜಿಲ್ಲಾ ಸಂಚಾಲಕರು
ಲಕ್ಷ್ಮಣ್ ರಾಮಾವತ್…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend