ಕಾಂಗ್ರೆಸ್ ಪಕ್ಷದ ದೂರಣೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು…!!!

ಸಿಂಧನೂರು : ಡಾ.ಬಿ.ಆರ್ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಅಡಿಯಲ್ಲಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಚರ್ಚಿಸಬೇಕಾದ ಕಾಂಗ್ರೆಸ್ ಪಕ್ಷ ವಿಧಾನಸಭೆಯ ಅಧಿವೇಶನದ ಕಾರ್ಯಕಲಾಪ ಮತ್ತು ಅಮೂಲ್ಯ ಸಮಯವನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿಕೊಟ್ಟು ಸಚಿವ ಈಶ್ವರಪ್ಪರ ಹೇಳಿಕೆಯನ್ನು ಮುಂದಿಟ್ಟು ಕೊಂಡು ಇಡೀ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳು ಇವೆ ಅದರ ಬಗ್ಗೆ ಚರ್ಚೆ ಮಾಡದೆ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ ರಾಜಿನಾಮೆ ಕೇಳುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲಾ. ಹಿಂದೆ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮತ್ತು ಕಾಶ್ಮೀರದ ಲಾಲಚೌಕ್ ನಲ್ಲಿ ರಾಷ್ಟದ್ವಜಹಾರಿಸುವಂತಹ ಸಂದರ್ಭದಲ್ಲಿ ಗೋಲಿಬಾರಗೆ ಆದೇಶ ಮಾಡಿದ್ದು ಅಂದಿನ ಕಾಂಗ್ರೆಸ್ ಸರಕಾರ. ದೇಶದಲ್ಲಿ ಹಿಂದೆ ಪೋಲಿಯೊ ಲಸಿಕೆ ಕಂಡು ಹಿಡಿದು ಹೋಗಲಾಡಿಸಲು ಸುಮಾರು ವರ್ಷಗಳು ಬೇಕಾಯಿತು,ಆದರೆ ಕೊರೊನಾ ಎಂಬ ಮಹಾಮಾರಿ ಹೋಗಲಾಡಿಸಲು ಹತ್ತು ತಿಂಗಳಲ್ಲಿ ಲಸಿಕೆ ತಯಾರಿಸಿ ಕೊರೋನಾ ವೈರಸನ್ನು ಹೋಗಲಾಡಿಸಿದರು. ಕಾಂಗ್ರೆಸ್ ನವರು ಜನರ ಜೊತೆ ಚೆಲ್ಲಾಟವಾಡುವುದನ್ನು ಬಿಡಬೇಕು.ಡಿ.ಕೆ. ಶಿವಕುಮಾರ ರವರು ಗುಂಡಾ ಸಂಸ್ಕೃತಿ ಬಿಟ್ಟು ಸಂವಿಧಾನದ ಅಡಿಯಲ್ಲಿ ಸರ್ಕಾರದ ಲೋಪದೋಶಗಳ ಬಗ್ಗೆ ಚರ್ಚೆ ಮಾಡದೇ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ. ಹಾಗಾಗಿ ರಾಜ್ಯದ ಜನತೆ ಕಾಂಗ್ರೆಸ್ ಧಿಕ್ಕಾರ ಹೇಳುವ ಮೂಲಕ ಅವರ ಅಧಿಕಾರದ ಕನಸನ್ನು ಭಗ್ನಗೊಳಿಸಬೇಕು ಎಂದು ಸಂಸದ ಕರಡಿ ಸಂಗಣ್ಣ ಮಾತನಾಡಿದರು.

ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ, ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ವಿರೋಧಿಸಿ ತಾಲೂಕು ಗ್ರಾಮೀಣ ಮತ್ತು ಮಂಡಲ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅಲ್ಲದೆ ದೇಶದಲ್ಲಿ ಕಾಂಗ್ರೆಸ್ ವಿರೋದಪಕ್ಷವಾಗಿ ಉಳಿದಿಲ್ಲ. ತಮ್ಮ ಲಜ್ಜೆಗೇಡಿತನದಿಂದ ರಾಜ್ಯದ ಜನರ ಸಮಯ ಹಾಗೂ ಸರ್ಕಾರದ ಹಣವನ್ನು ಹಾಳು ಮಾಡುತ್ತಿದ್ದಾರೆ. ವಿಧಾನಸಭೆ ಅಧಿವೇಶನ ನಡೆದರೆ 80 ರಿಂದ 1ಕೋಟಿ ಹಣ ಖರ್ಚಾಗುತ್ತದೆ. ಅದು ಸಾರ್ವಜನಿಕರು ಕಟ್ಟಿದ ಟ್ಯಾಕ್ಸ್ ಹಣವನ್ನು ಕಾಂಗ್ರೆಸ್ ವ್ಯರ್ಥಮಾಡುತ್ತಿದೆ.ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಶಾಲಾ ಕಾಲೇಜುಗಳ ಮಕ್ಕಳಿಗೂ ತೊಂದರೆ ಕೊಡುತ್ತಿದ್ದಾರೆ. ರಾಷ್ಟದ್ವಜದ ವಿಷಯವಾಗಿ ಈಶ್ವರಪ್ಪನವರ ಹೇಳಿಕೆ ಮುಂದಿಟ್ಟುಕೊಂಡು ಅವರ ರಾಜೀನಾಮೆಗೆ ಪಟ್ಟು ಹಿಡಿದು ಸದನದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಹಿಂದೆ ಕಾಶ್ಮೀರದಲ್ಲಿ ಮುರಳಿ ಮನೋಹರ ಜೋಸಿ ಯವರ ನೇತ್ರತ್ವದಲ್ಲಿ ದ್ವಜಾ ಹಾರಿಸುವಂತಹ ಸಂಧರ್ಭದಲ್ಲಿ ಈಶ್ವರಪ್ಪನವರು ಭಾಗವಹಿಸಿದ್ದರು. ಅವರೊಬ್ಬ ಮಹಾನ್ ದೇಶಪ್ರೇಮಿ ಅವರಿಂದ ರಾಷ್ಟದ್ವಜಕ್ಕೆ ಅವಮಾನ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ನೀರಾವರಿ, ರೈತರ, ಬಡವರ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಯಾರಿಲ್ಲ.ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಾಂಧೀಜಿ ಅವರ ಕನಸಿನಂತೆ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವ ನಿಟ್ಟಿನಲ್ಲಿ ಕೆಲಸಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ಸುಪ್ರೀಂಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ ಆದರೆ ತೀರ್ಪು ಬರುವವರಿಗೂ ಕಾಯದೇ ಹೋರಾಟಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಇಂತಹವರಿಂದ ದೇಶ ಮತ್ತು ರಾಜ್ಯದ ಅಭಿವೃದ್ಧಿ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ್ ಅಚಾರ್ಯ ಮಾತನಾಡಿ, ಹಿಜಾಬ್ ಮತ್ತು ಸಮವಸ್ತ್ರ ವಿಷಯದಲ್ಲಿ ಕಾಂಗ್ರೆಸ್ ಗೊಂದಲದ ನಿಲುವಿನಿಂದ ಆಗಿರುವ ಹಾನಿ ಸರಿಪಡಿಸಿಕೊಳ್ಳುವ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವ ಸ್ವಾರ್ಥ ಹುನ್ನಾರಕ್ಕಾಗಿ ರಾಜ್ಯದ ಮಹತ್ವದ ಅಧಿವೇಶನವನ್ನು ವ್ಯರ್ಥ ಮಾಡಿರುವುದು ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಮಾಡಿದ ದ್ರೋಹವಾಗಿದೆ ಎಂದರು.

ಕೊಲ್ಲಾಶೇಷಗಿರಿ ರಾವ್ ಮಾತನಾಡಿ ಕಾಂಗ್ರೆಸ್‌ನವರ ಬೇಜವಾಬ್ದಾರಿತನ ಇಡೀ ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ.ವಿನಾ ಕಾರಣ ಸದನದಕಾರ್ಯಕಲಾಪಗಳನ್ನು ನುಂಗಿ ಹಾಕಿದ್ದಾರೆ. ಕಲಾಪ ಅರಂಭವಾದ ಬಳಿಕ ಪ್ರತಿದಿನವೂ ಸದನದಲ್ಲಿ ಗಲಾಟೆ ಮಾಡಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶವನ್ನೇ ಕಲ್ಪಿಸದಂತಹ ವಾತಾವರಣ ನಿರ್ಮಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಸಂವಿಧಾನದ ಪ್ರಕಾರ ಎಲ್ಲ ವರ್ಗದವರಿಗೂ ಸಮಾನ ಅವಕಾಶವಿದೆ.ನಮ್ಮ ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸುವುದಕ್ಕಲ. ನಿಮ್ಮ ಮನೆಗಳಲ್ಲಿ ಆಚರಿಸಿಕೊಳ್ಳಲು ನಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ಆದಿಮನಿ ವಿರಲಕ್ಷ್ಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಮರೇಗೌಡ ವಿರುಪಾಪೂರು, ಎಂ. ದೊಡ್ಡಬಸವರಾಜ್, ಶಿವುನಗೌಡ ಗೋರೆಬಾಳ, ಪರಮೇಶಪ್ಪ ,ಹನುಮೇಶ ಸಾಲುಗುಂದಾ, ಅಮರೇಶ್ ರೈತರ ಕ್ಯಾಂಪ್,ವೀರೇಶ ಇಲ್ಲೂರು,ಪ್ರೇಮ ಸಿದ್ಧಾಂತಿ ಮಠ, ಮಮತಾ ಹಿರೇಮಠ, ಶೈಲಜಾ ಶಡಕ್ಷರಿ, ಮಂಜುನಾಥ, ಸಿದ್ದರಾಮೇಶ, ದೇವೇಂದ್ರಪ್ಪ, ಸಿದ್ದು ಹೂಗಾರ, ಹನುಮಂತರೆಡ್ಡಿ,ಇನ್ನೂ ಅನೇಕರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend