ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ – ಡಾ. ನಾಗವೇಣಿ .
ರಾಯಚೂರು : ಬೆಳಗಾವಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಕಾಮುಕ ಪಾತಕಿಗಳಿಗೆ ಗಲ್ಲು ಶಿಕ್ಷೆ ಒಳಪಡಿಸಬೇಕೆಂದು ಒತ್ತಾಯಿಸಿ ಡಾ.ನಾಗವೇಣಿ ಎಸ್. ಪಾಟೀಲ್ ಮಹಿಳಾ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಕಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಬೆಳಗಾವಿಯಲ್ಲಿ ಕುರಿಗಾಯಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದಿದ್ದು, ಮಾನವ ಸಮಾಜದಲ್ಲಿ ತಲೆತಗ್ಗಿಸುವಂಥ ವಿಷಯವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದ ಶ್ರೀಮತಿ ಲಕ್ಷ್ಮವ್ವ 33 ವರ್ಷ ಅತ್ಯಾಚಾರ ಕೊಲೆಗೀಡಾದ ಮಹಿಳೆ. ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರಹದ್ದಿನ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಮಹಿಳೆ ಮಧ್ಯಾಹ್ನದ ವೇಳೆ ಹೊಲದಲ್ಲಿ ಕಟ್ಟಿಗೆ ತರಲು ಹೋದಾಗ ದುಷ್ಕರ್ಮಿಗಳು ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಇಂತಹ ದುಷ್ಕರ್ಮಿಗಳನ್ನು ಸರಕಾರ ಬಂದಿಸಿ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಡಾ. ನಾಗವೇಣಿ ಮಹಿಳಾ ಕಾರ್ಯಕರ್ತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿರ್ಮಲ ಬಿಚ್ಚಾಲೆ,ಶಶಿಕಲಾಭೀಮರಾಯ,ಮಾಲಾ ಬಜಂತ್ರಿ, ರೂಪ ಶ್ರೀನಿವಾಸ್ ನಾಯಕ, ಜಯಲಕ್ಷ್ಮಿ ಬೊಮ್ಮನಾಳ, ಭಾರತಿ ವೆಂಕಣ್ಣ, ಲಿಂಗರಾಜ್ ಅನಿತಾ, ನರಸಪ್ಪ ದಂಡೂರ, ಗುರುಪ್ರಸಾದ, ಹರಗಯ್ಯ ಹೊನ್ನಪ್ಪ ಲಿಂಗರಾಜ್ ಇನ್ನೂ ಅನೇಕರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
