ನಟ ಚೇತನ್ ಬಿಡುಗಡೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ…!!!

ನಟ ಚೇತನ್ ಬಿಡುಗಡೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ.

ಸಿಂಧನೂರು : ಸಾಮಾಜಿಕ ಕಾರ್ಯಕರ್ತ ಹಾಗೂ ಚಿತ್ರನಟ ಚೇತನ್ ಕುಮಾರ್ ಅವರನ್ನು ಅವರ ಮನೆಯವರಿಗೆ ಮಾಹಿತಿಯಿಲ್ಲದಂತೆ ದುರುದ್ದೇಶಪೂರಿತವಾಗಿ ಪೊಲೀಸರು ಏಕಾಏಕಿ ಬಂಧಿಸಿರುವ ಕೃತ್ಯವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಿನಿ ವಿಧಾನಸೌಧದ ತಹಸೀಲ್ ಕಛೇರಿಯಲ್ಲಿ ಪ್ರತಿಭಟನೆ ಮೂಲಕ ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಈ ನಡೆ ಪಜಾಸತ್ಮಾಕ ಹಾಗೂ ಸಂವಿಧಾನದ ಆಶಯಗಳಡಿ ಮಾತನಾಡುವವರನ್ನು ಬಲವಂತವಾಗಿ ಬಾಯಿ ಮುಚ್ಚಿಸುವ ಕ್ರಮವಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ (Freedom of expression) ಮೇಲಿನ ದಾಳಿಯಾಗಿದೆ.

ಸಂವಿಧಾನ ಕಲಂ 19(1) (ಎ) ಅಡಿ ಭಾರತ ಸಮಸ್ತ ನಾಗರಿಕರಿಗೂ ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಆದರೆ, ಸಂವಿಧಾನದ ಹಕ್ಕಿನಡಿ ಜನಪರವಾಗಿ ಮತ್ತು ಪ್ರಜಾಸತ್ಯಾತ್ಮಕವಾಗಿ ಮಾತನಾಡುವುದನ್ನೇ ಅಪರಾಧವೆಂಬಂತೆ ಬಿಂಬಿಸಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಜನಸಾಮಾನರನ್ನು ಬಂಧಿಸುತ್ತಿರುವುದು ಸಂವಿಧಾನಬಾಹಿರವಾಗಿದೆ. ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ಕುಮಾರ್‌ ಟ್ವಿಟರ್‌ನಲ್ಲಿವಿಷಯವೊಂದನ್ನು ಹಂಚಿಕೆ ಮಾಡಿದ್ದಾರೆಂಬುವುದನ್ನು ನೆಪವಾಗಿಟ್ಟುಕೊಂಡು ಪೊಲೀಸರು ಸುಮೊಟೊ ಕೇಸ್ ದಾಖಲಿಸಿ ಏಕಾಏಕಿ ಬಂಧಿಸಿರುವುದು ಖಂಡನೀಯವಾಗಿದೆ. ಸರ್ಕಾರದಲ್ಲಿ ಸಚಿವರಾಗಿರುವವರು, ಕೆಲ ಶಾಸಕರು, ಪಕ್ಷಗಳ ಮುಖಂಡರು ಸೇರಿದಂತೆ ಬಜರಂಗದಳ, ವಿಶ್ವಹಿಂದೂ ಪರಿಷತ್‌ನ ಕೆಲವರು ಕೋಮುಗಲಭೆ ಎಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪಣತೊಟ್ಟವರಂತೆ ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳನ್ನು ದಿನವೂ ಮೇಲಿಂದ ಮೇಲೆ ನೀಡಿದರೂ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಸಂವಿಧಾನ ದ್ರೋಹಿ ನೀತಿಗೆ ಸಾಕ್ಷಿಯಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದ್ದ ಮೂರು ಕೃಷಿ ಕಾನೂನುಗಳು ಹಾಗೂ ವಿದ್ಯುತ್ ಬಿಲ್ ಜಾರಿಗೆ ವಿರೋಧಿಸಿ ಹೊಸದಿಲ್ಲಿಯಲ್ಲಿ ಹೋರಾಟ ನಡೆಸುತ್ತಿದ್ದ ರೈತರನ್ನು ಬೆಂಬಲಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಕ್ಕೆ, ಕಳೆದ ವರ್ಷ ಬೆಂಗಳೂರಿನ ಪರಿಸರ ಕಾರ್ಯಕರ್ತ ದಿಶಾ ರವಿ ಅವರನ್ನು ಬಂಧಿಸಲಾಗಿತ್ತು. ಆದರ ಮುಂದುವರಿದ ಭಾಗದಂತೆ ಚೇತನ್‌ಕುಮಾರ್ ಅವರನ್ನು ಬಂಧಿಸಲಾಗಿದ್ದು, ಸರ್ಕಾರಗಳ ಈ ನಡೆ ಹೋರಾಟಗಾರರು ಮತ್ತು ಹೋರಾಟವನ್ನು ಹತ್ತಿಕ್ಕುವ ಕ್ರಮವಾಗಿದೆ. ರೈತರು ಕಾರ್ಮಿಕರು, ಬಡವರು, ನೊಂದವರ ಪರ ಧ್ವನಿ ಎತ್ತುವುದು ಹಾಗೂ ಸರ್ಕಾರದ ಜನದ್ರೋಹಿ ಆರ್ಥಿಕ ನೀತಿಗಳನ್ನು ಟೀಕಿಸುವುದೇ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಒಕ್ಕೂಟವು ಆಗ್ರಹಿಸಿದರು.

ಕರ್ನಾಟಕದ ಬಿಜೆಪಿ ಸರ್ಕಾರ ಹಿಜಾಬ್ ವಿಷಯವನ್ನು ಮುನ್ನೆಲೆಗೆ ತಂದು ಹಿಜಾಬ್ ತನಿಖೆಯನ್ನು ಎರಡು ವರ್ಷದ ಹಿಂದೆ ಹೆಣ್ಣುಮಗಳ ಮೇಲೆ ಅತ್ಯಾಚಾರವೆಸಗಿದ ವಿಷಯದಲ್ಲಿ ನ್ಯಾಯಾಧೀಶರೊಬ್ಬರು ಹೆಣ್ಣಿನ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಪ್ರಶ್ನೆಯನ್ನು ಕೇಳಿರುತ್ತಾರೆ ಮತ್ತು ಅತ್ಯಾಚಾರ ವೆಸಗಿದ ಆರೋಪಿಗೆಜಾಮೀನು ನೀಡಿರುತ್ತಾರೆ ಇದರ ಬಗ್ಗೆ ನಟ ಚೇತನ್ ರವರು ಸಾಮಾಜಿಕ ಜಾಲತಾಣದಲ್ಲಿ ಹೆಣ್ಣಿಗೆ ಗೌರವ ಕೊಡದ ನ್ಯಾಯಾಧೀಶರು ಹಿಜಾಬ್ ವಿಷಯದಲ್ಲಿ ಯಾವ ರೀತಿ ನ್ಯಾಯ ಕೊಡಬಲ್ಲರು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುತ್ತಾರೆ.ಈ ವಿಷಯದ ಸಂಬಂಧವಾಗಿ ಕರ್ನಾಟಕ ಬಿಜೆಪಿ ಸರ್ಕಾರ ಅವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿರುತ್ತಾರೆ ಆದರೆ ತಮ್ಮದೇ ಸರಕಾರದ ಸಚಿವರಾದ ಈಶ್ವರಪ್ಪ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಇನ್ನೂ ಅನೇಕ ಶಾಸಕರು ಆ್ಯಕ್ಷನ್ ಗೆ ರಿಯಾಕ್ಷನ್ ನಾವೇ ಕೊಡುತ್ತೇವೆ ಎಂದು ಹೇಳಿಕೆ ನೀಡಿರುತ್ತಾರೆ. ಆದರೆ ಅವರ ಮೇಲೆ ಯಾಕೆ ಸುಮೋಟೋ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನೆ ಮಾಡಿದರು.ಸಚಿವರ ಸಂಸದರ ಮೇಲೆ ಪ್ರಕರಣ ದಾಖಲಿಸಬೇಕು ನಟ ಚೇತನ್ ರವರನ್ನು ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಅವರನ್ನು ಬಿಡುಗಡೆ ಮಾಡುವರೆಗೂ ನಿರಂತರ ಹೋರಾಟ ಮಾಡಲಾಗುವುದೆಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಿಮೇಶ್ ಕವಿತಾಳ ಎಚ್ಚರಿಕೆ ನೀಡಿದರು.

ನಾಗರಾಜ ಪೂಜಾರಿ ಮಾತನಾಡಿ ಮಹಾರಾಷ್ಟ್ರದಲ್ಲಿನ ಭೀಮಾಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂಬಂಧಿ ಆನಂದ್ ತೇಲ್ತುಂಬ್ಳೆ ಸೇರಿದಂತೆ ಹಲವು ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ವಕೀಲರನ್ನು ಬಂಧಿಸಿ ಜೈಲಿನಲ್ಲಿಡಲಾಗಿದ್ದು, ಜನಪರವಾಗಿ ಮಾತನಾಡುವ ಧ್ವನಿಗಳು ಅಡಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸರ್ಕಾರದ ಎಲ್ಲಾ ಅಂಗಗಳನ್ನು ವಕೀಲರನ್ನು ಬಂಧಿಸಿ ಜೈಲಿನಲ್ಲಿಡಲಾಗಿದ್ದು, ಮತ್ತು ರಾಜ್ಯ ಸರ್ಕಾರಗಳು ಸರ್ಕಾರದ ಎಲ್ಲ ಅಂಗಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಈಗ ಬಹಿರಂಗ ಸತ್ಯವಾಗಿದೆ. ಒಂದುಕಡೆ ಎನ್‌ಎಂಪಿ (NATIONAL MONETISATION PIPELINE) ಹೆಸರಿನಲ್ಲಿ ಸರ್ಕಾರದ ಆಸ್ತಿಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹರಾಜುಹಾಕುತ್ತಲೇ ಇದೆ ಇನ್ನೊಂದು ಕಡೆ ಹುಸಿ ದೇಶಭಕ್ತಿಯನ್ನು ಹುಟ್ಟುಹಾಕಿ ಜನರಲ್ಲಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಸಂಪತ್ತು ಲೂಟಿ ಹೊಡೆಯುತ್ತಿರುವುದನ್ನು ಮರೆಮಾಚಲಾಗುತ್ತಿದೆ. ಹೋರಾಟಗಾರರನ್ನು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ.ಹಾಗಾಗಿ ನಟ ಚೇತನ್ ಬಂಧನ ಅಕ್ರಮವಾಗಿದ್ದು, ದುರುದ್ದೇಶದಿಂದ ಕೂಡಿದೆ. ಕೂಡಲೇ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕು ಹಾಗೂ ಹಿಂಸೆಗೆ ಪ್ರಚೋದಿಸುವ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ್ ಗೋರೆಬಾಳ, ಡಿ.ಎಚ್.ಕಂಬಳಿ,ಶೇಕ್ಷಾಖಾದ್ರಿ,ಎಸ್.ಎನ್.ವಿರೇಶ,ಬಸವರಾಜ ಕೊಂಡಿ, ಶಿವರಾಜ ಉಪ್ಪಲದೊಡ್ಡಿ, ಗುರುರಾಜ ಮುಕ್ಕುಂದಾ, ಬಸವರಾಜ ಹಸ್ಮಕಲ್, ದುರುಗೇಶ ಡಿ. ಎಸ್.ಪಿ. ಮೌನೇಶ ಬುದ್ದಿನ್ನಿ, ಮಂಜುನಾಥ ಸಾಸಲಮರಿ, ಇನ್ನು ಅನೇಕ ಮುಖಂಡರು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend