ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಎಸಿಬಿ ಎಸ್ಪಿ ಶ್ರೀಹರಿಬಾಬು…!!!ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಎಸಿಬಿ ಎಸ್ಪಿ ಶ್ರೀಹರಿಬಾಬು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಎಸಿಬಿ ಎಸ್ಪಿ ಶ್ರೀಹರಿಬಾಬು.

ಸಿಂಧನೂರು : ನಗರದ ಪ್ರವಾಸಿ ಮಂದಿರದಲ್ಲಿ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆ ರಾಯಚೂರು, ರವರಿಂದ ಸಾರ್ವಜನಿಕರಿಂದಭ್ರಷ್ಟಾಚಾರ,ಆಕ್ರಮ ಅಸ್ತಿ, ಸರಕಾರದ ಹಣ ದುರುಪಯೋಗ ಸಂಬಂಧಪಟ್ಟಂತೆ ಜನಸಾಮಾನ್ಯರಿಂದ ಅಹವಾಲು ಸ್ವೀಕರಿಸಿ ಎಸಿಬಿ ಎಸ್ಪಿ ಶ್ರೀಹರಿಬಾಬು ರವರು ಮಾತನಾಡಿ ಹನ್ನೊಂದು ಅರ್ಜಿಗಳು ಬಂದಿದ್ದು, ಇನ್ನೂ ಅನೇಕ ದೂರುದಾರರು ಬಂದು ಯಾವ ವಿಷಯಕ್ಕೆ ಸಂಬಂಧಿಸಿದ ದೂರುಗಳನ್ನು ಎಸಿಬಿಗೆ ಕೊಡಬೇಕು ಮತ್ತು ಯಾವ ದಾಖಲೆಗಳೂ ನೀಡಬೇಕು ಎಂದು ಮಾಹಿತಿ ತಿಳಿದುಕೊಂಡಿದ್ದಾರೆ. ಪತ್ರಿಕೆಯ ಮೂಲಕ ಪ್ರಕಟಣೆಹೊರಡಿಸಿದ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಬೆಳಗ್ಗೆನಿಂದ ಸಾರ್ವಜನಿಕರ ದೂರಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಎಸ್ಪಿ ರವರು ಹೇಳಿದರು.

ನಗರಸಭೆ ಮೇಲೆ ಕಳೆದ ವರ್ಷ ಲೋಕಾಯುಕ್ತದಿಂದ ದಾಳಿ ಮಾಡಲಾಗಿತ್ತು ದಾಳಿಯಾಗಿ ಒಂದು ವರ್ಷ ಕಳೆದು ಹೋಗಿದೆ ಯಾವ ರೀತಿ ಕ್ರಮ ಕೈಗೊಂಡಿದ್ದಿರಿ ಎಂಬ ಪತ್ರಕರ್ತರ ಪ್ರಶ್ನೆಗೆ
ಉತ್ತರಿಸಿದ ಎಸ್ಪಿ ಹರಿಬಾಬು ರವರು ತನಿಖೆ ನಡೆಯುತ್ತಿದೆ ಪೊಲೀಸ್ ಠಾಣೆಯಲ್ಲಿ ಆಗುವ ತನಕೆಗಿಂತ ಸವಿಸ್ತಾರವಾಗಿ ನಡೆಯುತ್ತದೆ ಎಲ್ಲಾ ದಾಖಲೆಗಳನ್ನು ಕಲೆಹಾಕಿ ದಾಳಿಯಾದಾಗ ಎಷ್ಟು ಫೈಲುಗಳು ಇದ್ದವು ಅದಕ್ಕೆ ಸಂಬಂಧಪಟ್ಟ ಸಾರ್ವಜನಿಕರನ್ನು ಕರೆಸಿ ಅವರ ಹೇಳಿಕೆಗಳನ್ನು ಪಡೆದು ಚಾರ್ಜ್ ಶೀಟ್ ಮಾಡಲಾಗುವುದು ಎಂದರು.

ಸರ್ಕಾರಿ ಅಧಿಕಾರಿಗಳು ಕಛೇರಿಯಲ್ಲಿ ಯಾರಾದರೂ ಲಂಚ ಅಥವಾ ಉಡುಗೊರೆ ರೂಪದಲ್ಲಿ ಯಾವುದಾದರೂ ವಸ್ತುಗಳ ಬೇಡಿಕೆ ಇಟ್ಟಲ್ಲಿ, ಮತ್ತು ಸರ್ಕಾರಿ ನೌಕರರು, ಅಧಿಕಾರಿಗಳು ಅವರ ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಅಂಥವರ ಮೇಲೆ ದೂರು ಬಂದರೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯಕುಮಾರ ಡಿ.ಎಸ್.ಪಿ, ಹಸನಸಾಬ್ ಪೋಲಿಸ್ ಇನ್ಸ್ಪೆಕ್ಟರ್ , ವಿಕ್ರಮ್ ರೆಡ್ಡಿ ಪೊಲೀಸ್ ಸಿಬ್ಬಂದಿ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend