ಶ್ರೀನಿವಾಸಾಚಾರಿ ವರದಿ ಅನುಷ್ಠಾನ ಇಲಾಖಾ ಸಚಿವರಿಂದ ಗ್ರೀನ್ ಸಿಗ್ನಲ್; ಕಪ್ಪು ಪಟ್ಟಿ “ಮುಷ್ಕರಕ್ಕೆ ವಿರಾಮ” – ಆದೇಶಗಳು ಹೊರಬೀಳಲು 15ದಿನಗಳ ಗಡುವು.,!!!!!!!?

*ಶ್ರೀ ಶ್ರೀನಿವಾಸಾಚಾರಿ ವರದಿ ಅನುಷ್ಠಾನ ಇಲಾಖಾ ಸಚಿವರಿಂದ ಗ್ರೀನ್ ಸಿಗ್ನಲ್; ಕಪ್ಪು ಪಟ್ಟಿ “ಮುಷ್ಕರಕ್ಕೆ ವಿರಾಮ” – ಆದೇಶಗಳು ಹೊರಬೀಳಲು 15ದಿನಗಳ ಗಡುವು.*,!!!!!!!?

ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒಟ್ಟು 11 ದಿನಗಳ ಕಪ್ಪು ಪಟ್ಟಿ ಧರಿಸಿ ಮುಷ್ಕರ ಮಾಡಿದ್ದು ಇದರ ಹಿನ್ನಲೆಯಲ್ಲಿ.

ಇಂದು ದಿ. 24.02.2022 ಕರೆದ ಸಚಿವರೊಂದಿಗಿನ ಸಭೆಯಲ್ಲಿ ಮಾನ್ಯ ಆರೋಗ್ಯ ಸಚಿವರು “ಶ್ರೀ ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ” *ಗ್ರೀನ್ ಸಿಗ್ನಲ್* ನೀಡಿದರು,

ಈ ಕೆಳಗೆ ನಮೂದಿಸಿದ ಪ್ರಮುಖ ಬೇಡಿಕೆಗಳ ವಿಷಯವಾಗಿ ನಡೆದ ಸುಧೀರ್ಘ ಚರ್ಚೆಯು ಯಶಸ್ವಿಯಾಗಿದೆ. ಆದರೆ ಬೇಡಿಕೆಗಳು ಈಡೇರಿದ ಬಗ್ಗೆ ಆದೇಶದ ರೂಪದಲ್ಲಿ ಅಥವಾ ಪೂರಕ ದಾಖಲಾತಿಯಾಗಿ ಕೈ ಸೇರುವವರೆಗೆ 15 ದಿನಗಳ ವರೆಗೆ ತಾತ್ಕಾಲಿಕವಾಗಿ ಸಾಂಕೇತಿಕ *ಕಪ್ಪು ಪಟ್ಟಿ ಧರಣಿಗೆ ವಿರಾಮ ನೀಡಲಾಗಿದೆ* ಒಂದು ವೇಳೆ ಅನುಷ್ಠಾನದಲ್ಲಿ ವಿಳಂಬವಾದಲ್ಲಿ ಅನಿವಾರ್ಯವಾಗಿ ನೌಕರರ ಹಿತಕಾಪಾಡಲು ಧರಣಿ ಮುಷ್ಕರ ಮಾಡಲು ಸಂಘವು ಹಿಂಜರಿಯುವುದಿಲ್ಲ ತಿಳಿಸಲಾಗಿದೆ.

ಮಾನ್ಯ ಅಭಿಯಾನ ನಿರ್ದೇಶಕರು ಸಭೆಗೆ ಎಲ್ಲರಿಗೆ ಸ್ವಾಗತಿಸಿದರು ಹಾಗೂ ಕೆಳಗಿನ ಅಂಶಗಳ ಮೇಲೆ ಬೆಳಕು ಚೆಲ್ಲಿ ಮುಕ್ತವಾಗಿ ಚರ್ಚೆಯು ಮಾನ್ಯ ಆರೋಗ್ಯ ಸಚಿವರು ರವರ ಅದ್ಯಕ್ಷತೆಯಲ್ಲಿ ನಡೆಯಿತು, ಮಾನ್ಯ ಶಾಸಕರು ಹಾಗೂ ಸಂಘದ ಗೌರವಾದ್ಯಕ್ಷರಾದ ಶ್ರೀ ಆಯನೂರ ಮಂಜುನಾಥರವರು ಸವಿವರವಾಗಿ ಈ ಕೆಳಗಿನ ಬಿಂದುಗಳ ಮೇಲೆ ನೌಕರರ ಪರವಾಗಿ ಮಾಹಿತಿ ಮತ್ತು ಬೇಡಿಕೆಗಳನ್ನು ಮಂಡನೆ ಮಾಡಿದರು.

*ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಶ್ರೀನಿವಾಸಚಾರಿ ನೇತೃತ್ವದಲ್ಲಿ ರಚಿಸಿದ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗಾಗಿ ಸರ್ಕಾರ ಬಧ್ದವಾಗಿದ್ದು ಮಾನ್ಯ ಮುಖ್ಯಮಂತ್ರಿರವರ ಗಮನಕ್ಕೆ ತಂದು ಆದೇಶ ಹೊರಡಿಸುವುದಾಗಿ ತಿಳಿಸಿದರು*
1.ವೇತನದಲ್ಲಿ 15%ವೇತನ ಹೆಚ್ಚಳಕ್ಕೆ ಸಹಮತ ನೀಡಿರುತ್ತಾರೆ👍

*2*. ಸೇವಾ ಭದ್ರತೆ ಅಥವಾ ಖಾಯಂಯಾತಿ ಬಗ್ಗೆ ಚರ್ಚಿಸಲಾಗಿ, ಕರ್ನಾಟಕದಲ್ಲಿ ಈ ಬಗ್ಗೆ ಒಂದು ಮಾದರಿಯನ್ನು ರೂಪಿಸಿ ಸೇವೆಗೆ ಭಧ್ರತೆ ನೀಡಲು ಕ್ರಮವಹಿಸುವುದಾಗಿ ತಿಳಿಸಿದರು.

*3*. ಬೀದರ್ ಮಾದರಿ *ಹೊರಗುತ್ತಿಗೆ ನೌಕರರಿಗಾಗಿ* ಸಂಘ ಸ್ಥಾಪಿಸುವ ಬಗ್ಗೆ ಚರ್ಚಿಸಲಾಗಿ “ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ” ಒಂದು ಸಂಘ ಅಥವಾ ಸಂಸ್ಥೆ ಮಾಡಿ ಅದರ ಮೂಲಕ ನೇಮಕಾತಿ ಮತ್ತು ವೇತನ ಪಾವತಿ ಮಾಡುವ ಬಗ್ಗೆ ಆದೇಶ ನೀಡಲು ಸಂಘವು ವಿನಂತಿಸಲಾಗಿದೆ.

*4*. ವೈದ್ಯಕೀಯ ಚಿಕಿತ್ಸಾ ಮರು ಪಾವತಿಗಾಗಿ ಚರ್ಚೆ ನಡೆಸಲಾಗಿ ಮೊದಲಿಗೆ *ಆಯುಷ್ಮಾನ್ ಭಾರತ್ (AB-ARK)* ಯೋಜನೆ ಮಂಜೂರು ಮಾಡುವುದಾಗಿ ಒಪ್ಪಿ ನಂತರದ ದಿನಗಳಲ್ಲಿ ಸಂಘದ ಸಹಮತಿಯೊಂದಿಗೆ ಖಾಯಂ ನೌಕರರಿಗೆ ನೀಡಿದಂತೆ ಕರ್ನಾಟಕ ಸರಕಾರದ *ಜ್ಯೋತಿ ಸಂಜೀವಿನಿ* ಯೋಜನೆ ಜಾರಿ ಮಾಡಲು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

*5*. ಗುಂಪು ವಿಮೆ ಸೌಲಭ್ಯ ಬಗ್ಗೆ ಒಪ್ಪಿಕೊಳ್ಳಲಾಗಿದೆ.

*6*. ಕೃಪಾಂಕ ಮತ್ತು ವಯೋಮಿತಿ – ಎಲ್ಲಾ ನೌಕರರಿಗೂ ಯಾವುದೇ ಇಲಾಖೆಯ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ “ವಿಶೇಷ ಸೇವಾ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ” ಸೌಲಭ್ಯಗಳನ್ನು ಒಪ್ಪಿಗೆ ನೀಡಲಾಗಿದೆ.

*7*. ವಿಶೇಷ ಸೇವಾ ಭತ್ಯೆ- ಎಲ್ಲಾ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ವಿಶೇಷ ಸೇವಾ ಭತ್ಯೆ ನೀಡಲು ಸರ್ಕಾರ ಒಪ್ಪಿದೆ

*8.* ವರ್ಗಾವಣೆ – ಚರ್ಚೆಯ ಸಂರ್ಧರ್ಭದಲ್ಲಿ ಈಗಾಗಲೇ ಹಲವಾರು ವರ್ಷದಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ಪಕ್ಷ “ವಿಶೇಷ ಪ್ರಕರಣ” ವೆಂದು ಸೇವಾ ಅವಧಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ವರ್ಗಾವಣೆ ಅವಶ್ಯವಿರುವ ನೌಕರರಿಗೆ “ಜಿಲ್ಲೆಯಿಂದ ಜಿಲ್ಲೆಗೆ” ಅಥವಾ “ಜಿಲ್ಲೆಯ ಒಳಗಡೆ” ಖಾಲಿ ಹುದ್ದೆ ಇರುವ ಸ್ಥಳದಲ್ಲಿ ವರ್ಗಾವಣೆ ಹಾಗೂ *ಪರಸ್ಪರ ವರ್ಗಾವಣೆಗೆ* ಅವಕಾಶ ಮಾಡಿ ಆದೇಶ ನೀಡಲು ಮನವಿ ಮಾಡಲಾಗಿ ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

*9*. ರಜೆ ಸೌಲಭ್ಯಗಳು – ಈಗ ಇರುವ ಸಾಂಧರ್ಭಿಕ ರಜೆಗಳನ್ನು ಹೆಚ್ಚಿಸಲು ವಾರದಲ್ಲಿ ಒಂದು ದಿನ ಕಡ್ಡಾಯ ರಜೆ(ವೀಕ್ಲಿ ಆಫ್) ನೀಡುವ ಬಗ್ಗೆ ಮತ್ತು
ರಜಾದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಪರ್ಯಾಯ ರಜೆ ನೀಡುವ ಬಗ್ಗೆ ಚರ್ಚಿಸಿ ಆದೇಶಿಸುವುದಾಗಿ ಸಭೆಗೆ ತಿಳಿಸಿದರು.

*10*. ನೌಕರ ಕುಂದು-ಕೊರತೆಗಳ ಸಭೆ- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೇತೃತ್ವದಲ್ಲಿ DHS ಸಭೆಯಲ್ಲಿ ಕಡ್ಡಾಯವಾಗಿ ಗುತ್ತಿಗೆ. ಹೊರಗುತ್ತಿಗೆ ನೌಕರರ ಕುಂದುಕೊರತೆ ಬಗ್ಗೆ ನಮ್ಮ ಸಂಘದ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆಗಳನ್ನು ಮಾಡಿ ಕ್ರಮವಹಿಸುವುದು ಹಾಗೂ ನಮ್ಮ ರಾಜ್ಯಮಟ್ಟದ ರಾಜ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ಸಂಘದ ಪದಾಧಿಕಾರಿಗಳೊಂದಿಗೆ ಕುಂದುಕೊರತೆಗಳ ಸಭೆ ಮಾಡಲು ಒಪ್ಪಿಗೆ ಸೂಚಿಸಿದರು.

*11*. ಬಾಂಡ್ ಪದ್ಧತಿ ಹಾಗೂ ಒಂದು ದಿನ ವಿರಾಮ ರದ್ದು ಪಡಿಸುವ ಬಗ್ಗೆ- ಒಂದು ದಿನ (1 day) ವಿರಾಮ ನೀಡುವ ಹಾಗೂ ಪ್ರತಿ ವರ್ಷ ಬಾಂಡ್ ಪದ್ಧತಿಯನ್ನು ಕೈಬಿಡಲು ಛತ್ತೀಸಘಡ ಹಾಗೂ ಹರಿಯಾಣದಲ್ಲಿ ರದ್ದು ಪಡಿಸಿದ ಹಾಗೆ ಪರಿಶೀಲಿಸಲಾಗುವುದೆಂದು ತಿಳಿಸಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

*12*. HRIS ತಂತ್ರಾಂಶ ಅನುಷ್ಟಾನ ಮಾಡುವುದು- ಮಾನವ ಸಂಪನ್ಮೂಲ ನಿರ್ವಹಣೆಗಾಗಿ HRIS ತಂತ್ರಾಂಶವನ್ನು ಎರಡು-ಮೂರು ತಿಂಗಳೊಳಗೆ ಅನುಷ್ಟಾನ ಮಾಡುವುದಾಗಿ ಸಭೆಗೆ ತಿಳಿಸಿದರು.

*13*. ಇಡಿಗಂಟು/ ಗ್ರಾಚ್ಯುಟಿ ಸೌಲಭ್ಯ ನೀಡುವ ಬಗ್ಗೆ (ಹಣರೂಪದ ಕೊಡುಗೆ)- ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕರ್ನಾಟಕ ರಾಜ್ಯದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವಂತೆ ಮತ್ತು ಅಸ್ಸಾಂ ರಾಜ್ಯದಲ್ಲಿ ನೀಡಿರುವಂತೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ಹಂಚಿಕೊಂಡರು.

*14*. ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ವಿಸ್ತರಣೆ ಮಾಡುವುದು- ಈ ಮೇಲೆ ಉಲ್ಲೇಖಿಸಿದ ಎಲ್ಲಾ ಬೇಡಿಕೆ ಹಾಗೂ ಸೇವಾ ಸೌಲಭ್ಯಗಳನ್ನು ಆರೋಗ್ಯ ಇಲಾಖೆಯ (ಇತರೆ ಯೋಜನೆಯ ಹಾಗೂ ಕಾರ್ಯಕ್ರಮಗಳಲ್ಲಿ, ಖಾಲಿ ಇರುವ ಎದುರು ಹುದ್ದೆಯ್ಲಲಿ ಕಾರ್ಯ ನಿರ್ವಹಿಸುತ್ತಿರುವ) ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ (ಅಡಿಯಲ್ಲಿ ಬರುವ ವೈದ್ಯಕೀಯ ಶಿಕ್ಷಣ ಕಾಲೇಜ್ ಗಳು ಮತ್ತು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ) ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ವಿಸ್ತರಣೆ ಮಾಡುವಂತೆ ಸಂಘವು ಮನವಿ ಮಾಡಲಾಗಿ ಅದಕ್ಕೆ ಸಕಾರಾತ್ಮಕವಾಗಿ ಸಭೆಯಲ್ಲಿ ಅಧಿಕಾರಿಗಳು ಸ್ಪಂಧಿಸಿದರು.

👉ಈ ಹಿಂದಿನ ಸಾಲಿನಲ್ಲಿ ನಡೆದ ಸಂಘಟನೆಯ ಮುಷ್ಕರದ 14 ದಿನಗಳ ಕಡಿತವಾದ ವೇತನ ಪಾವತಿಗಾಗಿ ಮಾಜಿ ಆರೋಗ್ಯ ಸಚಿವರ ಆದೇಶ ಪಾಲನೆಗೆ ಮನವಿ ಮಾಡಲಾಗಿ ಅಧಿಕಾರಿಗಳಿಂದ ಪುನರ್‌ ಪರಿಶೀಲನೆ ಮಾಡುವುದಾಗಿ ಸಭೆಗೆ ಮಾಹಿತಿ ನೀಡಿದರು.

👉ಕೋವಿಡ್ ಕಾರಣ ಮೃತ ಪಟ್ಟ ನೌಕರರ ಕುಟುಂಬಕ್ಕೆ ಪರಿಹಾರದ ವಿಷಯವಾಗಿ ಸಂಘದ ಮನವಿಯಂತೆ ಉಳಿದ ಗುತ್ತಿಗೆ ನೌಕರರ ಮೃತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಈ ಮೇಲ್ಕಾಣಿಸಿದ ಎಲ್ಲಾ ಚರ್ಚೆಗಳು ನೌಕರರ ಪೂರಕ ಹಾಗೂ ಸಕಾರಾತ್ಮಕವಾಗಿ ಈ ಸಭೆ ನಡೆಯಲು ಕಾರಣಿಕರ್ತರಾದ ಈ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಜೀ, ಮಾಜಿ ಆರೋಗ್ಯ ಸಚಿವರಾದ ಮಾನ್ಯ ಶ್ರೀ ಶ್ರೀರಾಮಲು, ಹಾಲಿ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಮತ್ತು ಶ್ರೀ.ಡಾ.ಸುಧಾಕರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮತ್ತು ಸಂಘದ ಗೌರವಾದ್ಯಕ್ಷರಾದ ಮಾನ್ಯ ಶ್ರೀ ಆಯನೂರು ಮಂಜುನಾಥ್ ಹಾಗೂ ನಮ್ಮ ಸಂಘದ ಕರೆಗೆ ಓಗೊಟ್ಟ ಮುಷ್ಕರದಲ್ಲಿ ಭಾಗಿಯಾದ ಎಲ್ಲಾ ಸದಸ್ಯರಿಗೂ ಸಂಘಟನೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತದೆ.

*ಎಲ್ಲಾ ವಿಷಯಗಳನ್ನು ಆದೇಶ ಮಾಡುವ ಮೂಲಕ ನೌಕರ ಹಿತ ಕಾಪಾಡಲು ಆಗ್ರಹಿಸುತ್ತದೆ ಒಂದು ವೇಳೆ ವಿಳಂಬ ಧೋರಣೆ ಅನುಸರಿಸಿದ್ದಲ್ಲಿ 15 ದಿನಗಳ ನಂತರ ಧರಣಿ ಮುಷ್ಕರ ಮಾಡಲು ಸದಾ ನೌಕರರ ಪರವಾಗಿ ಇರುವ ಸರ್ವ ಮುಖಂಡರ ಅಭಿಪ್ರಾಯದಂತೆ ನಿರ್ಧರಿಸಲಾಗಿದೆ.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend