ಹರ್ಷ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ.
ಸಿಂಧನೂರು: ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಮಿನಿ ವಿಧಾನಸೌಧದ ತಹಸೀಲ್ ಕಛೇರಿವರೆಗೂ ನೂರಾರು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಬಂದು ತಹಸೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.
ಕತ್ತಲಲ್ಲಿ ಗುಂಪು ಕಟ್ಟಿಕೊಂಡು ಬಂದು ಹಿಂದಿನಿಂದ ಇರಿಯುವ ಕುತಂತ್ರ,ಹೇಡಿತನ,ಪರಮಾವಧಿ,ಹರ್ಷನ ಕೊಲೆ ಪ್ರಕರಣ ಎನ್.ಐ.ಎ ತನಿಖೆಯಾಗಲಿ, ಓಟಿನ ರಾಜಕೀಯದ,ಡೋಂಗಿ ಸೆಕ್ಯುಲರ್ ವಾದಿಗಳ ಬೆಂಬಲದಿಂದ ಕೊಬ್ಬಿದ ಹಂದಿಗಳಂತಾದ ತಾಲಿಬಾನ್’, ಐಸಿಸಿ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರ ಹೇಡಿತನದ ಹೇಯ ಕೃತ್ಯಕ್ಕೆ ಮತ್ತೊಂದು ಬಲಿಯಾಗಿದೆ , ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಈ ಪಾಶವೀ ಕೃತ್ಯವನ್ನು ಕರ್ನಾಟಕ ಹಿಂದೂ ಜಾಗರಣ ವೇದಿಕೆ ಅತ್ಯುಗ್ರವಾಗಿ ಖಂಡಿಸುತ್ತದೆ. ಮತಾಂಧ ಕೊಲೆ ಪಾತಕಿಗಳನ್ನು ಕೂಡಲೇ ಬಂಧಿಸಿ.ಅವರೇ ಜಾರಿಯಾಗಲಿ ಎಂದು ಬಯಸುವ ಶರಿಯಾ ಕಾನೂನಿನಂತೆ ಶಿಕ್ಷೆಗೆ ಒಳಪಡಿಸುವಂತೆ ಕರ್ನಾಟಕ ಹಿಂದೂ ಜಾಗರಣ ವೇದಿಕೆ ಆಗ್ರಹಿಸುತ್ತದೆ ಎಂದರು.
ಸೈದ್ಧಾಂತಿಕ ನೆಲೆಯಲ್ಲಿ ಹೋರಾಡುವುದಕ್ಕೆ ಬದಲಾಗಿ ತಮ್ಮ ವಿಚಾರ ಒಪ್ಪದವರನ್ನು ಹತ್ಯೆ ಮಾಡುವ ಮೂಲಕ ಹಿಂದುತ್ವವನ್ನು ನಾಶ ಮಾಡಬಹುದೆಂಬ ಭ್ರಮೇಗೊಳಗಾದ ಮತಾಂಧ ಪಾಶವೀ ಶಕ್ತಿಗಳ ಕ್ರೂರ ಮಾನಸಿಕತೆಗೆ ಈ ಕೊಲೆ ಮತ್ತೊಂದು ಸಾಕ್ಷಿ. ಈ ಕೊಲೆಯಲ್ಲಿ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ನೇರ ಭಾಗಿಯಾಗಿವೆ ಎಂಬ ಬಲವಾದ ಸಂದೇಹ ಇದೆ. ಈ ಹಿಂದೆಯೂ ನಡೆದ ಹಲವಾರು ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿಯೂ ಇದೇ ಸಾಮ್ಯತೆ ಇರುವ ಹಾಗಿದೆ. ಕತ್ತಲಲ್ಲಿ ಗುಂಪು ಕಟ್ಟಿಕೊಂಡು ಒಂದು ಹಿಂದಿನಿಂದ ಇರಿಯುವ ಕುತಂತ್ರ ಇಲ್ಲೂ ಬಳಕೆಯಾಗಿದೆ.
ಹರ್ಷ ಕೊಲೆ ಪ್ರಕರಣ: ಜೊತೆಗೆ ಈ ಹಿಂದೆ ನಡೆದ ಎಲ್ಲಾಹಿಂದೂ ಕಾರ್ಯಕರ್ತರ ಕೊಲೆಗಳನ್ನು ಎನ್.ಐ.ಎ ತನಿಖೆ ನಡೆಸಿ,ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಹಿಂದೂ ಹರ್ಷನ ಕುಟುಂಬಕ್ಕೆ ತಕ್ಷಣ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವೇದಿಕೆ ಆಗ್ರಹಿಸಿದೆ.
ಹಿಜಾಬ್ ಸೇರಿದಂತೆ ರಾಜ್ಯದಾದ್ಯಂತ ಕೋಮುಗಲಬೆ ಎಬ್ಬಿಸಲು ಪ್ರಯತ್ನಿಸುತ್ತಿರುವ ಮತಾಂಧ ಶಕ್ತಿಗಳ ಸಂಚನ್ನು ಬಯಲಿಗೆಳೆಯುವಂತೆ ಸರಕಾರ ಮತ್ತು ಜಿಲ್ಲಾಡಳಿತಗಳನ್ನು ಕರ್ನಾಟಕ ಹಿಂದೂ ಜಾಗರಣ ವೇದಿಕೆಯು ಬಲವಾಗಿ ಆಗ್ರಹಿಸುತ್ತದೆ ಎಂದರು.
ಹಿಂದಿನ ಸರಕಾರದ ಸಮಯದಲ್ಲಿ ನಡೆದಂತೆ ಈಗಲೂ ಹಿಂದೂ ಕಾರ್ಯಕರ್ತರ ಕಗ್ಗೂಲೆ ನಡೆದರೆ ಈ ಸರಕಾರ ಬಂದು ಏನು ಪ್ರಯೋಜನ? ಇನ್ನೊಬ್ಬ ಕಾರ್ಯಕರ್ತನ ಕೂದಲೂ ಕೊಂಕಬಾರದು, ಆ ಭಯ ಹುಟ್ಟಿಸುವ ತಾಕತ್ತು ಈ ಸರಕಾರ ತೋರಿಸಬೇಕು, ಹಿಂದೂಗಳ ನಂಬಿಕೆ ಉಳಿಸಿಕೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧ್ವರಾಜ್ ಆಚಾರ್ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು, ಅಮರೇಗೌಡ ವಿರೂಪಾಪುರ, ಹನುಮೇಶ್ ಸಾಲಗುಂದ,ರವಿ ಉಪ್ಪಾರ,ಸಿದ್ದುಹೊಗಾರ,ಇತರರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
