ಯಂಗ್ ಸೈಂಟಿಸ್ಟ್ ಇಂಡಿಯಾ – (ಸ್ಪೇಸ್ ಸೈನ್ಸ್) ಗೆ ಕುಮಾರಿ ಯಶಾ ಜೈನ ಆಯ್ಕೆ.
ಸಿಂಧನೂರು.ಪೆ.23- ನಗರದ ಹೊರವಲಯದಲ್ಲಿರುವ ಹೊಸಳ್ಳಿ (ಇ.ಜೆ) ಕ್ರಾಸ್ ಗಂಗಾವತಿ ರಸ್ತೆಯಲ್ಲಿರುವ, ಐಕ್ಯೂ ಇಂಟರ್‌ನ್ಯಾಶನಲ್ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ, ಯಶಾ ಜೈನ್ ತಂದೆ ಅನಿಲ್ ಕುಮಾರ ಎಂಬ ವಿದ್ಯಾರ್ಥಿನಿ 2021-22ನೇ ಸಾಲಿನಲ್ಲಿ ನಡೆದ ಯಂಗ್ ಸೈನ್ಸಟಿಸ್ಟ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ಸ್ಪರ್ಧೆಯಲ್ಲಿ ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳ ನಡುವೆ ನಡೆದ ಸ್ಪರ್ಧೆಯಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ, ಯಶಾ ಜೈನ್ ಸ್ಪೇಸ್ ಸೈನ್ಸ್ ವಿಭಾಗದ ಸ್ಪರ್ಧೆಯಲ್ಲಿ ಮೊದಲ ಹಾಗೂ ಎರಡನೇ ಹಂತದಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕದಿಂದ ಅಂತಿಮ ಹಂತಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ. ಇವರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಕಾಲೇಜಿನ ಆಡಳಿತ ಮಂಡಳಿಯು ಅಧ್ಯಕ್ಷರು ಮಾತನಾಡಿ ನಮ್ಮ ವಿದ್ಯಾಲಯಕ್ಕೆ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿತಂದ ವಿದ್ಯಾರ್ಥಿನಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕುಮಾರಿ ಯಶಾ ಜೈನ್ ಅವರ ಅಂತಿಮ ಹಂತದಲ್ಲಿ ದೇಶದ ಒಟ್ಟು 10 ವಿದ್ಯಾರ್ಥಿಗಳೊಂದಿಗೆ ನಡೆಯುವ ಸ್ಪರ್ಧೆಗೆ ಶುಭ ಹಾರೈಸಿ ದೇಶ ಹಾಗೂ ರಾಜ್ಯಕ್ಕೆ ಕೀರ್ತಿತರಲಿ ಹಾಗೂ ಮುಂದೆ ದಿನಮಾನಗಳಲ್ಲಿ ರಾಷ್ಟ್ರಾದ್ಯಂತ ಉನ್ನತ ಸ್ಥಾನಮಾನ ಪಡೆಯಲೆಂದು ಎಂದು ಶುಭ ಹಾರೈಸಿದ್ದಾರೆ…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
