ಶಾಲೆಯಲೊಂದು ಮಕ್ಕಳ ಸಂತೆ !!ಶಾಲೆಯಲೊಂದು ಮಕ್ಕಳ ಸಂತೆ !!

ಶಾಲೆಯಲೊಂದು ಮಕ್ಕಳ ಸಂತೆ !!

ವಿಜಯ ನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಗ್ರಾಮದ ಶ್ರೀ ಅಬ್ದುಲ್ ಕಲಾಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಹಾಗೂ ಶಾಲೆಯ ಮುಖ್ಯಸ್ಥರು ಮತ್ತು ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷತೆಯೆಂದರೆ ಮಕ್ಕಳಿಂದ ವ್ಯಾಪಾರ ಮಾಡಿಸುವುದು, ಮಕ್ಕಳಿಗೆ ವ್ಯವಹಾರದ ಜ್ಞಾನವನ್ನ ಪ್ರಯೋಗಿಕವಾಗಿ ಕಲಿಸಲಾಯಿತು. ಮಕ್ಕಳಿಗೆ ಇಂದೊಂದು ವಿಶೇಷ ಅನುಭವ. ಕೊಳ್ಳುವಿಕೆ,ಮಾರುವಿಕೆ, ಬಂಡವಾಳ, ಉತ್ಪಾದನೆ ಮುಂತಾದ ವಿವರಗಳು ಮಕ್ಕಳಿಗೆ ಪ್ರಯೋಗಿಕವಾಗಿ ತಿಳಿಸಲಾಯಿತು. ಈ ಒಂದು ಮಕ್ಕಳ ಸಂತೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಸಂತೆಯಲ್ಲಿ ನಡೆಯುವಂತಹ ವ್ಯವಹಾರದ ಬಗ್ಗೆ ಹಾಗೂ ಮಾರಾಟದ ಬಗ್ಗೆ ಅರಿವು ಮೂಡಿಸಲಾಯಿತು. ವಿಶೇಷವೇನೆಂದರೆ ಮಕ್ಕಳೇ ಈ ಸಂತೆಯಲ್ಲಿ ತರಕಾರಿ ಹಣ್ಣು ದಿನಸಿ ಇತ್ಯಾದಿ ಪದಾರ್ಥಗಳನ್ನು ತಾವೇ ಮಾರಾಟ ಮಾಡಿ ಅನುಭವವನ್ನು ಪಡೆದುಕೊಂಡರು. ಊರಿನ ನಾಗರಿಕರು ಬಂದು ಸಂತೆಯಲ್ಲಿ ತರಕಾರಿ ಹಣ್ಣು ದಿನಸಿಯನ್ನು ಖರೀದಿ ಮಾಡಿದರು ಈ ಒಂದು ವಿಶೇಷ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿರುವಂತಹ ಶಾಲೆಯ ಮುಖ್ಯಸ್ಥದಾರದಂತಹ ಟಿ ನಜೀರ್ ರವರಿಗೆ ಊರಿನ ಹಿರಿಯ ನಾಗರಿಕರ ಎಲ್ಲರೂ ಅಭಿನಂದನೆಯನ್ನು ಸಲ್ಲಿಸಿದರು.


ವರದಿ : ಅಜಯ.ಚ.ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend