ಮಹಾಲಿಂಗಪುರ ಪಟ್ಟಣದ ಜನರಿಗೆ ಮತ್ತೆ ಆತಂಕ ಸೃಷ್ಟಿಸಿದ ಕಳ್ಳರ ಗುಂಪು
ಮಹಾಲಿಂಗಪುರ ಪಟ್ಟಣದಲ್ಲಿ ಕಳದೆ ವರ್ಷವಷ್ಟೆ ಹತ್ತಾರು ಜನ ಕಳ್ಳರ ಗುಂಪು ಜನರ ನಿದ್ದೆ ಗೆಡಿಸಿತ್ತು ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಬೀಗ ಹಾಕಿದ ಮನೆಗಳಿಗೆ ಮತ್ತು ಚಿನ್ನದ ಅಂಗಡಿಗಳಿಗೆ ಕನ್ನ ಹಾಕಿದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೇರೆ ಸಿಕ್ಕು ಮನೆಗಳು ಸಹ ಕಳ್ಳತನವಾಗಿದ್ದವು ಆದರೆ ಇದು ಮಾಸುವ ಮುನ್ನವೇ ಮತ್ತೆ ನಿನ್ನೆ ರಾತ್ರಿ ನಾಲ್ಕು ಜನರ ಕಳ್ಳರ ಗುಂಪು ಬಸವ ನಗರ ಬಡಾವಣೆಯಲ್ಲಿ ಕಂಡಿದ್ದು ಜನರಲ್ಲಿ ಆತಂಕ ಸೃಷ್ಟಿಮಾಡಿದೆ. ಕಾರಣ ತಡ ರಾತ್ರಿ ಸರಿಸುಮಾರು ಹನ್ನೆರಡು, ಒಂದು ಗಂಟೆಗಳ ಸಮಯದಲ್ಲಿ ಕಳ್ಳರು ಬೀಗ ಹಾಕಿದ ಮನೆಯೊಂದನ್ನು ಒಡೆಯುವಾಗ ಮಲ್ಲಪ್ಪ ಗಿರಿಸಾಗರ ಎಂಬುವರ ಕಣ್ಣಿಗೆ ಬಿದಿದ್ದಾರೆ ತಕ್ಷಣ ಈ ವ್ಯಕ್ತಿ ಕೂಗಾಡಲು ಶುರು ಮಾಡಿದ್ದಾನೆ ಗಾಬರಿಕೊಂಡ ಕಳ್ಳರ ಗುಂಪು ಇವರ ಮೇಲೆ ಕಲ್ಲು ಎಸೆದು ಓಡಿ ಹೋಗಿರುವ ಘಟನೆ ನಡೆದಿದೆ ಇವರ ಕೂಗಾಟ ಕೇಳಿ ಎದ್ದು ಬಂದ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ ಅಷ್ಟರಲ್ಲಿ ಕಳ್ಳರ ಗ್ಯಾಂಗ್ ಕಾಲ್ಕಿತ್ತು ಓಡಿ ಹೋಗಿದ್ದಾರೆ ಆದರೆ ಎರಡನೇ ಬಾರಿ ಕಳ್ಳರು ಪಟ್ಟಣಕ್ಕೆ ಬಂದಿದ್ದು ಇದರಿಂದ ಜನರಲ್ಲಿ ತಿವ್ರ ಆತಂಕವನ್ನು ಉಂಟು ಮಾಡಿದೆ. ಮಹಾಲಿಂಗಪುರ ಪೋಲಿರು ಕಳ್ಳರ ಗ್ಯಾಂಗ್ ಹಿಡಿಯಲು ಬಲೆ ಬಿಸಿದ್ದಾರೆ.

ವರದಿ.ಬಸವರಾಜ ನಂದೇಪನವರ
ರಬಕವಿ ಬನಹಟ್ಟಿ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
