ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಹೋಬಳಿಯ ಗಡಿಗ್ರಾಮವಾದ ಹಿರೇಕುಂಬಳಗುಂಟೆ ಅಂಗನವಾಡಿ “ಎ” ಕೇಂದ್ರ ಹಾಗೂ “ಬಿ”.ಕೇಂದ್ರಗಳಲ್ಲಿ “ಪೂರ್ಣಾವಧಿ ಕೇಂದ್ರಗಳ ಪ್ರಾರಂಭೋತ್ಸವ” ಕಾರ್ಯಕ್ರಮ ಜರುಗಿತು.
ಕಳೆದ ಒಂದು ವರುಷದಿಂದ ಕೊರೋ ನದ ಪ್ರಯುಕ್ತ ಮಕ್ಕಳು ಕೇಂದ್ರಕ್ಕೆ ಆಗಮನ ಪ್ರತಿದಿನ ಇರುತ್ತಿದ್ದಿಲ್ಲ ಇಂದಿನಿಂದ ಕೇಂದ್ರ ಗಳಿಗೆ ನಿರಂತರ ಹಾಜರಾಗಿ ಮಕ್ಕಳುಕಲಿಕೆ ಹಾಗೂ ಉಪಹಾರಗಳನ್ನು ಪಡೆದು ದೈಹಿಕ, ಮಾನಸಿಕ,ಭೌದ್ಧಿಕ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ಸು ಖಂಡಿತ ಎಂದು ಪಿಡಿಓ ಬಸವರಾಜ ನುಡಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ, ಎಚ್ ಮಾಯಮ್ಮ ಮಾತನಾಡಿ ಕೋರೋನ ಹಿನ್ನೆಲೆಯಲ್ಲಿ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮನೆಗಳಿಗೆ ಹೋಗಿ ವಿತರಿಸಲಾಗುತ್ತಿತ್ತು, ಈಗ ಸರ್ಕಾರದ ಆದೇಶದಂತೆ ಮಕ್ಕಳಿಗೆ ಉಪಹಾರವನ್ನು ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾಗುವುದು, ಹಾಗೂ ಅಂಗನವಾಡಿ ಶಾಲೆಯಲ್ಲಿ ಪೂರ್ಣಾವಧಿ ಕಾಲ, ಕಾರ್ಯ ನಿರ್ವಹಿಸುತ್ತಿವೆ ಎಂದು ಮಾತನಾಡಿದರು,
ಎರುಡು ಕೇಂದ್ರದ ಕಾರ್ಯಕರ್ತೆಯರು ತಮ್ಮ ತಮ್ಮ ಕೇಂದ್ರಗಳನ್ನು ತಳಿರುತೋರಣಗಳಿಂದ ಅಲಂಕಾರಮಾಡಿ ಪುಷ್ಪಗುಚ್ಚ ನೀಡಿ ಮಕ್ಕಳನ್ನು ಕೇಂದ್ರಗಳಿಗೆ ಆಹ್ವಾನಿಸಲಾಯಿತು.
ಈ ಸಂರ್ಧಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ವಿಶ್ವನಾಥಗೌಡರು
ಸಾಹಿತ್ಯ ಹಾಗೂ ಶಿಕ್ಷಣಪ್ರೇಮಿ ಯುವಬರಹಗಾರ ಜಿ.ಎಂ. ನಾಗರಾಜ ಆರೋಗ್ಯ ಇಲಾಖೆಯ ಶ್ರೀಮತಿ ಮಾಲತಿ, ಯುವ ಬಿಗ್ರೇಡ್ ಸಂಘದ ಅಧ್ಯಕ್ಷರು ಸದಸ್ಯರು, ಶ್ರೀ ಶಕ್ತಿ ಸಂಘದ ಮಹಿಳೆಯರು.ಅಂಗನವಾಡಿ ಸಹಾಯಕರು ಮಕ್ಕಳ ತಾಯಂದಿರು,ಮಕ್ಕಳು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
