ಪಿಯು ಹೆಚ್ಚುವರಿ ಉಪನ್ಯಾಸಕರಿಗಿಲ್ಲ ಇನ್ನೂ ರಾಜ್ಯ ಸರ್ಕಾರದಿಂದ, ಆದೇಶ…!!!

ಪಿಯು ಹೆಚ್ಚುವರಿ ಉಪನ್ಯಾಸಕರಿಗಿಲ್ಲ ಇನ್ನೂ ರಾಜ್ಯ ಸರ್ಕಾರದಿಂದ, ಆದೇಶ.
ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಆರು ವರ್ಷ ಕಳೆದರು ಯಾಕೆ ಇನ್ನೂ ಅವರಿಗೆ ಸೂಕ್ತ ರೀತಿಯ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳುತ್ತಿಲ್ಲ ನಮ್ಮ ರಾಜ್ಯಸರ್ಕಾರದ ವ್ಯವಸ್ಥೆಯಲ್ಲಿ ಸುಮಾರು ಆರು ವರ್ಷಗಳನ್ನು ಕಳೆದ ಅರ್ಜಿದಾರರಿಗಿಲ್ಲ ಒಂದು ಸೂಕ್ತ ವ್ಯವಸ್ಥೆಯ
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚುರುಕುಗೊಂಡಿರುವ ಬೆನ್ನಲ್ಲೇ ಪದವಿಪೂರ್ವ ಶಿಕ್ಷಣ ಇಲಾಖೆ ತನ್ನ ಒಂದು ವ್ಯಾಪ್ತಿಯ
ಪಿಯು ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು.
ವಿವಿಧ ಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ವಿಷಯ ಮತ್ತು ಕಾಲೇಜುಗನುಗುಣವಾಗಿ ಇಲಾಖೆಯು ಬಿಡುಗಡೆ ಮಾಡಿದ್ದು ಎಲ್ಲಾ ಹುದ್ದೆಗಳನ್ನು ಶೀಘ್ರದಲ್ಲಿ ಬರ್ತಿಯನ್ನು ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ 2016ರಲ್ಲಿ 1230ಉಪನ್ಯಾಸಕರ ಉದ್ದೆಗಳಿಗೆ ಅರ್ಜಿಯನ್ನು ಕರೆದಿದ್ದು, ಆ ಸಮಯದಲ್ಲಿ ಕಡಿಮೆ ಪ್ರಾಮಾಣದಲ್ಲಿ ಅರ್ಜಿಗಳು ಹಾಕಿರುವ ಅಭ್ಯಾರ್ಥಿಗಳನ್ನು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2018ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು. ಈ ಒಂದು ಪಟ್ಟಿಯಲ್ಲಿರುವ ಮತ್ತು ಹೆಚ್ಚುವರಿಯಾಗಿ ಶೇ.10ರಷ್ಟು ಉಪನ್ಯಾಸಕರನ್ನು ಕೂಡ ನೇಮಕಾತಿ ಆದೇಶ ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಿಂದಿನ ಸಚಿವರಾಗಿದ್ದ, ಎಸ್, ಸುರೇಶಕುಮಾರ್ ಅವರನ್ನು ಭೇಟಿ ಮಾಡಿದ ಅಭ್ಯರ್ಥಿಗಳು ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ವಯೋಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ನೇಮಕಾತಿ ಮಾಡಿಕೊಳ್ಳಲು ಅನಿವಾರ್ಯವಾಗಿದೆ ಎಂದು ಮನವಿಯನ್ನು ಕೊಟ್ಟಿದ್ದರು ಸಹ ಇಲ್ಲಿಯವರೆಗೆ ರಾಜ್ಯಸರ್ಕಾರವು ಸರಿಯಾದ ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳದೆ ಇರುವುದನ್ನು ನೋಡಿದರೆ ಇದರ ಇಂದಿನ ಉದ್ದೇಶವಾದರೂ ಏನು ಎಂಬುದೇ ನೋವುಂಡ ಅಭ್ಯರ್ಥಿಗಳ ಒಂದು ನೀರವ ಮೌನ ಉದ್ದೇಶ ಇನ್ನಾದರೂ ಈ ಒಂದು ನಿಲುವನ್ನು ಬಿಟ್ಟು ಹಲವು ರಾಜ್ಯಗಳಿಂದ ಈ ಇಂದಿನ ಶಿಕ್ಷಣ ಸಚಿವರಿಗೆ ಮನವಿಯನ್ನು ಕೊಟ್ಟರು ಸಹ ಏನು ಪ್ರಯೋಜನವಾಗಿಲ್ಲ ರಾಜ್ಯಸರ್ಕಾರ ತನ್ನ ಒಂದು ಮನಸ್ಸಿಗೆ ಪ್ರಶ್ನೆಯನ್ನು ಮಾಡಿಕೊಳ್ಳಲಿ ಅಧಿಕಾರಕ್ಕೆ ಬಂದು ಸುಮಾರು 2 ವರ್ಷ ಕಳೆದರು ಎಷ್ಟು ಸರ್ಕಾರಿ ಹುದ್ದೆಗಳನ್ನು ತುಂಬಿದೆ ಅಂತ ಇವತ್ತು ಸಹ ಹಲವು ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರು ತುಂಬುತ್ತಿಲ್ಲ, ಈ ಇಂದಿನ ಸರ್ಕಾರಗಳು ಮಾಡಿ ಹೋಗಿರುವ ಅನುಮೋದನೆಯನ್ನು ಪೂರ್ಣ ಗೊಳಿಸುತ್ತಿಲ್ಲ ಏನು ಈ ಒಂದು ಮೌನ ನಡೆ ಇನ್ನಾದರೂ ನಿಲ್ಲಿಸಲಿ ಹಾಗೂ ಹೆಚ್ಚುವರಿ ಉಪನ್ಯಾಸಕರ ಹುದ್ದೆಗಳ ನೇಮಕವನ್ನು ಪೂರ್ಣಗೊಳಿಸಲು ಮುಂದಾಗಲಿ ಎನ್ನುವುದೇ ಎಲ್ಲರ ಮೂಲ ಉದ್ದೇಶ…

ವರದಿ.ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend