ಬಳ್ಳಾರಿ :-ವಿವಿಧೆಡೆ ವಿದ್ಯುತ್ ವ್ಯತ್ಯಯ ಫೆ.10 ರಂದು..!!

ವಿವಿಧೆಡೆ ವಿದ್ಯುತ್ ವ್ಯತ್ಯಯ ಫೆ.10 ರಂದು..
ಬಳ್ಳಾರಿ ನಗರ ವ್ಯಾಪ್ತಿಯ 110ಕೆ.ವಿ ಮೋಕಾ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಬರುವ 11ಕೆ.ವಿ ಫೀಡರ್ ಮಾರ್ಗಗಳಲ್ಲಿ ಬಸ್ಬಾರ್ ಮತ್ತು ಜಿ.ಓ.ಎಸ್ ನಿರ್ವಹಣೆ ಕಾರ್ಯದ ನಿಮಿತ್ತ 11ಕೆ.ವಿ ಕೃಷಿ ಪಂಪ್‍ಸೆಟ್ ಮಾರ್ಗಗಳಲ್ಲಿ ಫೆ.10 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬಳ್ಳಾರಿ ಜೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷಿ ಬಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.10 ರಂದು ಕೃಷಿ ಪಂಪ್‍ಸೆಟ್ ಮಾರ್ಗಗಳಿಗೆ ಬೆ.9 ರಿಂದ ಸಂಜೆ 4ರವರೆಗೆ ಇದ್ದ ಸಮಯವನ್ನು ಬದಲಾವಣೆ ಮಾಡಿ ಬೆಳಗಿನಜಾವ 2 ಗಂಟೆಯಿಂದ 6 ರವರೆಗೆ ವಿದ್ಯುತ್ ಸರಬರಾಜನ್ನು ಮಾಡಲಾಗುವುದು.
ವ್ಯತ್ಯಯವಾಗಲಿರುವ ಪ್ರದೇಶಗಳು: ಎಫ್-1 ಐಪಿ ಫೀಡರ್‍ನ ಮೋಕಾ, ಬಿ.ಡಿ.ಹಳ್ಳಿ, ಜಿ.ನಿ.ಹಳ್ಳಿ ಮತ್ತು ಇತರೆ ಗ್ರಾಮಗಳು. ಎಫ್-2 ಐಪಿ ಫೀಡರ್‍ನ ಗೋಟೂರು, ವಣೆನೂರು, ಬಾಣಪುರ, ಮಸೀದಿಪುರ, ಕೆ.ಕೆ.ಹಾಳ್, ಗುಡದೂರು, ಎಫ್-4 ಐಪಿ ಫೀಡರ್‍ನ ಶಿವಪುರ, ಅಶೋಕನಗರ ಕ್ಯಾಂಪ್, ಸಂಗನಕಲ್ಲು, ಸಿರಿವಾರ, ಕಪ್ಪಗಲ್ಲು ಮತ್ತು ಇತರೆ ಗ್ರಾಮದ ಪಂಪ್‍ಸೆಟ್‍ಗಳು, ಹಾಗೂ ಎಫ್-5 ಐಪಿ ಫೀಡರ್‍ನ ನೀರಿನ ಸ್ಥಾವರಗಳಾಗಿವೆ.
ಆದ್ದರಿಂದ ರೈತರು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ..

ವರದಿ. ವಿರೇಶ್ ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend